LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Post Office Scheme : ಅಂಚೆ ಕಚೇರಿಯ ಅದ್ಭುತ ಯೋಜನೆ : ಒಮ್ಮೆ ಹೂಡಿಕೆ ಮಾಡಿದರೆ ₹5 ಲಕ್ಷಕ್ಕೂ ಹೆಚ್ಚು ಲಾಭ..!

ಪೋಸ್ಟ್ ಆಫೀಸ್‌ನ ಟೈಮ್ ಡಿಪಾಸಿಟ್ (Time Deposit) ಯೋಜನೆ ಮೂಲಕ ನಿಮ್ಮ ಹೂಡಿಕೆಗೆ ಆಕರ್ಷಕ ಬಡ್ಡಿ ಪಡೆಯಬಹುದು. ಕೇಂದ್ರ ಸರ್ಕಾರದ ಭದ್ರತಾ ಖಾತರಿಯಿರುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ರೂಪದಲ್ಲೇ ₹5 ಲಕ್ಷಕ್ಕೂ ಅಧಿಕ ಲಾಭ ಗಳಿಸುವ ಅವಕಾಶವಿದೆ.

ಹೌದು. ಪೋಸ್ಟ್ ಆಫೀಸ್ ನಡೆಸುವ ವಿವಿಧ ಉಳಿತಾಯ ಯೋಜನೆಗಳು ಉತ್ತಮ ಆದಾಯ ಹಾಗೂ ಸರ್ಕಾರದ ಭರವಸೆಯಿಂದ ಹೂಡಿಕೆದಾರರ ಮೆಚ್ಚುಗೆ ಗಳಿಸಿವೆ. ನೀವು ಕೂಡ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಪೋಸ್ಟ್ ಆಫೀಸ್ ಯೋಜನೆಗಳು ಉತ್ತಮ ಆಯ್ಕೆಯಾಗಿವೆ. ವಿಶೇಷವಾಗಿ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದರೆ, ಉತ್ತಮ ಬಡ್ಡಿ ಆದಾಯ ಪಡೆಯಬಹುದು.

ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ಸಂಪೂರ್ಣ ಭದ್ರತೆ. ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಗೂ ಕೇಂದ್ರ ಸರ್ಕಾರದ ಖಾತರಿ ಇರುವುದರಿಂದ ಹಣ ಕಳೆದುಕೊಳ್ಳುವ ಭಯವಿರುವುದಿಲ್ಲ. ಮಾರುಕಟ್ಟೆ ಏರಿಳಿತಗಳ ಪರಿಣಾಮವೂ ಇಲ್ಲ. ಹೀಗಾಗಿ ಸಣ್ಣ ಮೊತ್ತದ ಉಳಿತಾಯವನ್ನೂ ದೊಡ್ಡ ನಿಧಿಯಾಗಿ ಬೆಳೆಸಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ.ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ಸ್ ಯೋಜನೆಗಳು ಭದ್ರತೆಯ ಜೊತೆಗೆ ಉತ್ತಮ ಬಡ್ಡಿದರವನ್ನೂ ನೀಡುತ್ತವೆ. ಟೈಮ್ ಡಿಪಾಸಿಟ್ ಯೋಜನೆಯಲ್ಲಿ ನೀವು ಆಯ್ಕೆ ಮಾಡುವ ಅವಧಿಗೆ ಅನುಗುಣವಾಗಿ ಬಡ್ಡಿದರ ನಿಗದಿಯಾಗುತ್ತದೆ. ಇದು ಒಮ್ಮೆ ಮಾತ್ರ ಹೂಡಿಕೆ (One-Time Investment) ಮಾಡುವ ಯೋಜನೆಯಾಗಿದೆ.

ಬಡ್ಡಿದರ ವಿವರಗಳು

  • 1 ವರ್ಷದ ಅವಧಿ – 6.9% ಬಡ್ಡಿ
  • 2 ವರ್ಷದ ಅವಧಿ – 7.0% ಬಡ್ಡಿ
  • 3 ವರ್ಷದ ಅವಧಿ – 7.1% ಬಡ್ಡಿ
  • 5 ವರ್ಷದ ಅವಧಿ – 7.5% ಬಡ್ಡಿ

ಹೂಡಿಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1, 2, 3 ಅಥವಾ 5 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಂಡು ಒಮ್ಮೆಯೇ ಹಣವನ್ನು ಠೇವಣಿ ಮಾಡಬಹುದು.

₹5 ಲಕ್ಷಕ್ಕೂ ಹೆಚ್ಚು ಲಾಭ ಹೇಗೆ?

ನೀವು ₹12 ಲಕ್ಷವನ್ನು 5 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕ 7.5% ಬಡ್ಡಿದರದಂತೆ ಮೆಚ್ಯೂರಿಟಿ ವೇಳೆಗೆ ಒಟ್ಟು ₹17,39,938 ದೊರೆಯುತ್ತದೆ. ಅಂದರೆ, ಬಡ್ಡಿ ರೂಪದಲ್ಲೇ ₹5,39,938 ಲಾಭ ಸಿಗುತ್ತದೆ.ಇದೇ ರೀತಿ, ₹4.5 ಲಕ್ಷವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ವೇಳೆಗೆ ₹6,52,477 ದೊರೆಯುತ್ತದೆ. ಇದರಲ್ಲಿ ₹2,02,477 ಬಡ್ಡಿ ಲಾಭವಾಗಿರುತ್ತದೆ.

3 ವರ್ಷಗಳಲ್ಲಿ ₹2 ಲಕ್ಷಕ್ಕೂ ಹೆಚ್ಚು ಲಾಭ

ನೀವು 3 ವರ್ಷದ ಅವಧಿಗೆ ₹10 ಲಕ್ಷ ಹೂಡಿಕೆ ಮಾಡಿದರೆ, 7.1% ಬಡ್ಡಿದರದಂತೆ ಮೆಚ್ಯೂರಿಟಿ ವೇಳೆಗೆ ₹12,35,075 ಸಿಗುತ್ತದೆ. ಅಂದರೆ, ₹2,35,075 ಕೇವಲ ಬಡ್ಡಿ ರೂಪದಲ್ಲೇ ಲಾಭವಾಗಿ ದೊರೆಯುತ್ತದೆ.ಹೀಗಾಗಿ, ನಿಮ್ಮ ಆರ್ಥಿಕ ಗುರಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಅವಧಿಯನ್ನು ಆಯ್ಕೆ ಮಾಡಿಕೊಂಡು ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಸುರಕ್ಷಿತವಾಗಿ ಉತ್ತಮ ಆದಾಯ ಗಳಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ