LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲ ಆಸ್ಪತ್ರೆಗಳಲ್ಲಿ 24×7 ವೈದ್ಯರು, ಜೀವರಕ್ಷಕ ಔಷಧಗಳು ಕಡ್ಡಾಯ: SoP ರಚಿಸಲು ಯತ್ನಾಳ್ ಒತ್ತಾಯ

ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ನಮಗೆ ಬೇಕಾದ ಊಟ, ತಿಂಡಿ, ವಸ್ತುಗಳು ಆನ್ಲೈನ್ ಮೂಲಕ 10 ನಿಮಿಷಗಳಲ್ಲಿ ಸಿಗುತ್ತದೆ, ಆದರೆ ವಿಪರ್ಯಾಸ ಏನೆಂದರೆ ಹಾರ್ಟ್ ಅಟ್ಯಾಕ್ ಅಥವಾ ಆರೋಗ್ಯದಲ್ಲಿ ಏರು ಪೇರಾದಾಗ, ಹಾವು ಕಚ್ಚಿದ ಸಂದರ್ಭದಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗುವ ವೇಳೆಗೆ ರೋಗಿಯನ್ನು ರಕ್ಷಿಸಬಹುದಾದ Golden Hour ಮೀರಿ ಹೋಗುವ ಮೂಲಕ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ.

ಅದರಲ್ಲೂ, ಆರೋಗ್ಯವಾಗಿರುವ, ಯುವಕ -ಯುವತಿಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗುವಷ್ಟು ತಂತ್ರಜ್ಞಾನ ಮುಂದುವರೆದಿರುವಾಗ ಆರೋಗ್ಯದಲ್ಲಿ ಏರು ಪೇರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲ, ಸಿಬ್ಬಂದಿ ಇಲ್ಲ, ವೈದ್ಯರಿಲ್ಲ ಎಂದು ಹೇಳುವುದು ಸಮಾಜಕ್ಕೆ ಮಾಡಿದ ಅವಮಾನ ಹಾಗೂ ನಾವು ಎಷ್ಟು ಅಮಾನವೀಯರಾಗಿದ್ದೇವೆಂದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ [PHC] ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲAnti Snake Venom ಸೇರಿದಂತೆ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ stock ನಲ್ಲಿರಬೇಕು. ರೋಗಿಯ ಜೀವ ರಕ್ಷಿಸುವುದು ಆಸ್ಪತ್ರೆಗಳ ಪ್ರಾಥಮಿಕ ಕರ್ತವ್ಯ ಎಂಬುದನ್ನು ಮರೆಯಬಾರದು. 10 ನಿಮಿಷದಲ್ಲಿ ನಿಮ್ಮ ಮನೆಗೆ ನಿಮಗೆ ಬೇಕಾದ ತಿಂಡಿ ತಲುಪಬಹುದಾದರೆ, ಅದೇ ಸಮಯದಲ್ಲಿ ರೋಗಿಯನ್ನು ಖಂಡಿತ ರಕ್ಷಿಸಬಹುದು. ಇದಕ್ಕೆ ತಕ್ಕಂತೆ ಸರ್ಕಾರ SoP ಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ