LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಸ್ಸಾಂ ಸಿಎಂ ಸ್ಥಾನಕ್ಕೆ ಹಿಮಂತ್ ಬಿಸ್ವಾ ಶರ್ಮಾ ರಾಜೀನಾಮೆ: ಮೇ 12ರಂದು ಪದಗ್ರಹಣ ಸಾಧ್ಯತೆ

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಪಕ್ಷ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವಾ ಶರ್ಮಾ ರಾಜೀನಾಮೆ ನೀಡಿದ್ದಾರೆ.

ಲೋಕಭವನಕ್ಕೆ ತೆರಳಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಹಾಗೂ ಸಚಿವ ಸಂಪುಟ ಸದಸ್ಯರು ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರು ಶರ್ಮಾ ಹಾಗೂ ಸಂಪುಟ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೂಚಿಸಿದ್ದಾರೆ ಎಂದು ಲೋಕಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ಸಾಂ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 12ರಂದು ನಡೆಯುವ ಸಾಧ್ಯತೆಯಿದೆ. ಎನ್ ಡಿಎ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹಿಮಂತ್ ಬಿಸ್ವಾ ಶರ್ಮಾ ಅವರೇ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಹಿಮಂತ್ ಬಿಸ್ವಾ ಶರ್ಮಾ ಮಾತನಾಡಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಕೇಂದ್ರ ವೀಕ್ಷಕ ಜೆಪಿ ನಡ್ಡಾ ನಿರ್ಧರಿಸಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸಭೆಯಲ್ಲಿ ಘೋಷಿಸಿದ ನಾಯಕರು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ವಿಜಯಪುರದಲ್ಲಿ ಬೆಚ್ಚಿಬೀಳಿಸುವ ಘಟನೆ: 3 ವರ್ಷದ ಕಂದಮ್ಮನನ್ನು ಕಚ್ಚಿ ಎಳೆದೊಯ್ದ ಬೀದಿ ನಾಯಿ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಬಂಗಾರ ಪ್ರಿಯರಿಗೆ ಭಾರಿ ಶಾಕ್: ಚಿನ್ನದ ಬೆಲೆ 10 ಗ್ರಾಂಗೆ ₹2130 ದಿಢೀರ್ ಜಿಗಿತ: ಬೆಳ್ಳಿ ಬೆಲೆಯೂ ₹10 ಸಾವಿರ ದುಬಾರಿಸೋಶಿಯಲ್ ಮೀಡಿಯಾ ಬಳಸಲು ಮಕ್ಕಳು ಮಾಡ್ತಿರೋ ಐಡಿಯಾ ಕೇಳಿದ್ರೆ ಶಾಕ್ ಆಗ್ತೀರಾ: ಇಂಟರ್ನೆಟ್ ಲೋಕಕ್ಕೆ ನಕಲಿ ಮೀಸೆಯ ಎಂಟ್ರಿ!ಅಸ್ಸಾಂ ಸಿಎಂ ಸ್ಥಾನಕ್ಕೆ ಹಿಮಂತ್ ಬಿಸ್ವಾ ಶರ್ಮಾ ರಾಜೀನಾಮೆ: ಮೇ 12ರಂದು ಪದಗ್ರಹಣ ಸಾಧ್ಯತೆIPL 2026: ಪಂಜಾಬ್ vs ಹೈದರಾಬಾದ್ ಪಂದ್ಯದಲ್ಲಿ ಯಾರು ಗೆದ್ದರೆ ಆರ್‌ಸಿಬಿಗೆ ಲಾಭ? ಈ ತಂಡಕ್ಕೆ ಆರ್‌ಸಿಬಿ ಫ್ಯಾನ್ಸ್ ಫುಲ್ ಸಪೋರ್ಟ್BREAKING: ಮೂವರು IPS ಅಧಿಕಾರಿಗಳ ದಿಢೀರ್ ವರ್ಗಾವಣೆBIG NEWS: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಮೇ 9ರಂದು ಬೆಳಿಗ್ಗೆ 11ಗಂಟೆಗೆ ನೂತನ ಸಿಎಂ ಪದಗ್ರಹಣBIG NEWS : ‘ಅಂಚೆ ಕಚೇರಿ’ ಕೆಲಸಗಳಿಗೆ ಇನ್ಮುಂದೆ ಪಾನ್ ಕಾರ್ಡ್ ಕಡ್ಡಾಯ : ಕೇಂದ್ರ ಸರ್ಕಾರ ಆದೇಶBREAKING: ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್ ಪ್ರಮಾಣವಚನ ಸ್ವೀಕಾರ: ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭಾಗಿBREAKING: ರಾಜ್ಯಪಾಲ ಅರ್ಲೇಕರ್ ಭೇಟಿಯಾದ ಟಿವಿಕೆ ಮುಖ್ಯಸ್ಥ ವಿಜಯ್: ಸರ್ಕಾರ ರಚನೆಗೆ ಹಕ್ಕು ಮಂಡನೆ