LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 18 ರಿಂದ SSLC ಪರೀಕ್ಷೆ-2 ಆರಂಭ ; ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಮಡಿಕೇರಿ :   ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 2026 ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ನ್ನು ಮೇ, 18 ರಿಂದ 25 ರವರೆಗೆ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಮತ್ತು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಭರ್ಂದಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಎಲ್ಲಾ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್‍ಗಳನ್ನು ಮುಚ್ಚಿಸತಕ್ಕದೆಂದು ಸಹ ತಿಳಿಸಿದೆ.

ಈ ಆದೇಶವು ಪರೀಕ್ಷಾ ದಿನಗಳಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ

ಮೇ ಮತ್ತು ಜೂನ್ ಮಾಹೆ ಪಡಿತರ ಆಹಾರಧಾನ್ಯ ಮೇ ಮಾಹೆಯಲ್ಲಿಯೇ ವಿತರಣೆ

ಮಡಿಕೇರಿ :   ಕೇಂದ್ರ ಸರ್ಕಾರವು ದೇಶದಲ್ಲಿ ಮುಂಬರುವ ಖರೀದಿ ಋತುವಿನ ಹಿನ್ನಲೆಯಲ್ಲಿ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆಗಾಗಿ ರಾಜ್ಯಗಳು ಎದುರಿಸುತ್ತಿರುವ ಅಡಚಣೆಗಳಿಂದಾಗಿ ಎನ್‍ಎಫ್‍ಎಸ್‍ಎ ಅಡಿಯಲ್ಲಿ ಮೇ ಮತ್ತು ಜೂನ್-2026 ರ ಎರಡು ಮಾಹೆಗಳ ಅಹಾರಧಾನ್ಯ ಹಂಚಿಕೆಯನ್ನು ಮುಂಗಡವಾಗಿ ಎತ್ತುವಳಿ ಮಾಡಿ ಕೂಡಲೇ ವಿತರಣೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಪ್ರಯುಕ್ತ ಮೇ-2026 ಮತ್ತು ಜೂನ್-2026 ರ ಎರಡು ಮಾಹೆಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‍ಎಫ್‍ಎಸ್) ಹಂಚಿಕೆಯನ್ನು ಮೇ-2026 ರ ಮಾಹೆಯಲ್ಲಿ ವಿತರಿಸಲು ಸರ್ಕಾರವು ನಿರ್ದೇಶನ ನೀಡಿರುತ್ತದೆ.

ಪ್ರಯುಕ್ತ ಕೊಡಗು ಜಿಲ್ಲೆಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 70 ಕೆ.ಜಿ (ಮೇ-35 + ಜೂನ್-35) ಅಕ್ಕಿ ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 10 ಕೆ.ಜಿ (ಮೇ-5 + ಜೂನ್-5) ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಮೇ ಮತ್ತು ಜೂನ್ 2026 ರ ಎರಡು ಮಾಹೆಗಳ ಆಹಾರಧಾನ್ಯವನ್ನು ಮೇ-2026ರ ಮಾಹೆಯಲ್ಲಿಯೇ ಒಟ್ಟಿಗೆ ವಿತರಣೆ ಮಾಡಬೇಕಿರುವುದರಿಂದ ವಿತರಣಾ ಸಂದರ್ಭದಲ್ಲಿ ಪ್ರತಿ ಮಾಹೆಯ ವಿತರಣೆಗೆ ಫಲಾನುಭವಿಗಳಿಂದ ಪ್ರತ್ಯೇಕ ಬಯೋ ಮೆಟ್ರಿಕ್ ಪಡೆಯುವ ಅವಕಾಶವನ್ನು ಕಲ್ಪಿಸಿದ್ದು, ಪಡಿತರ ಚೀಟಿ ಫಲಾನುಭವಿಗಳು ಮೇ ಮತ್ತು ಜೂನ್ 2026ರ ಎರಡು ಮಾಹೆಗಳ ಬಯೋ ಮೆಟ್ರಿಕ್ ನೀಡಿ ಆಹಾರಧಾನ್ಯವನ್ನು ಪಡೆಯಲು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ತಿಳಿಯಪಡಿಸಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಹೆಚ್ಚುವರಿ 05 ಕೆ.ಜಿ ಆಹಾರಧಾನ್ಯವನ್ನು ಮೇ ಮತ್ತು ಜೂನ್-2026 ರ ಮಾಹೆಗಳ ಹಂಚಿಕೆಯನ್ನು ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ಈಗಾಗಲೇ ವಿತರಿಸುತ್ತಿರುವ ರೀತಿಯಲ್ಲಿ ಜೂನ್-2026 ರ ಮಾಹೆಯಲ್ಲಿ ಎತ್ತುವಳಿ ಮಾಡಿ ವಿತರಿಸಲು ಸರ್ಕಾರವು ನಿರ್ದೇಶಿಸಿದೆ.

ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಭೀಮರಾಯ ತಿಳಿಸಿದ್ದಾರೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿದ್ಧರಾಮಯ್ಯ ಮುನಿಸಿನಿಂದ ಕೈತಪ್ಪಿದ ಸಚಿವ ಸ್ಥಾನ..? ಮನವೊಲಿಸಲು ಜಮೀರ್ ಅಹ್ಮದ್ ಕಸರತ್ತುಇಸ್ರೇಲ್, ಅಮೆರಿಕ ದಾಳಿಯಲ್ಲಿ ಮೃತಪಟ್ಟ 131 ದಿನಗಳ ನಂತರ ಜು. 9ರಂದು ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆSHOCKING: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವುವಿವಾಹಿತೆಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್, ಬೆತ್ತಲೆ ಚಿತ್ರ ಸೆರೆಹಿಡಿದು ಬ್ಲಾಕ್ ಮೇಲ್BREAKING: ಇನ್ನು ಯಾರೂ ಒಂದು ರೂಪಾಯಿ ಲಂಚ ಕೊಡಬೇಕಿಲ್ಲ: ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸಲು ಸಿಎಂ ಡಿಕೆ ಮಹತ್ವದ ಹೆಜ್ಜೆಶಿವಮೊಗ್ಗ: ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿ ಶವ ಪತ್ತೆಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣ: ಚಿನ್ನಯ್ಯನ ಬ್ರೇನ್ ಮ್ಯಾಪಿಂಗ್ ಹಾಗೂ ರಿಟ್ ಅರ್ಜಿ ತನಿಖೆ ನಡೆಸುವಂತೆ SITಗೆ ಗಿರೀಶ್ ಮಟ್ಟಣ್ಣನವರ್ ದೂರುBREAKING: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಯೋಜನೆ ಸೌಲಭ್ಯ ಪಡೆಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಸಿಎಂ ಡಿಕೆ ಮಾಹಿತಿದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಕೋಟ್ಯಂತರ ರೂ ಅಕ್ರಮ ಫಂಡಿಂಗ್ ಆರೋಪ: ಕರ್ನಾಟಕದ ನಾಲ್ವರು ಸೇರಿ 7 ಜನರ ವಿರುದ್ಧ FIR ದಾಖಲುಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಯೂ  ತಿಳಿಯಲೇಬೇಕಾದ ಸೀಕ್ರೆಟ್ ಪಿಎಫ್ ಕಟ್ ಆದ್ರೆ ಸಿಗುತ್ತೆ ₹7 ಲಕ್ಷದ ಬಿಗ್ ಇನ್ಶೂರೆನ್ಸ್ ಬೆನಿಫಿಟ್