LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾವೇರಿಯಲ್ಲಿ 'ಪ್ರೇಮದ ಊರಲಿ' ಸಿನೆಮಾ ಟಿಕೆಟ್ ಗಾಗಿ ಮಹಿಳೆಯರ ನಡುವೆ ಹೊಡೆದಾಟ : ವಿಡಿಯೋ ವೈರಲ್!

ಹಾವೇರಿ : ಇತ್ತೀಚಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್ ಸಂಸ್ಕೃತಿ ಮತ್ತು ಒಟಿಟಿ ಹಾವಳಿಯಿಂದಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಕನ್ನಡ ಸಿನಿಮಾಗಳನ್ನು ವೀಕ್ಷಿಸಲು ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಇದಕ್ಕೆ ಅಪವಾದವೆಂಬಂತೆ ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರ ಮನ ಗೆದ್ದಿರುವ 'ಪ್ರೇಮದ ಊರಲಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಜನಪ್ರಿಯತೆ ಯಾವ ಮಟ್ಟಿಗೆ ತಲುಪಿದೆ ಎಂದರೆ, ಥಿಯೇಟರ್‌ಗಳತ್ತ ಜನರೇ ಬರುತ್ತಿಲ್ಲ ಎಂದು ಚಿಂತೆಯಲ್ಲಿದ್ದ ಮಾಲೀಕರಿಗೆ ಈಗ ಪ್ರೇಕ್ಷಕರನ್ನು ನಿಯಂತ್ರಿಸುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ಸಿನಿಮಾದ ಈ ಅತಿಯಾದ ಕ್ರೇಜ್‌ನಿಂದಾಗಿ ಹಾವೇರಿಯ ಮಾಗಾವಿ ಚಿತ್ರಮಂದಿರದ ಬಳಿ ಅಕ್ಟೋಬರ್ 22ರ ಗುರುವಾರ ರೋಚಕ ಘಟನೆಯೊಂದು ನಡೆದಿದೆ. ಟಿಕೆಟ್ ಪಡೆಯುವ ಕಾತುರದಲ್ಲಿ ಮುಗಿಬಿದ್ದ ಜನರ ನಡುವೆ, ಇಬ್ಬರು ಮಹಿಳೆಯರ ಮಧ್ಯೆ ಆರಂಭವಾದ ಚಿಕ್ಕದಾದ ವಾಗ್ವಾದವು ಕ್ಷಣಾರ್ಧದಲ್ಲಿ ಉಲ್ಬಣಗೊಂಡು ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದವರ ನಡುವೆ ಉಂಟಾದ ನೂಕಾಟದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋದ ಪ್ರಕಾರ, ಮಹಿಳೆಯರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಜಡೆ ಎಳೆದಾಡಿಕೊಂಡಿದ್ದಾರೆ. ಈ ಜಗಳವು ಮಾಂಗಲ್ಯ ಸರವನ್ನು ಕೀಳುವ ಹಂತಕ್ಕೆ ತಲುಪಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಮಹಿಳೆಯರ ವರ್ತನೆಯಿಂದ ಕಂಗೆಟ್ಟ ಕೆಲ ಪುರುಷರು ಈ ಮಹಿಳಾ ಮಣಿಯರನ್ನು ಸುಮ್ಮನಾಗಿಸಿ, ಜಗಳವನ್ನು ಶಾಂತಪಡಿಸಲು ಮುಂದಾಗಿದ್ದಾರೆ. ಹೀಗೆ ಪರಿಹಾರಕ್ಕೆ ಮುಂದೆ ಬಂದ ಪುರುಷರ ಮೇಲೆ ಕೂಡ ಇವರು ಹರಿಹಾಯ್ದಿದ್ದು, ಕೆಟ್ಟ-ಕೊಳಕದಾಗಿ ಬಯ್ಯುತ್ತಾ, ಕೈ-ಕೈ ಮೀಲಾಯಿಸಲು ಮುಂದಾಗಿದ್ದಾರೆ.

https://twitter.com/i/status/2113218858081206739

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!