LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಾಸ್ ಏಂಜಲೀಸ್‌ನಲ್ಲಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ: ವಿಶೇಷ ಫೋಟೋಗಳು ವೈರಲ್

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಸದ್ದು ಮಾಡಿರುವ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪತಿ ನಿಕ್ ಜೋನಾಸ್ ಹಾಗೂ ಮುದ್ದಿನ ಮಗಳು ಮಾಲ್ತಿ ಮೇರಿ ಜೋನಾಸ್ ಜತೆಗೆ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ. ವಿದೇಶದಲ್ಲಿದ್ದರೂ ಭಾರತೀಯ ಸಂಪ್ರದಾಯ ಹಾಗೂ ಹಬ್ಬಗಳನ್ನು ಮರೆಯದೆ ಆಚರಿಸುವ ಪ್ರಿಯಾಂಕಾ, ಈ ಬಾರಿಯ ದೀಪಾವಳಿ ಸಂಭ್ರಮದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಬ್ಬದ ಕೆಲವು ನೆನಪಿನ ಚಿತ್ರಗಳನ್ನು ಹಂಚಿಕೊಂಡಿರುವ ನಟಿ, “ನಮ್ಮ ಕ್ಯಾಮರಾ ರೋಲ್‌ನಿಂದ ಕೆಲವು ದೀಪಾವಳಿ ವಿಶೇಷ ಕ್ಷಣಗಳು. ನಿಮ್ಮೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಶಯಗಳು” ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಅವರ ಈ ಪೋಸ್ಟ್‌ಗೆ ಪತಿ ನಿಕ್ ಜೋನಾಸ್ ದಿಯಾ ಹಾಗೂ ಸ್ಟಾರ್ ಐಸ್ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಹಬ್ಬದ ವಿಶೇಷ ಉಡುಗೆಯಲ್ಲಿ ಕಂಗೊಳಿಸಿದ ಜೋಡಿ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರಿಯಾಂಕಾ ಚೋಪ್ರಾ ಅತ್ಯಂತ ಆಕರ್ಷಕವಾದ ಬರ್ಗಂಡಿ ಮತ್ತು ಗೋಲ್ಡ್ ಬಣ್ಣದ ಸ್ಟ್ರಾಪ್‌ಲೆಸ್ ಗೌನ್ ಧರಿಸಿದ್ದರು. ಇದಕ್ಕೆ ಜರ್ದೋಜಿ ಕಸೂತಿ ಹಾಗೂ ಚಿನ್ನದ ದಾರದ ಎಂಬ್ರಾಯ್ಡರಿ ಕೆಲಸ ಮಾಡಲಾಗಿತ್ತು. ತಮ್ಮ ಸಾಂಪ್ರದಾಯಿಕ ಲುಕ್‌ಪೂರ್ಣಗೊಳಿಸಲು ಕುಂದನ್ ಮಾಂಗ್ ಟೀಕಾ, ದೊಡ್ಡ ಗಾತ್ರದ ಚಿನ್ನದ ಕಿವಿಯೋಲೆಗಳು ಹಾಗೂ ಮ್ಯಾಚಿಂಗ್ ಬಳೆಗಳನ್ನು ಧರಿಸಿದ್ದರು. ತಲೆಗೆ ಬಿಳಿ ಬಣ್ಣದ ಮಲ್ಲಿಗೆ ಹೂವಿನ ಗಜರಾ ಸುತ್ತಿ, ಸ್ಮೋಕಿ ಐಸ್ ಹಾಗೂ ಬೆರ್ರಿ ಬಣ್ಣದ ಲಿಪ್‌ಸ್ಟಿಕ್ ಧರಿಸಿ ರಾಜಕುಮಾರಿಯಂತೆ ಮಿಂಚಿದರು.

ಇನ್ನು ಪತಿ ನಿಕ್ ಜೋನಾಸ್ ಬಿಳಿ ಬಣ್ಣದ ಎಂಬ್ರಾಯ್ಡರಿ ಮಾಡಿದ ಕುರ್ತಾ ಸೆಟ್ ಧರಿಸಿ ಪ್ರಿಯಾಂಕಾ ಅವರಿಗೆ ತಕ್ಕ ಜೋಡಿಯಾಗಿ ಕಾಣಿಸಿಕೊಂಡರು. ದಂಪತಿಯ ಮುದ್ದಿನ ಮಗಳು ಮಾಲ್ತಿ ಕೂಡ ತಂದೆಯ ಉಡುಗೆಗೆ ಮ್ಯಾಚ್ ಆಗುವಂತೆ ಸುಂದರವಾದ ಬಿಳಿ ಬಣ್ಣದ ಲೆಹಂಗಾ ಧರಿಸಿ ಎಲ್ಲರ ಗಮನ ಸೆಳೆದಳು.

ವಿದೇಶದಲ್ಲೂ ಭಾರತೀಯ ಸಂಪ್ರದಾಯಗಳಿಗೆ ಒತ್ತು: ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ನೆಲೆಸಿದ್ದರೂ, ಭಾರತೀಯ ಹಬ್ಬಗಳನ್ನು ಆಚರಿಸುವ ಮೂಲಕ ಮಗಳು ಮಾಲ್ತಿಗೆ ನಮ್ಮ ದೇಶದ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಮನೆಯಲ್ಲಿ ವಿಜೃಂಭಣೆಯಿಂದ ದಸರಾ ಆಚರಿಸಿದ್ದ ಅವರು, ಪೂಜೆ, ಶಿವಲಿಂಗ ಅಭಿಷೇಕ, ಹವನ ಹಾಗೂ ಕನ್ಯಾ ಪೂಜೆ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ನಿಕ್ ಜೋನಾಸ್ ತಮ್ಮ ಮಗಳ ಕಾಲಿ ತೊಳೆದು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದಲ್ಲದೆ, ನಿಕ್ ತಮ್ಮ ಕಾನ್ಸರ್ಟ್ ಪ್ರವಾಸದ ನಡುವೆಯೂ ಸಮಯ ಮಾಡಿಕೊಂಡು ಬಂದು ಪತ್ನಿ ಪ್ರಿಯಾಂಕಾ ಜತೆಗೆ ಕವಾ ಚೌತ್ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಬೈನಲ್ಲಿ ದೀಪಾವಳಿ ಸಂಭ್ರಮಿಸಿದ ಯುಎಫ್‌ಸಿ ಸ್ಟಾರ್ ಕಾರ್ಲೋಸ್ ಪ್ರೇಟ್ಸ್; ಪಟಾಕಿ ಸಿಡಿಸಿ ಹಬ್ಬ ಆಚರಿಸಿದ ಫೈಟರ್ಲಾಸ್ ಏಂಜಲೀಸ್‌ನಲ್ಲಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ: ವಿಶೇಷ ಫೋಟೋಗಳು ವೈರಲ್‘ಪ್ರೇಮದ ಊರಲಿ’ ಸಿನಿಮಾದ ”ಪ್ರೀತಿ ಬೇಡಿತು ಹೃದಯ” ಹಾಡು ರಿಲೀಸ್!ಪೋಲೆಂಡ್‌ನಲ್ಲಿ ಗುಂಡಿನ ದಾಳಿ: 6 ಮಂದಿ ಸಾವು, 15 ಮಂದಿಗೆ ಗಾಯ; ‘ಮಿಲಿಟರಿ ಶಸ್ತ್ರಾಸ್ತ್ರ’ ಬಳಸಿದ ದಾಳಿಕೋರMLS ನಲ್ಲಿ ಸತತ ಎರಡನೇ ಗೋಲ್ಡನ್ ಬೂಟ್ ಗೆದ್ದು ಇತಿಹಾಸ ನಿರ್ಮಿಸಿದ ಲಿಯೋನೆಲ್ ಮೆಸ್ಸಿಮೈದಾನದ ಸಿಬ್ಬಂದಿಗೆ ಗೇಮ್ ಚೇಂಜರ್ ಪ್ರಶಸ್ತಿಯ ಫೋನ್ ನೀಡಿದ ಕೆಎಲ್ ರಾಹುಲ್: ಸ್ಟಾರ್ ಆಟಗಾರನ ದೊಡ್ಡ ಮನಸ್ಸಿಗೆ ಅಭಿಮಾನಿಗಳ ಮೆಚ್ಚುಗೆಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಸಿಕ್ಕ ಹೊಸ ವೇಗದ ಅಸ್ತ್ರ: ಗುರ್ನೂರ್ ಬ್ರಾರ್ ಪ್ರದರ್ಶನಕ್ಕೆ ಮೆಚ್ಚುಗೆಸ್ವೀಟ್ಸ್ ಜತೆಗೆ ಹಬ್ಬಕ್ಕೆ ಭಿನ್ನವಾದ ತಿಂಡಿ ಬೇಕಾ? ಢೋಕ್ಲಾ ಚಾಟ್ ರೆಸಿಪಿ ಇಲ್ಲಿದೆಕ್ರಿಕೆಟ್ ಲೋಕದಿಂದ ದೀಪಾವಳಿ ಸಂಭ್ರಮ: ಗೌತಮ್ ಗಂಭೀರ್ ಹಾಗೂ ಬಿಸಿಸಿಐ ವತಿಯಿಂದ ಅಭಿಮಾನಿಗಳಿಗೆ ಹಬ್ಬದ ಶುಭಾಶಯಬಸ್ತಾರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ