LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯ ವಿಮೆ ಇಲ್ವಾ? ಡೋಂಟ್ ವರಿ: ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚಕ್ಕೆ ಸಿಗಲಿದೆ ₹50,000 ವರೆಗೆ ತೆರಿಗೆ ವಿನಾಯಿತಿ: ಇಲ್ಲಿದೆ ಹೊಸ ನಿಯಮ

ನವದೆಹಲಿ: ಆದಾಯ ತೆರಿಗೆ ಪಾವತಿಸುವ ಭಾರತೀಯ ನಿವಾಸಿಗಳಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ ಕೇವಲ ಹೆಲ್ತ್ ಇನ್ಶೂರೆನ್ಸ್ (ಆರೋಗ್ಯ ವಿಮೆ) ಪಾಲಿಸಿಯ ಪ್ರೀಮಿಯಂ ಮೊತ್ತಕ್ಕೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಯಾವುದೇ ಆರೋಗ್ಯ ವಿಮೆ ಹೊಂದಿರದ ಹಿರಿಯ ನಾಗರಿಕರು ಸಹ ತಮ್ಮ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಮೇಲೆ ಬರೋಬ್ಬರಿ ₹50,000 ರೂಪಾಯಿಗಳವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ

ವಿಶೇಷವೆಂದರೆ, ಈ ಪ್ರಯೋಜನವು ಕೇವಲ ಹಿರಿಯ ನಾಗರಿಕರಿಗೆ ಮಾತ್ರವಲ್ಲದೆ, ವಿಮೆ ಇಲ್ಲದ ತಮ್ಮ ವೃದ್ಧ ಪೋಷಕರ ವೈದ್ಯಕೀಯ ಚಿಕಿತ್ಸೆಯ ಬಿಲ್ ಪಾವತಿಸುವ ಸಾಮಾನ್ಯ ಉದ್ಯೋಗಸ್ಥ ತೆರಿಗೆದಾರರಿಗೂ ಸಮಾನವಾಗಿ ಅನ್ವಯಿಸಲಿದೆ.

ತೆರಿಗೆ ವಿನಾಯಿತಿಯ ಮಿತಿ ಎಷ್ಟು?

ಆಯಾ ಹಣಕಾಸು ವರ್ಷದಲ್ಲಿ ಉಂಟಾದ ನೈಜ ವೈದ್ಯಕೀಯ ವೆಚ್ಚಗಳಿಗೆ ಮಾತ್ರ ಈ ರಿಯಾಯಿತಿ ಲಭ್ಯವಿರುತ್ತದೆ. ಫಲಾನುಭವಿಯು ಹಿರಿಯ ನಾಗರಿಕರಾಗಿರಲಿ (60 ವರ್ಷ ಮೇಲ್ಪಟ್ಟವರು) ಅಥವಾ ಅತಿ ಹಿರಿಯ ನಾಗರಿಕರಾಗಿರಲಿ (80 ವರ್ಷ ಮೇಲ್ಪಟ್ಟವರು), ಇಬ್ಬರಿಗೂ ಗರಿಷ್ಠ ಮಿತಿಯನ್ನು ₹50,000 ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ.

ಉದಾಹರಣೆ 1: ಆರೋಗ್ಯ ವಿಮೆ ಇಲ್ಲದ 68 ವರ್ಷದ ಹಿರಿಯ ನಾಗರಿಕರೊಬ್ಬರು ವರ್ಷದಲ್ಲಿ ಚಿಕಿತ್ಸೆಗಾಗಿ ಒಟ್ಟು ₹42,000 ಖರ್ಚು ಮಾಡಿದರೆ, ಅವರು ಇಡೀ ₹42,000 ಮೊತ್ತವನ್ನು ತೆರಿಗೆ ವಿನಾಯಿತಿಗಾಗಿ ಕ್ಲೈಮ್ ಮಾಡಬಹುದು.

ಉದಾಹರಣೆ 2: ಒಂದು ವೇಳೆ ಅವರ ಒಟ್ಟು ಚಿಕಿತ್ಸಾ ವೆಚ್ಚ ₹70,000 ಆಗಿದ್ದರೂ ಸಹ, ಅವರು ಪಡೆಯಬಹುದಾದ ಗರಿಷ್ಠ ಕಡಿತದ ಮಿತಿ ಕೇವಲ ₹50,000 ಮಾತ್ರ ಆಗಿರುತ್ತದೆ.

ಪ್ರಯೋಜನ ಪಡೆಯಲು ಇರುವ 3 ಪ್ರಮುಖ ಷರತ್ತುಗಳು:

ಈ ಅದ್ಭುತ ತೆರಿಗೆ ಪ್ರಯೋಜನವನ್ನು ಪಡೆಯಲು ಆದಾಯ ತೆರಿಗೆ ಇಲಾಖೆಯು ಮೂರು ಪ್ರಮುಖ ನಿಯಮಗಳನ್ನು ವಿಧಿಸಿದೆ:

ವಯಸ್ಸಿನ ಮಿತಿ: ಯಾರ ಹೆಸರಿನಲ್ಲಿ ವೈದ್ಯಕೀಯ ವೆಚ್ಚವನ್ನು ಕ್ಲೈಮ್ ಮಾಡಲಾಗುತ್ತದೆಯೋ ಅವರು ಕಡ್ಡಾಯವಾಗಿ 60 ವರ್ಷ ತುಂಬಿದ ಹಿರಿಯ ನಾಗರಿಕರಾಗಿರಬೇಕು.

ನಿವಾಸ: ಅವರು ಭಾರತದ ನಿವಾಸಿಯಾಗಿರಬೇಕು (Resident of India).

ವಿಮೆ ಇರಬಾರದು: ಆ ಹಣಕಾಸು ವರ್ಷದಲ್ಲಿ ಅವರ ಹೆಸರಿನಲ್ಲಿ ಯಾವುದೇ ಸಕ್ರಿಯ (Active) ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಇರಬಾರದು.

ಮಕ್ಕಳೂ ಸಹ ಪೋಷಕರ ಬಿಲ್ ಕ್ಲೈಮ್ ಮಾಡಬಹುದು

ಸ್ವಾವಲಂಬಿ ಹಿರಿಯ ನಾಗರಿಕರು: ಹಿರಿಯ ನಾಗರಿಕರು ತಮ್ಮ ಸ್ವಂತ ಚಿಕಿತ್ಸೆಯ ಬಿಲ್‌ಗಳನ್ನು ತಾವೇ ಪಾವತಿಸಿದ್ದರೆ, ಅವರು ತಮ್ಮದೇ ಆದ ಐಟಿಆರ್ (ITR) ನಲ್ಲಿ ಈ ಕಡಿತವನ್ನು ಕ್ಲೈಮ್ ಮಾಡಿಕೊಳ್ಳಬಹುದು.

ಉದ್ಯೋಗಸ್ಥ ಮಕ್ಕಳು: ಒಂದು ವೇಳೆ ಮಕ್ಕಳು ತಮ್ಮ ವಿಮೆ ಇಲ್ಲದ ಹಿರಿಯ ಪೋಷಕರ ವೈದ್ಯಕೀಯ ವೆಚ್ಚಗಳನ್ನು ಭರಿಸಿದ್ದರೆ, ಮಕ್ಕಳು ತಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ಗರಿಷ್ಠ ₹50,000 ಮಿತಿಗೆ ಒಳಪಟ್ಟು ಈ ತೆರಿಗೆ ವಿನಾಯಿತಿಯನ್ನು ಸುಲಭವಾಗಿ ಪಡೆಯಬಹುದು.

ಪ್ರಮುಖ ಎಚ್ಚರಿಕೆ (ಡ್ಯುಪ್ಲಿಕೇಟ್ ಬಿಲ್ ನಿಷೇಧ):

ಒಂದೇ ವೈದ್ಯಕೀಯ ಬಿಲ್ ಅನ್ನು ಇಬ್ಬರು ವಿಭಿನ್ನ ವ್ಯಕ್ತಿಗಳು ಸ್ಪ್ಲಿಟ್ ಮಾಡಲು ಅಥವಾ ಡ್ಯುಪ್ಲಿಕೇಟ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇರೆ ಬೇರೆ ತೆರಿಗೆದಾರರು ವಾಸ್ತವವಾಗಿ ಪ್ರತ್ಯೇಕ ಭಾಗಗಳನ್ನು ಪಾವತಿಸಿದ್ದರೆ ಮಾತ್ರ, ತಾವು ಪಾವತಿಸಿದ ವೈಯಕ್ತಿಕ ಮೊತ್ತಕ್ಕೆ ತಕ್ಕಂತೆ ಪ್ರತ್ಯೇಕವಾಗಿ ಕ್ಲೈಮ್ ಸಲ್ಲಿಸಲು ಸಾಧ್ಯವಿದೆ.

ಸೆಕ್ಷನ್ 80D ರದ್ದು; ಜಾರಿಗೆ ಬಂತು ಸೆಕ್ಷನ್ 126

ಈ ಹಿಂದೆ ಈ ಇಡೀ ಪ್ರಕ್ರಿಯೆಯು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಸೆಕ್ಷನ್ 80D ನಿಯಮಾವಳಿಗಳಿಗೆ ಒಳಪಟ್ಟಿತ್ತು. ಆದರೆ ಪ್ರಸ್ತುತ ಜಾರಿಗೆ ಬಂದಿರುವ ನೂತನ ಆದಾಯ ತೆರಿಗೆ ಕಾಯ್ದೆ 2025 ರ ಅಡಿಯಲ್ಲಿ ಹಳೆಯ ಸೆಕ್ಷನ್ 80D ಅನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಅದರ ಬದಲಾಗಿ ಸೆಕ್ಷನ್ 126 ಎಂಬ ಹೊಸ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. ಹಾಗಾಗಿ ಹಿರಿಯ ನಾಗರಿಕರು ತೆರಿಗೆ ಸಲ್ಲಿಸುವಾಗ ಹೊಸ ಸೆಕ್ಷನ್ ಅಡಿಯಲ್ಲೇ ಕ್ಲೈಮ್ ಮಾಡಬೇಕಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ