LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ, ಕೆಲವರು ಹೇಳಿ ಕೊಟ್ಟಿದನ್ನು ಮಾತ್ರ ಹೇಳಿದ್ದೇನೆ : ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಸ್ಪೋಟಕ ಹೇಳಿಕೆ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸೌಂಡ್ ಮತ್ತು ಸ್ಟಿಂಗ್‌ ವೀಡಿಯೋ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ವೀಡಿಯೋದಲ್ಲಿದ್ದ ಮಹಿಳೆಯು ಸಿಸಿಬಿ ಮುಂಭಾಗ ಹೊಸ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಪ್ರಕರಣದಿಂದ ಬಹುತೇಕ ಬಿಗ್ ರಿಲೀಫ್ ಸಿಕ್ಕಂತಾಗಿದೆ. ತನಿಖೆ ವೇಳೆ ಮಹಿಳೆಯು ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ನಾನು ಅವರನ್ನು ಭೇಟಿಯಾಗೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಯಾರೋ ಹೇಳಿಕೊಟ್ಟ ಮಾತುಗಳನ್ನು ಆಧರಿಸಿ ಮತ್ತು ವೀಡಿಯೋ ಮಾಡಿದವರ ಮಾರ್ಗದರ್ಶನದಂತೆ ತಾನು ಹಾಗೆ ಹೇಳಿಕೆ ನೀಡಿದ್ದಾಗಿ ಆಕೆ ಬಹಿರಂಗಪಡಿಸಿದ್ದಾರೆ.

ದ್ವೇಷಪೂರಿತ ಉದ್ದೇಶದಿಂದ ಹಾಗೂ ರಾಜಕೀಯ ಅಥವಾ ವೈಯಕ್ತಿಕ ಲಾಭ ಪಡೆಯುವ ಸಲುವಾಗಿ ಈ ವೀಡಿಯೋವನ್ನು ಯೋಜಿತವಾಗಿ ಚಿತ್ರೀಕರಿಸಲಾಗಿದೆ ಎಂಬ ಅನುಮಾನಗಳು ಈಗ ಬಲವಾಗಿ ವ್ಯಕ್ತವಾಗಿವೆ. ಒಂದು ವೇಳೆ ಮಹಿಳೆಯು ಸಿದ್ದರಾಮಯ್ಯ ಅವರ ವಿರುದ್ಧವೇ ಅಧಿಕೃತವಾಗಿ ದೂರು ಅಥವಾ ಹೇಳಿಕೆ ನೀಡಿದ್ದರೆ ಅವರ ವಿರುದ್ಧ ಎಫ್‌ಐಆರ್ ಅಥವಾ ಕೇಸ್ ದಾಖಲಾಗಬೇಕಿತ್ತು. ಆದರೆ ಮಹಿಳೆ ಮಾಜಿ ಸಿಎಂ ವಿರುದ್ಧ ಯಾವುದೇ ದೂರು ನೀಡಿಲ್ಲದಿರುವುದರಿಂದ, ಈ ಸ್ಟಿಂಗ್‌ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ರೀತಿಯ ಕಾನೂನು ತೊಡಕುಗಳಿಲ್ಲ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿದೆ.

ಸಿಸಿಬಿ ಪೊಲೀಸರ ಮುಂದೆ ನೀಡಿದ ಈ ಹೇಳಿಕೆಯನ್ನು ಸದ್ಯಕ್ಕೆ ಅಧಿಕೃತ ಕೇಸ್ ಫೈಲ್‌ಗೆ ಸೇರಿಸಲಾಗಿಲ್ಲ. ಏಕೆಂದರೆ, ನಿಯಮಾವಳಿಗಳ ಪ್ರಕಾರ ಮಹಿಳೆಯು ಸಿಸಿಬಿ ನೀಡಿದ ಹೇಳಿಕೆಯನ್ನೇ ನ್ಯಾಯಾಲಯದ (ಕೋರ್ಟ್) ಮುಂಭಾಗದಲ್ಲೂ ನೀಡಬೇಕಾಗುತ್ತದೆ. ಕೋರ್ಟ್‌ನಲ್ಲೂ ಮಹಿಳೆ ಇದೇ ಹೇಳಿಕೆಯನ್ನು ಪುನರಾವರ್ತಿಸಿದರೆ, ಎರಡೂ ಹೇಳಿಕೆಗಳನ್ನು ಪರಿಶೀಲಿಸಿ ಕೇಸ್ ಫೈಲ್‌ಗೆ ಸೇರಿಸಲಾಗುತ್ತದೆ. ನ್ಯಾಯಾಲಯದಲ್ಲೂ ಒಂದೇ ರೀತಿಯ ಹೇಳಿಕೆ ದಾಖಲಾದರೆ, ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಿಂದ ಸಂಪೂರ್ಣವಾಗಿ 'ಕ್ಲೀನ್‌ಚಿಟ್' ಸಿಗುವುದು ಬಹುತೇಕ ಖಚಿತವಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌದಿ ಅರೇಬಿಯಾದ ರಿಯಾದ್ ಹಾಗೂ ದಮ್ಮಾಮ್ ಗೆ ನವೆಂಬರ್ 7ರವರೆಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದುಲಿಂಗಾಯತ, ವೀರಶೈವ ಒಂದೇ ನಾಣ್ಯದ ಎರಡು ಮುಖ: ಸಚಿವ ಈಶ್ವರ ಖಂಡ್ರೆಸೌದಿ ಅರೆಬಿಯಾದ ರಿಯಾದ್ ಹಾಗೂ ದಮ್ಮಾಮ್ ಗೆ ನವೆಂಬರ್ 7ರವರೆಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದುಬೆಂಗಳೂರಿನ IT ಕಂಪನಿಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸಿದ್ರೆ ಕಠಿಣ ಕ್ರಮ : ಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್!ಜನವರಿಯೊಳಗೆ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ: ಸಚಿವ ಈಶ್ವರ ಖಂಡ್ರೆದಸರಾ ಸಾಕಾನೆಗಳಿಗೆ ಹೆಚ್ಚಿನ ತಾಲೀಮು ಅಗತ್ಯ: ಸಚಿವ ಈಶ್ವರ ಖಂಡ್ರೆಡಾ.ಭೀಮಣ್ಣ ಖಂಡ್ರೆಗೆ 'ಕರ್ನಾಟಕ ರತ್ನ' ನೀಡಲು ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯಗ್ರಾಮೀಣ ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ: ಸಚಿವ ಈಶ್ವರ ಖಂಡ್ರೆನಟ ಧನ್ವೀರ್‌ಗೆ 10 ಕೋಟಿ ರೂ. ನೀಡಿದ್ದರೇ ವಿಜಯಲಕ್ಷ್ಮಿ? ದರ್ಶನ್ ಪತ್ನಿ-ಧನ್ವೀರ್ ನಡುವಿನ ಗಲಾಟೆಗೆ ಹೊಸ ತಿರುವು!ಸಿದ್ದರಾಮಯ್ಯರನ್ನು ಭೇಟಿಯಾಗಿಲ್ಲ, ಕೆಲವರು ಹೇಳಿ ಕೊಟ್ಟಿದನ್ನು ಮಾತ್ರ ಹೇಳಿದ್ದೇನೆ : ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಸ್ಪೋಟಕ ಹೇಳಿಕೆ!