LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಎಫ್‌ಎಕ್ಸ್‌ನಲ್ಲಿ ತಪ್ಪುಗಳನ್ನು ಹುಡುಕಬೇಡಿ: ‘ರಾಮಾಯಣ’ ಟೀಕೆಗಳ ಬಗ್ಗೆ ಯಶ್ ಮನವಿ

ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ನಟಿಸುವುದರ ಜತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಚಿತ್ರದ ವಿಎಫ್‌ಎಕ್ಸ್ (VFX) ಟೀಕೆಗಳ ಕುರಿತು ಹೈದರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಟನಾ ವೃತ್ತಿಯ ಜತೆಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಸಾಹಸವನ್ನು ಕೊಂಡಾಡಿರುವ ಅವರು, ದೃಶ್ಯಗಳ ಕುರಿತು ಸಣ್ಣಪುಟ್ಟ ತಪ್ಪುಗಳನ್ನು ಹುಡುಕದೆ ಮುಕ್ತ ಮನಸ್ಸಿನಿಂದ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚಿತ್ರದ ದೃಶ್ಯ ವೈಭವ ಹಾಗೂ ನಿರ್ಮಾಪಕರ ಶ್ರಮದ ಕುರಿತು ಮಾತನಾಡಿದ ಯಶ್, ನಮಿತ್ ಮಲ್ಹೋತ್ರಾ ಅವರು ತಮ್ಮ ಪ್ರತಿಷ್ಠೆ ಹಾಗೂ ಕೋಟ್ಯಂತರ ಹಣವನ್ನು ಪಣಕ್ಕಿಟ್ಟು ಈ ಬೃಹತ್ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ನಾವು ಕಳೆದುಕೊಂಡರೆ ಭಾರತೀಯ ಸಿನಿಮಾವನ್ನು ಮತ್ತೆ ಮುಂಚೂಳಿಗೆ ತರಲು ವರ್ಷಗಳೇ ಹಿಡಿಯುತ್ತದೆ. ಆದ್ದರಿಂದ ವಿಎಫ್‌ಎಕ್ಸ್‌ನಲ್ಲಿ ಸಣ್ಣಪುಟ್ಟ ಲೋಪಗಳನ್ನು ಹುಡುಕುವುದನ್ನು ಬಿಟ್ಟು, ಎಲ್ಲರೂ ಒಟ್ಟಾಗಿ ನಿಂತು ಭಾರತೀಯ ಚಿತ್ರರಂಗದ ಈ ಪ್ರಯತ್ನವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ತಮ್ಮ ವ್ಯವಹಾರದಲ್ಲಿ ನೆಲೆಸಿದ್ದ ನಮಿತ್, ಭಾರತೀಯ ಸಿನಿಮಾಗಳಿಗೆ ಜಾಗತಿಕ ಮನ್ನಣೆ ತರಬೇಕು ಎಂಬ ಏಕೈಕ ಕಾರಣಕ್ಕಾಗಿ ಈ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಅವರ ದೃಢತೆಯನ್ನು ಯಶ್ ಸ್ಮರಿಸಿದ್ದಾರೆ.

ರಾಮಾಯಣ ಬಿಡುಗಡೆ ದಿನಾಂಕ: ನಾಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಎರಡು ಭಾಗಗಳಾಗಿ ಮೂಡಿಬರುತ್ತಿರುವ ಈ ಬ್ರಹ್ಮಾಂಡ ಸಿನಿಮಾದ ಮೊದಲ ಭಾಗವು ಜಾಗತಿಕ ಮಟ್ಟದಲ್ಲಿ ನವೆಂಬರ್ 5, 2026ರಂದು ತೆರೆಕಾಣಲಿದೆ. ಹಾಗೂ ಇದರ ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಯುವತಿ! ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ ಆವಿಷ್ಕಾರಕ್ಕೆ ಜಾಗತಿಕ ಮನ್ನಣೆ100 ವರ್ಷವಾದರೂ ಬೆನ್ನುಮೂಳೆ ಗಟ್ಟಿಯಾಗಿರಬೇಕಾ? ಮಲಗುವಾಗ ಈ ಒಂದು ತಪ್ಪು ಮಾಡಬೇಡಿ!ಏಷ್ಯನ್ ಪ್ಯಾರಾ ಗೇಮ್ಸ್: ಈಜು ಸ್ಪರ್ಧೆಯಲ್ಲಿ ಕನ್ನಡಿಗ ನಿರಂಜನ್ ಮುಕುಂದನ್‌ಗೆ ಕಂಚಿನ ಪದಕ, ಡಿಸಿಎಂ ಅಭಿನಂದನೆಭಾರತವನ್ನು ವಿಭಜಿಸುವ ಪ್ರಯತ್ನಗಳನ್ನು ಎದುರಿಸಿ, ಶತ್ರುಗಳನ್ನು ಸೋಲಿಸಬೇಕು! ವಿಜಯದಶಮಿ ದಿನ ಪ್ರಧಾನಿ ಮೋದಿ ಸಂದೇಶSDRF ಪರಿಹಾರ ಮೊದಲು ಕೊಡಲು ಆಗ್ರಹ: ಸರಕಾರದಿಂದ ರೈತರಿಗೆ ದೋಖಾ- ಛಲವಾದಿ ನಾರಾಯಣಸ್ವಾಮಿಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನಿಗೆ ಟಾರ್ಗೆಟ್! ಶೂಟರ್‌ಗಳಿಂದ ಸ್ಪೋಟಕ ಮಾಹಿತಿಗ್ರಾಹಕರಿಗೆ ಗುಡ್ ನ್ಯೂಸ್: 3 ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್ವಿಜಯದಶಮಿ ದಿನವೇ ಎರಡನೇ ಮಗಳ ಹೆಸರನ್ನು ಘೋಷಿಸಿದ ದೀಪಿಕಾ–ರಣವೀರ್! ಏನದು ಹೆಸರು?BREAKING: ಈಜಿಪ್ಟ್ ಮರುಭೂಮಿ ಹೆದ್ದಾರಿಯಲ್ಲಿ ಭೀಕರ ದುರಂತ ; 13 ಮಂದಿ ಪ್ರವಾಸಿಗರ ದುರ್ಮರಣ !ಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನನ್ನು ಟಾರ್ಗೆಟ್ ಮಾಡಲು ಸಂಚು! ಶೂಟರ್‌ಗಳಿಂದ ಸ್ಫೋಟಕ ಮಾಹಿತಿ