ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರಿ ವಿಜಯ ದುರ್ಗಾ ಅವರ ಪುತ್ರ ಹಾಗೂ ಟಾಲಿವುಡ್‌ನ ಪ್ರಸಿದ್ಧ ನಟ ಸಾಯಿ ದುರ್ಗಾ ತೇಜ್ ತಮ್ಮ ನಿಶ್ಚಿತಾರ್ಥದ ನಂತರ ಭಾವಿ ಪತ್ನಿ ಕಿರನ್ ಅವರೊಂದಿಗಿನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನ ಹಿಲ್ಟನ್ ರೆಸಾರ್ಟ್‌ನಲ್ಲಿ ನವೆಂಬರ್ 5 ರಂದು ತೀರ ಆಪ್ತರ ಸಮ್ಮುಖದಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥ ಸಮಾರಂಭದ ನಂತರ, ನವೆಂಬರ್ 7 ರಂದು ಸಾಯಿ ದುರ್ಗಾ ತೇಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿರನ್ ಜೊತೆ ಕೈಹಿಡಿದು ನಡೆಯುತ್ತಿರುವ ಸುಂದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ “ಐ ಲವ್ ಯು” ಎಂದು ಸರಳ ಹಾಗೂ ಅರ್ಥಪೂರ್ಣವಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥದ ಶುಭಸಮಾರಂಭಕ್ಕಾಗಿ ಸಾಯಿ ದುರ್ಗಾ ತೇಜ್ ಸಾಂಪ್ರದಾಯಿಕ ಬಿಳಿ ಬಣ್ಣದ ಔಟ್‌ಫಿಟ್ ಧರಿಸಿದ್ದರೆ, ಕಿರನ್ ಅವರು ಮರಕತ ಹಸಿರು ಬಣ್ಣದ ಕಾಂಟ್ರಾಸ್ಟ್ ಬಾರ್ಡರ್ ಇರುವ ಅರ್ಧ ಸೀರೆಯಲ್ಲಿ (ಹ್ಯಾಫ್ ಸೀರೆ) ಕಂಗೊಳಿಸಿದರು.
ಈ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ-ಸುರೇಖಾ ದಂಪತಿ, ಗ್ಲೋಬಲ್ ಸ್ಟಾರ್ ರಾಮ್ ಚರಣ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ, ವರುಣ್ ತೇಜ್-ಲಾವಣ್ಯಾ ತ್ರಿಪಾಠಿ, ನಿಹಾರಿಕಾ ಕೊನಿಡೇಲ, ವೈಷ್ಣವ್ ತೇಜ್ ಹಾಗೂ ಪವನ್ ಕಲ್ಯಾಣ್ ಅವರ ಮಕ್ಕಳಾದ ಅಕಿರಾ ನಂದನ್ ಮತ್ತು ಆದ್ಯಾ ಸೇರಿದಂತೆ ಮೆಗಾ ಹಾಗೂ ಅಲ್ಲು ಕುಟುಂಬದ ಪ್ರಮುಖ ಸದಸ್ಯರು ಭಾಗವಹಿಸಿ ನೂತನ ಜೋಡಿಗೆ ಹಾರೈಸಿದ್ದಾರೆ.