LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು ಅರಮನೆಯಲ್ಲಿ ವೈಭವದ ಆಯುಧ ಪೂಜೆ ಸಂಭ್ರಮ: ಚಂಡಿ ಹೋಮದೊಂದಿಗೆ ಧಾರ್ಮಿಕ ವಿಧಿ-ವಿಧಾನ ಆರಂಭ

ಮೈಸೂರು : ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು, ಐತಿಹಾಸಿಕ ಮೈಸೂರು ಅರಮನೆಯಲ್ಲಿಯೂ ರಾಜ ಪರಂಪರೆಯಂತೆ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅರಮನೆಯಲ್ಲಿ ಈಗಾಗಲೇ ಚಂಡಿ ಹೋಮ ಆರಂಭಗೊಂಡಿದ್ದು, ರಾಜವಂಶಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಭಕ್ತಿ-ಶ್ರದ್ಧೆಯಿಂದ ನೆರವೇರುತ್ತಿವೆ. ಪೂರ್ಣಕುಂಭ ಸ್ವಾಗತದೊಂದಿಗೆ ಮುತ್ತೈದೆಯರು, ರಾಜ ಪರಿವಾರದವರು ಹಾಗೂ ಪಟ್ಟದ ಆನೆ, ಹಸು, ಕುದುರೆ ಮತ್ತು ಒಂಟೆಗಳೊಂದಿಗೆ ಮಂಗಳವಾದ್ಯದ ಮೇಳದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯ ಭವ್ಯ ಮೆರವಣಿಗೆಯು ಕೋಡಿ ಸೋಮೇಶ್ವರ ದೇಗುಲದವರೆಗೆ ಸಾಗಿತು.

ದೇಗುಲದಲ್ಲಿ ಆಯುಧಗಳಿಗೆ ಎಣ್ಣೆ ಪೂಜೆ ನೆರವೇರಿಸಿದ ಬಳಿಕ ಖಾಸಗಿ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ಮರಳಿ ತರಲಾಗಿದ್ದು, ನಿಗದಿತ ಮುಹೂರ್ತದಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ. ತದನಂತರ ಅರಮನೆಯ ಸವಾರಿ ತೊಟ್ಟಿಯಲ್ಲಿ ಪಟ್ಟದ ಪ್ರಾಣಿಗಳು, ವಾಹನಗಳು ಹಾಗೂ ರಾಜಮನೆತನದ ಕತ್ತಿ, ಈಟಿ, ಗುರಾಣಿ ಸೇರಿದಂತೆ ಇತರೆ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಸಾಂಪ್ರದಾಯಿಕ ಆಚರಣೆಯು ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಕಂಗೊಳಿಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!