LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳಸದ OTT ಗೆ ಪ್ರತಿ ತಿಂಗಳು ಹಣ ಪಾವತಿಯಾಗುತ್ತಿದೆಯೇ ? UPI ಮ್ಯಾಂಡೇಟ್ ರದ್ದುಗೊಳಿಸಲು ಇಲ್ಲಿದೆ ಹಂತ-ಹಂತದ ಮಾಹಿತಿ !

ಸಣ್ಣ ಪ್ರಮಾಣದ ಹಣ ಪ್ರತಿ ತಿಂಗಳು ಖಾತೆಯಿಂದ ಕಡಿತಗೊಂಡಾಗ ಅದು ಅನೇಕರ ಗಮನಕ್ಕೆ ಬರುವುದಿಲ್ಲ. ಹಳೆಯ ಒಟಿಟಿ ಚಂದಾದಾರಿಕೆ, ಆ್ಯಪ್‌‌ಗಳ ಸದಸ್ಯತ್ವ, ಇನ್ಶೂರೆನ್ಸ್ ಕಂತು ಅಥವಾ ರೀಚಾರ್ಜ್ ಪ್ಲಾನ್‌ಗಳನ್ನು ಬಳಸುವುದನ್ನು ನಿಲ್ಲಿಸಿದ ಮೇಲೆಯೂ ಬ್ಯಾಂಕ್ ಖಾತೆಯಿಂದ ಹಣ ನಿರಂತರವಾಗಿ ಕಡಿತಗೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ‘ಯುಪಿಐ ಆಟೋಪೇ ಮ್ಯಾಂಡೇಟ್’. ಬ್ಯಾಂಕ್ ಸ್ಟೇಟ್‌ಮೆಂಟ್ ನೋಡುವವರೆಗೆ ಕಾಯದೆ, ನಿಮ್ಮ ಯುಪಿಐ ಖಾತೆಗೆ ಲಿಂಕ್ ಆಗಿರುವ ಸಕ್ರಿಯ ಮ್ಯಾಂಡೇಟ್‌‌ಗಳನ್ನು ಪರಿಶೀಲಿಸಿ ಅನಗತ್ಯ ಪಾವತಿಗಳನ್ನು ತಡೆಯುವುದು ಅತ್ಯಗತ್ಯ.

ಸಕ್ರಿಯ ಯುಪಿಐ ಮ್ಯಾಂಡೇಟ್‌ಗಳನ್ನು ಪತ್ತೆಹಚ್ಚುವುದು ಹೇಗೆ ?

ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ನವೀಕರಿಸಿದ ಯುಪಿಐ ಆಟೋಪೇ ವ್ಯವಸ್ಥೆಯ ಪ್ರಕಾರ, ಬಳಕೆದಾರರು ತಮ್ಮ ಯುಪಿಐ ಆ್ಯಪ್‌ನಲ್ಲಿ ಸಕ್ರಿಯವಾಗಿರುವ ಮ್ಯಾಂಡೇಟ್‌ಗಳನ್ನು ಸುಲಭವಾಗಿ ವೀಕ್ಷಿಸಬಹುದು.

ನಿಮ್ಮ ಯುಪಿಐ ಆ್ಯಪ್ ತೆರೆದು ‘ಮ್ಯಾನೇಜ್ ಬ್ಯಾಂಕ್ ಅಕೌಂಟ್ಸ್’ ಅಥವಾ ‘ಯುಪಿಐ ಆಟೋಪೇ’ (UPI AutoPay) ವಿಭಾಗಕ್ಕೆ ತೆರಳಬೇಕು. ಅಲ್ಲಿ ವ್ಯಾಪಾರಿ ಸಂಸ್ಥೆಯ ಹೆಸರು, ಆಟೋಪೇ ಗರಿಷ್ಠ ಮೊತ್ತ, ಪಾವತಿಯ ಅವಧಿ ಹಾಗೂ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಕಾಣಬಹುದು. ಈ ಹಿಂದೆ ಪ್ರತ್ಯೇಕ ಆ್ಯಪ್‌ಗಳಿಗೆ ಪ್ರತ್ಯೇಕವಾಗಿ ಮ್ಯಾಂಡೇಟ್ ನೋಡಬೇಕಿತ್ತು, ಆದರೆ ಈಗ ಎನ್‌ಪಿಸಿಐ ನಿಯಮದಂತೆ ಯಾವುದೇ ಯುಪಿಐ ಆ್ಯಪ್ ಬಳಸಿ ಕೇಂದ್ರಿಕೃತವಾಗಿ ನಿಮ್ಮೆಲ್ಲಾ ಸಕ್ರಿಯ ಆಟೋಪೇಗಳನ್ನು ಪರಿಶೀಲಿಸಬಹುದು.

ಮ್ಯಾಂಡೇಟ್ ರದ್ದುಗೊಳಿಸುವ ಸರಿಯಾದ ವಿಧಾನ

ನಿಮಗೆ ಅಗತ್ಯವಿಲ್ಲದ ಆಟೋಪೇ ಮ್ಯಾಂಡೇಟ್ ಅನ್ನು ಆಯ್ಕೆ ಮಾಡಿ ‘ರಿವೋಕ್’ (Revoke) ಅಥವಾ ‘ಕ್ಯಾನ್ಸಲ್’ (Cancel) ಮಾಡುವ ಆಯ್ಕೆಯನ್ನು ಬಳಸಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯುಪಿಐ ಪಿನ್ (UPI PIN) ನಮೂದಿಸುವುದು ಕಡ್ಡಾಯವಾಗಿದೆ.

ಅನೇಕ ಜನರು ಸೇವಾ ಆ್ಯಪ್‌‌ಗಳನ್ನು ಮೊಬೈಲ್‌ನಿಂದ ಅನ್‌ಇನ್‌ಸ್ಟಾಲ್ ಮಾಡಿದರೆ ಅಥವಾ ಲಾಗ್‌ಔಟ್ ಆದರೆ ಆಟೋಪೇ ನಿಲ್ಲುತ್ತದೆ ಎಂದು ಭಾವಿಸುತ್ತಾರೆ, ಆದರೆ ಇದು ಸಂಪೂರ್ಣ ತಪ್ಪು. ಯುಪಿಐ ಮ್ಯಾಂಡೇಟ್ ಅನ್ನು ಅಧಿಕೃತವಾಗಿ ರದ್ದುಗೊಳಿಸದ ಹೊರತು ಬ್ಯಾಂಕ್‌ನಿಂದ ಹಣ ಕಡಿತಗೊಳ್ಳುವುದು ನಿಲ್ಲುವುದಿಲ್ಲ. ಅಲ್ಲದೆ, ಮ್ಯಾಂಡೇಟ್ ರದ್ದುಗೊಳಿಸುವುದರಿಂದ ಮುಂಬರುವ ಪಾವತಿಗಳು ನಿಲ್ಲುತ್ತವೆಯೇ ಹೊರತು, ಈಗಾಗಲೇ ಕಡಿತಗೊಂಡ ಹಣ ವಾಪಸ್ ಬರುವುದಿಲ್ಲ.

ಆರ್‌ಬಿಐ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳ ಪ್ರಕಾರ, ಯಾವುದೇ ಆಟೋಪೇ ಕಡಿತಗೊಳ್ಳುವ ಕನಿಷ್ಠ 24 ಗಂಟೆಗಳ ಮೊದಲು ಗ್ರಾಹಕರಿಗೆ ಮೆಸೇಜ್ (Pre-debit notification) ಕಳುಹಿಸುವುದು ಕಡ್ಡಾಯವಾಗಿದೆ. ಈ ಮೆಸೇಜ್ ಅನ್ನು ಗಮನಿಸುವುದರಿಂದ ಅನಗತ್ಯ ಪಾವತಿಯನ್ನು ತಡೆಯಬಹುದು. ಪ್ರಸ್ತುತ ಹೆಚ್ಚುವರಿ ದೃಢೀಕರಣವಿಲ್ಲದೆ (AFA) ಆಟೋಪೇ ಮೂಲಕ 15,000 ರೂಪಾಯಿವರೆಗೆ ಕಡಿತಗೊಳಿಸಲು ಅವಕಾಶವಿದೆ. ಮ್ಯೂಚುಯಲ್ ಫಂಡ್, ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಈ ಮಿತಿ 1 ಲಕ್ಷ ರೂಪಾಯಿವರೆಗೆ ಇದೆ.

ಮ್ಯಾಂಡೇಟ್ ರದ್ದುಗೊಳಿಸುವ ಮೊದಲು ಅದು ಇಎಮ್‌ಐ ಅಥವಾ ಇನ್ಶೂರೆನ್ಸ್‌ನಂತಹ ಪ್ರಮುಖ ಪಾವತಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಯುಪಿಐ ಆಟೋಪೇ ಪರಿಶೀಲಿಸುವುದು ನಿಮ್ಮ ಖಾತೆಯಿಂದ ಅನಗತ್ಯವಾಗಿ ಹಣ ಪೋಲಾಗುವುದನ್ನು ತಡೆಯುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ ಯೋಜನೆ ವಿಸ್ತರಣೆ65 ಕೋಟಿ ಅವ್ಯವಹಾರ ಪ್ರಕರಣ: ಬಾಲಿವುಡ್ ನಟ ಡಿನೊ ಮೊರಿಯಾ ಅರೆಸ್ಟ್BIG NEWS: ರಾಜ್ಯದಲ್ಲಿ 4.49 ಕೋಟಿ ಮತದಾರರು; ಸುಳ್ಳು ಮಾಹಿತಿ ನೀಡಿದ್ರೆ ಕೇಸ್!‘ಫ್ಲೈದುಬೈ’ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದ ಯುಎಇ: ಪೈಲಟ್ ಸ್ಮಿತ್ ಮಚ್ಚಾರ್ ಕಾರ್ಯಕ್ಕೆ ಶ್ಲಾಘನೆಸರ್ಕಾರಿ ಬಸ್ ಏರಿ ಕಂಡಕ್ಟರ್ ಆದ ಸಿಎಂ ; ಉಚಿತ ಟಿಕೆಟ್ ನೀಡಿ ಸಾರ್ವಜನಿಕರ ಜೊತೆ ಸಂವಾದ | Videoಬ್ರಹ್ಮಪುತ್ರ ಕಣಿವೆಯಲ್ಲಿ ಕಾವೇರಿದ ರಾಜಕೀಯ ಕಾಳಗ: ‘ಬಕಾಸುರ’ ಮತ್ತು ‘ಬಿರಿಯಾನಿ’ ವಾಕ್ಸಮರಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿಸಿದ ಮಹಿಳಾ ಹಾಕಿ ತಂಡ: 44 ವರ್ಷಗಳ ನಂತರ ಚಿನ್ನದ ಪದಕBREAKING: ತುರ್ತು ಕಡತ ಒಂದೇ ದಿನದಲ್ಲಿ ವಿಲೇವಾರಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವೆಟ್ರಿ ಪಯಣಂ ಯೋಜನೆಗೆ ಚಾಲನೆ ನೀಡಿದ ಸಿಎಂ ವಿಜಯ್ಉಡುಪಿಯಲ್ಲಿ ಬೀಡಾಡಿ ಹಸು ಅಪಹರಣ ಪ್ರಕರಣ: ಪ್ರಮುಖ ಆರೋಪಿ ಸೆರೆ, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ