LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗತವೈಭವದ ಘಮ ಹೊಂದಿರೋ 'ಮೈಸೂರು ಸ್ಟುಡಿಯೋ' ಚಿತ್ರದ ಪೋಸ್ಟರ್ ರಿಲೀಸ್!

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹೊಸ ಪ್ರಯೋಗದ ಕಥೆಯೊಂದಿಗೆ 'ಮೈಸೂರು ಸ್ಟುಡಿಯೋ' ಸಿನಿಮಾ ಸಿದ್ಧವಾಗುತ್ತಿದ್ದು, ವಿಜಯದಶಮಿಯ ಶುಭ ಸಂದರ್ಭದಲ್ಲಿ ಈ ಚಿತ್ರದ ಆಕರ್ಷಕ ಪೋಸ್ಟರ್ ಬಿಡುಗಡೆಯಾಗಿದೆ. ಹೈ೫ ಸ್ಟುಡಿಯೋಸ್, ಪಿಕೆ ಪಿಕ್ಚರ್ಸ್ ಹಾಗೂ ಆರ್‌ಡಿ ಫಿಲ್ಮ್ಸ್ ಅಂಡ್ ಮೀಡಿಯಾ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಮೈಸೂರು ಮಹಾರಾಜರ ಕಾಲದ ನಂಟನ್ನು ಹೊಂದಿರುವ ಕುತೂಹಲಕಾರಿ ಕಥಾವಸ್ತುವನ್ನು ಒಳಗೊಂಡಿದೆ. ಛಾಯಾಗ್ರಾಹಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರವೀಣ್ ಎಂ. ಪ್ರಭು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ನೂರೈವತ್ತು ವರ್ಷಗಳ ಹಿಂದೆ ಮೈಸೂರು ಮಹಾರಾಜರಿಂದ ಕುಟುಂಬವೊಂದಕ್ಕೆ ಉಡುಗೊರೆಯಾಗಿ ಸಿಕ್ಕ ಅಪರೂಪದ ಕ್ಯಾಮೆರಾ, ಅದಕ್ಕೆ ಅಂಟಿಕೊಂಡಿರುವ ನಾಲ್ಕು ತಲೆಮಾರುಗಳ ನೆನಪುಗಳು ಹಾಗೂ ಇಂದಿನ ಹೊಸ ತಲೆಮಾರಿನ ಹತ್ತು ವರ್ಷದ ಹುಡುಗನೊಬ್ಬನ ಹಂಬಲದ ಸುತ್ತ ಈ ಕಥೆ ಸಾಗುತ್ತದೆ. ಸಾಮಾನ್ಯವಾಗಿ ಛಾಯಾಚಿತ್ರಗಳು ಹಳೆಯ ನೆನಪುಗಳನ್ನು ಕಾಯ್ದಿಡುವುದಷ್ಟೇ ಅಲ್ಲದೆ, ಕೆಲವೊಮ್ಮೆ ಅಚ್ಚರಿಗಳಿಗೂ ಕಾರಣವಾಗುತ್ತವೆ ಎಂಬುದನ್ನು ಈ ಸಿನಿಮಾ ಬಿಚ್ಚಿಡಲಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಒಂದು ಸವಾಲಿನ ಹಾಗೂ ಸಂಕೀರ್ಣವಾದ ಕಥೆಯನ್ನು ಸಮರ್ಥವಾಗಿ ದೃಶ್ಯರೂಪಕ್ಕೆ ತಂದಿರುವ ಸುಳಿವು ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಛಾಯಾಗ್ರಾಹಕರಾಗಿ ಸಕ್ರಿಯರಾಗಿರುವ ಪ್ರವೀಣ್ ಎಂ. ಪ್ರಭು ಅವರು ಈ ಹಿಂದೆ 'ರಂಕಲ್ ರಾಟೆ', 'ಕಪಾಲ', 'ಮತ್ಸ್ಯಗಂಧ' ಮುಂತಾದ ಜನಮೆಚ್ಚುಗೆ ಪಡೆದ ಚಿತ್ರಗಳಿಗೆ ಕ್ಯಾಮೆರಾ ಕೈಚಳಕ ತೋರಿದ್ದರು. ನಿರ್ದೇಶನದ ಹಂಬಲದಿಂದ ಅವರು ಈ ಹಿಂದೆ ನಿರ್ದೇಶಿಸಿದ್ದ ಎರಡು ಕಿರುಚಿತ್ರಗಳ ಪೈಕಿ ಒಂದಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು. ಅದೇ ಪ್ರಶಸ್ತಿ ವಿಜೇತ ಕಥೆಯನ್ನು ವಿಸ್ತರಿಸಿ, ಪ್ರಸ್ತುತ 'ಮೈಸೂರು ಸ್ಟುಡಿಯೋ' ಚಿತ್ರವಾಗಿ ರೂಪಿಸಿರುವುದು ವಿಶೇಷ.

ಸದ್ಯ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪ್ರಸ್ತುತ ಸಂಗೀತ ಸಂಯೋಜನೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಪ್ರವೀಣ್ ಕವಿತಾ, ಸತ್ಯ ಶ್ರೀನಿವಾಸನ್ ಹಾಗೂ ದಿವಾಕರ್ ದಯಾಳ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್ ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್ ಹಾಗೂ ಡ್ಯಾನಿ ಕಣಿಕರಾಜ್ ಮುಂತಾದವರ ತಾರಾಗಣವಿದೆ. ಪ್ರಸನ್ನ ಕೇಶವ ಕೆ.ಎಸ್. ಸಂಗೀತ ನಿರ್ದೇಶನ, ಲಿಂಗರಾಜ್ ಇತಿಹಾಸ್, ಅವಿನಾಶ್ ಕಳಸ ಮತ್ತು ಪ್ರವೀಣ್ ಸಂಭಾಷಣೆ, ಕೆ. ಯೇಸು ಸಂಕಲನ ಹಾಗೂ ಖುದ್ದು ಪ್ರವೀಣ್ ಎಂ. ಪ್ರಭು ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಲ್ಯಾಂಡ್ ಆಯ್ತು, ಈಗ ವೆಲ್ಲಿಂಗ್ಟನ್‌ನಲ್ಲೂ ವರುಣನದ್ದೇ ಆರ್ಭಟ: ಎರಡನೇ ಏಕದಿನ ಪಂದ್ಯಕ್ಕೆ ಕಂಟಕವಾದ ಹವಾಮಾನ!ಸೇವೆಯಲ್ಲಿರುವ ಅಗ್ನಿವೀರರಿಗೆ ಮಾತ್ರ ಹೊಸ ಬದಲಾವಣೆ‘ರಾಮಾಯಣ’ ಸಿನಿಮಾ ನೋಡಿ ಭಾವುಕರಾದ ಅನುಪಮ್ ಖೇರ್: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಸಿನಿಮಾ ಎಂದ ನಟ!ಮುಂಬೈ ಅಂತರ ಶಾಲಾ ಬಾಸ್ಕೆಟ್‌ಬಾಲ್ ಧಮಾಕಾ: ಡಾನ್ ಬೊಸ್ಕೊ ಮಣಿಸಿ ಟ್ರೋಫಿ ಎತ್ತಿಹಿಡಿದ ಅಂಡೇರಿಯಾ ಎಂಪಿಎಸ್!Motorola Signature 27 Snapdragon 8 Elite Extreme Gen 6 ಮತ್ತು 200MP ಟೆಲಿಫೋಟೋ ಲೆನ್ಸ್‌ನೊಂದಿಗೆ ಅನಾವರಣಬಾಲಿವುಡ್ ಅಂಗಳದಲ್ಲಿ ಹೊಸ ಲವ್ ಸ್ಟೋರಿ: ಗೆಳತಿ ಜೊತೆ ಮನೀಶ್ ಮಲ್ಹೋತ್ರಾ ಪಾರ್ಟಿಯಲ್ಲಿ ಮಾಧುರಿ ದೀಕ್ಷಿತ್ ಮಗ!ಬ್ಯಾಂಕ್ ಲಾಕರ್’ ನಲ್ಲಿ ಇಟ್ಟಿದ್ದ ₹47 ಲಕ್ಷದ ಚಿನ್ನಾಭರಣ ನಾಪತ್ತೆ! ಮಹಿಳೆಯ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ!ರಾಮಾಯಣ’ದಲ್ಲಿ ರಾಮನಾಗಿ ರಣಬೀರ್, ರಾವಣನಾಗಿ ಯಶ್; ಇಬ್ಬರಲ್ಲಿ ಶ್ರೀಮಂತ ನಟ ಯಾರು?ಕೈ ಕೈ ಹಿಡಿದು ಬಂದ ಐಶ್ವರ್ಯಾ ರೈ–ಅಭಿಷೇಕ್ ಜೋಡಿ; ರೊಮ್ಯಾಂಟಿಕ್ ಕ್ಷಣ ವೈರಲ್! ವಿಚ್ಛೇದನದ ವದಂತಿಗಳಿಗೆ ಬ್ರೇಕ್?ಆಸೀಸ್ ಕ್ರಿಕೆಟರ್ ಗೆ ಕೊಕೇನ್ ಶಾಕ್: ತಪ್ಪು ಒಪ್ಪಿಕೊಂಡು ನಿಷೇಧ ಪೂರ್ಣಗೊಳಿಸಿದ ಕ್ರಿಸ್ ಲಿನ್!