LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರಿನ ಯಲ್ಲದಕೆರೆಯಲ್ಲಿ 'ಅವೈಜ್ಞಾನಿಕ ರೋಡ್ ಹಂಪ್ಸ್‌'ನಿಂದ ಸಾಲು ಸಾಲು ಅಪಘಾತ: ಕಣ್ಮುಚ್ಚಿ ಕುಳಿತ 'ಹೆದ್ದಾರಿ ಪ್ರಾಧಿಕಾರ'

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಬಳಿ ಹೆದ್ದಾರಿ ರಸ್ತೆ ಪ್ರಾಧಿಕಾರವು ಅಳವಡಿಸಿರುವ ಅವೈಜ್ಞಾನಿಕ ರೋಡ್ ಹಂಪ್ಸ್ (ವೇಗ ನಿಯಂತ್ರಕ) ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ವಾಹನ ಸವಾರರ ಪಾಲಿಗೆ ಸಂಚಕಾರವಾಗಿ ಪರಿಣಮಿಸಿದೆ.

ಯಲ್ಲದಕೆರೆಯ ಜ್ಞಾನಜ್ಯೋತಿ ಪ್ರೌಢಶಾಲೆಯ ಬಳಿ ಕಳೆದು ಒಂದು ವರ್ಷದ ಹಿಂದೆ ರೋಡ್ ಹಂಪ್ಸ್ ಹಾಕಲಾಗಿತ್ತು. ಈ ಹಿಂದೆ ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಂಪ್ಸ್ ನಿರ್ಮಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಗ್ರಾಮಸ್ಥರ ಸಾಲು ಸಾಲು ಮನವಿ ಹಾಗೂ ಪ್ರತಿಭಟನೆಗೆ ಮಣಿದು ಹೆದ್ದಾರಿ ರಸ್ತೆ ಪ್ರಾಧಿಕಾರವು ಹಂಪ್ಸ್ ನಿರ್ಮಾಣ ಮಾಡಿತಾದರೂ, ಅದನ್ನು ಅವೈಜ್ಞಾನಿಕವಾಗಿ ಹಾಕಿ ನಿರ್ಲಕ್ಷ್ಯ ವಹಿಸಿದೆ.

news_1792912483_0_232.webp

ಬಸ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಕಳೆದ ಶುಕ್ರವಾರ ಮೈಸೂರಿನಿಂದ ಶಿರಡಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ರಾತ್ರಿ ವೇಳೆ ಚಲಿಸುತ್ತಿದ್ದಾಗ, ಯಲ್ಲದಕೆರೆ ಶಾಲೆಯ ಬಳಿಯಿದ್ದ ಹಂಪ್ಸ್ ಚಾಲಕನಿಗೆ ಸರಿಯಾಗಿ ಕಾಣಿಸಿಲ್ಲ. ಪರಿಣಾಮವಾಗಿ ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 21 ಪ್ರಯಾಣಿಕರಿದ್ದು, ಅವರಲ್ಲಿ 15 ರಿಂದ 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅಪಘಾತ ಮಾತ್ರವಲ್ಲದೆ, ರಾತ್ರಿ ವೇಳೆ ಹಂಪ್ಸ್ ಕಾಣಿಸದೆ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಹ ನಡೆದಿವೆ.

ಅಳಿಸಿ ಹೋದ ಬಿಳಿ ಬಣ್ಣ, ಸೂಚನಾ ಫಲಕ ಅಳವಡಿಸದೇ ನಿರ್ಲಕ್ಷ್ಯ

ಹೆದ್ದಾರಿ ರಸ್ತೆ ಪ್ರಾಧಿಕಾರವು ರಸ್ತೆಗೆ ಹಂಪ್ಸ್ ಹಾಕಿದೆಯಾದರೂ, ಅದಕ್ಕೆ ಕಡ್ಡಾಯವಾಗಿ ಅಳವಡಿಸಬೇಕಾದ ಬಿಳಿಯ ಬಣ್ಣದ ಪಟ್ಟಿ (ವರ್ಟಿಕಲ್ ಸ್ಟ್ರೈಪ್ಸ್) ಹಾಕಿದ್ದರೂ ಅದು ಕಾಣುತ್ತಿಲ್ಲ. ಮುನ್ನೆಚ್ಚರಿಕಾ ಸೂಚನಾ ಫಲಕಗಳನ್ನು (Caution Boards) ಹಾಕದೆ ಹಾಗೇ ಕೈಬಿಡಲಾಗಿದೆ. ರಾತ್ರಿ ವೇಳೆಯಲ್ಲಿ ದೂರದಿಂದ ಬರುವ ವಾಹನ ಸವಾರರಿಗೆ ಈ ಹಂಪ್ಸ್ ಇರುವುದು ಕೊನೆಯ ಕ್ಷಣದವರೆಗೂ ತಿಳಿಯದಿರುವುದೇ ಈ ಎಲ್ಲಾ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

news_1792912483_1_667.webp

ಮನವಿ ಮಾಡಿದರೂ ಸರಿಪಡಿಸದ ಪೊಲೀಸರು

ಯಲ್ಲದಕೆರೆಯ ಪ್ರೌಢಶಾಲೆಯ ಬಳಿಯಲ್ಲಿ ರೋಡ್ ಹಂಪ್ಸ್ ಹಾಕಲಾಗಿದೆ. ಆದರೇ ಅದಕ್ಕೆ ಬಿಳಿಯ ಬಣ್ಣದ ಪಟ್ಟಿಯನ್ನು ಹಾಕಿ ಎಷ್ಟೋ ದಿನಗಳೇ ಆಗಿವೆ. ಇದು ರಾತ್ರಿ ಕಾಣುವುದೇ ಇಲ್ಲ. ಜೊತೆಗೆ ರೋಡ್ ಹಂಪ್ಸ್ ಬಗ್ಗೆ ರಸ್ತೆಯ ಎಲ್ಲಿಯೂ ಸೂಚನಾ ಫಲಕವನ್ನೇ ಅಳವಡಿಸಿಲ್ಲ. ಹೀಗಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಜ್ಞಾನಜ್ಯೋತಿ ಪ್ರೌಢಶಾಲೆಯಿಂದ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೇ ಈವರೆಗೂ ಸಂಬಂಧಿತ ಇಲಾಖೆಯ ಗಮನಕ್ಕೆ ತಂದು ರೋಡ್ ಹಂಪ್ಸ್ ಬಗ್ಗೆ ಬಿಳಿ ಪಟ್ಟಿ ಕಾಣುವಂತೆ ಬಣ್ಣ, ಸೂಚನ ಫಲಕ ಅಳವಡಿಸುವಂತ ಕೆಲಸವನ್ನು ಪೊಲೀಸರು ಮಾಡದೇ ಇರುವುದು ವಿಪರ್ಯಾಸವೇ ಸರಿ.

ತಕ್ಷಣವೇ ಸೂಚನಾ ಫಲಕಕ್ಕೆ ಸ್ಥಳೀಯರ ಆಗ್ರಹ

ಹಂಪ್ಸ್ ನಿರ್ಮಿಸಿ ಕೇವಲ ಅರ್ಧ ಕೆಲಸ ಮಾಡಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವೈಖರಿಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸುವ ಮುನ್ನ ಹೆದ್ದಾರಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಹಂಪ್ಸ್‌ಗೆ ವೈಜ್ಞಾನಿಕವಾಗಿ ಬಿಳಿಯ ಬಣ್ಣ ಬಳಿಯಬೇಕು ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಹಂಪ್ಸ್ ಇದೆ ನಿಧಾನವಾಗಿ ಚಲಿಸಿ ಎನ್ನುವಂತ ಸ್ಪಷ್ಟವಾಗಿ ಕಾಣುವ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಯಲ್ಲದಕೆರೆ ಗ್ರಾಮಸ್ಥರು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌದಿ ಅರೇಬಿಯಾದ ರಿಯಾದ್ ಹಾಗೂ ದಮ್ಮಾಮ್ ಗೆ ನವೆಂಬರ್ 7ರವರೆಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದುಲಿಂಗಾಯತ, ವೀರಶೈವ ಒಂದೇ ನಾಣ್ಯದ ಎರಡು ಮುಖ: ಸಚಿವ ಈಶ್ವರ ಖಂಡ್ರೆಸೌದಿ ಅರೆಬಿಯಾದ ರಿಯಾದ್ ಹಾಗೂ ದಮ್ಮಾಮ್ ಗೆ ನವೆಂಬರ್ 7ರವರೆಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದುಬೆಂಗಳೂರಿನ IT ಕಂಪನಿಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸಿದ್ರೆ ಕಠಿಣ ಕ್ರಮ : ಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್!ಜನವರಿಯೊಳಗೆ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ: ಸಚಿವ ಈಶ್ವರ ಖಂಡ್ರೆದಸರಾ ಸಾಕಾನೆಗಳಿಗೆ ಹೆಚ್ಚಿನ ತಾಲೀಮು ಅಗತ್ಯ: ಸಚಿವ ಈಶ್ವರ ಖಂಡ್ರೆಡಾ.ಭೀಮಣ್ಣ ಖಂಡ್ರೆಗೆ 'ಕರ್ನಾಟಕ ರತ್ನ' ನೀಡಲು ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಗ್ರಾಮೀಣ ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ: ಸಚಿವ ಈಶ್ವರ ಖಂಡ್ರೆನಟ ಧನ್ವೀರ್‌ಗೆ 10 ಕೋಟಿ ರೂ. ನೀಡಿದ್ದರೇ ವಿಜಯಲಕ್ಷ್ಮಿ? ದರ್ಶನ್ ಪತ್ನಿ-ಧನ್ವೀರ್ ನಡುವಿನ ಗಲಾಟೆಗೆ ಹೊಸ ತಿರುವು!ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ, ಕೆಲವರು ಹೇಳಿ ಕೊಟ್ಟಿದನ್ನು ಮಾತ್ರ ಹೇಳಿದ್ದೇನೆ : ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಸ್ಪೋಟಕ ಹೇಳಿಕೆ!