LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಾಳಿ ಬೀಸಿದ ಮಾತ್ರಕ್ಕೆ ಪರ್ವತ ಅಲುಗಾಡಲು ಸಾಧ್ಯವೇ? ತಾವೇ ಸಿಂಹ ಎಂದು ಮೆರೆಯುತ್ತಿದ್ದವರು, ಈಗ ತಮಿಳುನಾಡಿನಲ್ಲಿ ಜಿರಳೆಗಳಂತೆ ಓಡಾಡುತ್ತಿದ್ದಾರೆ: ಅಣ್ಣಾಮಲೈಗೆ ತಮಿಳಿಸೈ ಸೌಂದರರಾಜನ್ ಟಾಂಗ್

ಚೆನ್ನೈ: ತಮಿಳುನಾಡು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಬೆಂಬಲಿಸುದಾಗಿ ಘೋಷಿಸಿದ ಬೆನ್ನಲ್ಲೇ ಮಾಜಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಡಾ. ತಮಿಳಿಸೈ ಸೌಂದರರಾಜನ್ ಪರೋಕ್ಷವಾಗಿ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಾ. ತಮಿಳಿಸೈ ಸೌಂದರರಾಜನ್ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈಅವರನ್ನು ಟಾರ್ಗೆಟ್ ಮಾಡಿ ಕೆಲ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದು, ಅವರ ಟ್ವೀಟ್ ಭಾರಿ ವೈರಲ್ ಆಗಿದೆ.

ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಒಂದು ವಾರದ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ನಾಯಕರನ್ನು ಜೈಲಿಗೆ ಹಾಕಿದರೆ, ಅವರ ಜನಪ್ರಿಯತೆ ಹೆಚ್ಚುವುದಿಲ್ಲವೇ, ದೆಹಲಿ ಪೊಲೀಸರು ನಡೆದುಕೊಂಡ ರೀತಿ ಆಕ್ಷೇಪಾರ್ಹ ಎಂದು ಅಣ್ಣಾಮಲೈ ಹೇಳಿದ್ದರು. ಇದು, ಬಿಜೆಪಿ ವಲಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈಗ, ತಮಿಳಿಸೈ ಸೌಂದರರಾಜನ್ ನೀಡಿರುವ ಕೇಲ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಮಾಜಿ ತೆಲಂಗಾಣದ ರಾಜ್ಯಪಾಲರೂ ಆಗಿರುವ ತಮಿಳಿಸೈ ಸೌಂದರರಾಜನ್ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೇ ಎಕ್ಸ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ, ಪರೋಕ್ಷವಾಗಿ, ಬಿಜೆಪಿಯನ್ನು ಎಷ್ಟೇ ಟಾರ್ಗೆಟ್ ಮಾಡಲು ನೋಡಿದರೂ, ಅದು ಪರ್ವತವಾಗಿಯೇ ಉಳಿಯುತ್ತದೆಯೇ ಹೊರತು, ಮರಳದಿಬ್ಬವಾಗುವುದಿಲ್ಲ ಎಂದು ಇವರು ಬರೆದುಕೊಂಡಿದ್ದಾರೆ.

”ಗಾಳಿ ಜೋರಾಗಿ ಬೀಸಿ ತನ್ನ ದಿಕ್ಕನ್ನು ಬದಲಾಯಿಸಿಕೊಳ್ಳಬಹುದು. ಆದರೆ, ಪರ್ವತವನ್ನು ಅಲುಗಾಡಿಸಲು ಸಾಧ್ಯವೇ? ಪರ್ವತವು ಪರ್ವತವಾಗಿಯೇ ಉಳಿಯುತ್ತದೆಯೇ ಹೊರತು ಮರಳಿನ ದಿಬ್ಬವಾಗುವುದಿಲ್ಲ. ಹಿಂದೊಮ್ಮೆ, ತಾನೇ ಸಿಂಹ ಎಂದು ಬೀಗುತ್ತಿದ್ದವರ ಪೈಕಿ ಕೆಲವರು ಈಗ, ತಮಿಳುನಾಡಿನ ಸಣ್ಣ ಕಾಕ್ರೋಚ್’ಗಳಂತೆ ಬಣ್ಣ ಬದಲಾಯಿಸಿಕೊಳ್ಳುತ್ತಿದ್ದಾರೆ”.

“ಪರ್ವತ ಗಾಳಿ ಬೀಸಿದ ಕಡೆ, ರೂಪ ಬದಲಾಯಿಸಿಕೊಳ್ಳುವುದಿಲ್ಲ, ಮರಳಿನ ದಿಬ್ಬ ಮಾತ್ರ ರೂಪ ಬದಲಾಯಿಸಿಕೊಳ್ಳುವುದು. ತಾವೇ ಸಿಂಹ ಎಂದು ಮೆರೆಯುತ್ತಿದ್ದವರು, ಈಗ ತಮಿಳುನಾಡಿನಲ್ಲಿ ಜಿರಳೆಗಳಂತೆ ಓಡಾಡುತ್ತಿದ್ದಾರೆ”ಎಂದು ತಮಿಳಿಸೈ ಸೌಂದರರಾಜನ್, ಟ್ವೀಟ್ ಮಾಡಿದ್ದಾರೆ.

ತಮಿಳಿಸೈ ಸೌಂದರರಾಜನ್ ಅವರ ಪೋಸ್ಟಿಗೆ ನಾನಾ ರೀತಿಯ ಕಾಮೆಂಟುಗಳು ಬಂದಿವೆ. ಅದರಲ್ಲಿ ಒಂದು ಹೀಗಿದೆ, ’ನೀವು ವಿದ್ಯಾವಂತರು, ಆದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ನೀವು ಸರಿಯಾದ ದಾರಿಯನ್ನು ಹಿಡಿಯಲಿಲ್ಲ ಎನ್ನುವುದು ನಿಮ್ಮದೇ ಪಾರ್ಟಿಯಲ್ಲಿ ಇರುವ ಎಲ್ಲರಿಗೂ ಗೊತ್ತಿದೆ. ನಿಮ್ಮದೇ ತಪ್ಪು ಇರುವಾಗ, ನೀವು ಇನ್ನೊಬ್ಬರಿಗೆ ಅಭಿಪ್ರಾಯ ಮಂಡಿಸುವುದು ಸರಿಯಲ್ಲ’ ಎನ್ನುವ ಪ್ರತಿಕ್ರಿಯೆ ಬಂದಿದೆ.

ಸಿಂಹವನ್ನು ಟೀಕಿಸಿದ ತಕ್ಷಣ ಅದರ ಗಾಂಭೀರ್ಯತೆ ಕಮ್ಮಿಯಾಗುವುದಿಲ್ಲ. ಕಾಲ ಬದಲಾದಂತೆ, ನಿಜವಾದ ನಾಯಕ ಯಾರು? ಮುಖವಾಡ ಹಾಕಿಕೊಂಡವರು ಯಾರು? ಎನ್ನುವುದನ್ನು ತಿಳಿಯಲು ಜಾಸ್ತಿ ಸಮಯ ಬೇಕಿಲ್ಲ ಎಂದು ಇನ್ನೊಬ್ಬರು, ತಮಿಳಿಸೈ ಸೌಂದರರಾಜನ್ ಪೋಸ್ಟಿಗೆ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ತಮಿಳು ನಾಡಿನಲ್ಲಿ ಬಿಜೆಪಿ ವರ್ಸಸ್ ಅಣ್ಣಾಮಲೈ ವಾಕ್ಸಮರಗಳು ಆರಂಭವಾಗಿರುವುದಂತು ನಿಜ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!