LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲರೂ ಒಟ್ಟಾಗಿ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಬೇಕು. ಇದು ಯಾರದೋ ಒಬ್ಬರ ಜವಾಬ್ದಾರಿಯಲ್ಲ. ಇದು ಎಲ್ಲರ ಜವಾಬ್ದಾರಿ‌.‌ ನಾನು ಒಬ್ಬರ ಮೇಲೆಯೆ ಹೊರೆ ಹಾಕಲು ಇಷ್ಟಪಡುವುದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.

"ರೈತರು ಕಬ್ಬು ಬೆಳೆದರೆ ಕಾರ್ಖಾನೆ ಇರಲಿದೆ. ಕಾರ್ಖಾನೆಗಳು ಸಹ ನಷ್ಟವಾಗದಂತೆ ಕಬ್ಬನ್ನು ಅರೆಯಬೇಕಿದೆ. ಆಗ ಇಬ್ಬರೂ ಉಳಿಯುತ್ತಾರೆ.‌ ಇದು ಎಲ್ಲರ ಬದುಕಿನ ಪ್ರಶ್ನೆ. ರೈತರ, ಸಕ್ಕರೆ ಕಾರ್ಖಾನೆಗಳ, ಸರ್ಕಾರದ ಸಮಸ್ಯೆಗಳು ಏನಿವೆ ಎಂದು ನಾವು ಒಟ್ಟಾಗಿ ಚರ್ಚಿಸಬೇಕಿದೆ" ಎಂದರು.

"ಬರ ಪರಿಹಾರ ವಿಚಾರವಾಗಿ ಚರ್ಚಿಸಲು ಕೇಂದ್ರ ಸರ್ಕಾರದ ಬಳಿ ಸಮಯ ಕೇಳಿದ್ದೇನೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಜನಪ್ರತಿನಿಧಿಗಳಿಗೆ ಕಬ್ಬು ಬೆಳಗಾರರ ಸಮಸ್ಯೆಗಳ ಚರ್ಚೆಯ ವಿಚಾರ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಬಳಿಯು ಪ್ರತ್ಯೇಕವಾಗಿ ಮಾತಾಡಬೇಕಿದೆ. ಕೇಂದ್ರ ಮಂತ್ರಿಗಳ ಬಳಿಯೂ ಮಾತನಾಡುತ್ತೇನೆ.‌ ಅವರೂ ಸಹ ತಮ್ಮ ಕೈಲಾದಷದ್ಟು ಒಳ್ಳೆಯ ಕೆಲಸ‌ ಮಾಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಬಗೆಹರಿಸಬೇಕಿದೆ" ಎಂದು ಹೇಳಿದರು.

"ಸಭೆ ನಡೆಸಲು ಎಲ್ಲರ ಅನುಕೂಲಗಳಿಗೆ ಹೊಂದಿಕೆಯಾಗುವ ದಿನಾಂಕವನ್ನು ನಿಗದಿ ಮಾಡಲಾಗುವುದು. ಬೆಳಗಾವಿಯಲ್ಲಿ ರೈತರಿಗೆ ಮಾತು ಕೊಟ್ಟು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರು ಆ‌‌ ಭಾಗದ ಮಂತ್ರಿಗಳಿಗೆ ಆಹ್ವಾನಿಸಲಾಗುವುದು" ಎಂದು ಹೇಳಿದರು‌.

ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಸಚಿವರಿಗೆ ಸೂಚನೆ

ಸಚಿವರೊಂದಿಗೆ ಸೋಮವಾರ ಸಭೆ ನಡೆಸಿದ ವಿಚಾರದ ಬಗ್ಗೆ ಕೇಳಿದಾಗ, "ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಚುನಾವಣಾ ಆಯೋಗದವರು 27 ರಂದು ಸಹ ಹೊಸ ಮತದಾರರ ಪಟ್ಟಿ ನೀಡುತ್ತಾರೆ. ಡಿ. 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್‌ನ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಬೆಂಗಳೂರು ನಗರದಲ್ಲಿ ಸಿದ್ದತೆ ಮಾಡಿಕೊಳ್ಳಬೇಕಲ್ಲವೇ? ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಮಾಡಬಹುದು. ಹೀಗಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರಿಗೆ ಹೇಳಿದ್ದೇನೆ" ಎಂದರು.

"ಪಂಚಾಯತ್ ಮಟ್ಟದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣ ಕೊಡಬೇಕೆಂದು ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್‌ ವೇಳೆ ತಿರ್ಮಾನವಾಗಿತ್ತು. ಹೀಗಾಗಿ ಶಾಸಕರಿಗೆ ಅನುದಾನಕ್ಕೆ ವರದಿ ಸಲ್ಲಿಸಲು ಹೇಳಿದ್ದೇನೆ ಹಾಗೂ ಕರೆ ಮಾಡಿ ಹಬ್ಬಕ್ಕೆ ಶುಭಕೋರಿದ್ದೇನೆ. ಅನುದಾನ ವಿಚಾರ ಬೆಂಗಳೂರು ಶಾಸಕರನ್ನ ಕರೆದು ಮಾತಾಡಿದ್ದೇನೆ‌" ಎಂದರು.

ರಾಜ್ಯದ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು

"ರಾಜ್ಯದ ಸಮಸ್ತ ಜನತೆಗೂ ಆಯುಧ ಪೂಜೆಯ ಶುಭಾಶಯಗಳು.‌ ನಾಡಿನ‌ ಜನರಿಗೆ ಒಳಿತಾಗಲಿ. ರೈತ, ಕಾರ್ಮಿಕ, ಶ್ರಮಿಕ ವರ್ಗಗಳ ಪರಿಕರಗಳಿಗೆ ಪೂಜೆ ಸಲ್ಲಿಸಲಾಗಿದೆ. ಸರ್ಕಾರಿ, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಎಲ್ಲರ ಪ್ರಯಾಣ ಸುಖಕರವಾಗಿ, ಸುರಕ್ಷಿತವಾಗಿರಲಿ ಎಂದು ಚಾಮುಂಡಿಯ ಆಶೀರ್ವಾದ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ" ಎಂದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!