LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾಯಾ ಜಿಂಕೆಯಂತೆ ಬಣ್ಣ ಬದಲಿಸುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ ಫೀಲ್ಡ್: ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಬಿಡುಗಡೆ

ಬೆಂಗಳೂರು: ರಾಯಲ್ ಎನ್‌ಫೀಲ್ಡ್ ತನ್ನ 125ನೇ ವಾರ್ಷಿಕೋತ್ಸವಕ್ಕಾಗಿ ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಬಣ್ಣ ಬದಲಿಸುತ್ತಾ ಮಾಯಾ ಜಿಂಕೆಯಂತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಭಾರತದ ಪ್ರಖ್ಯಾತ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ತನ್ನ 125ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ವಿಶಿಷ್ಟವಾದ ಲಿಮಿಟೆಡ್ ಎಡಿಷನ್ ಬೈಕ್ ಒಂದನ್ನು ಬಿಡುಗಡೆ ಮಾಡಿದೆ. ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್’ ಪರಿಚಯಿಸಿದ್ದು, ಕೇವಲ 125 ಯೂನಿಟ್‌ಗಳು ಮಾತ್ರ ಸೀಮಿತವಾಗಿವೆ.

ಭಾರತ ಸೇರಿದಂತೆ ತನ್ನ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಕೇವಲ 125 ಯೂನಿಟ್‌ಗಳನ್ನು ಮಾತ್ರ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಹಾಗಾಗಿ ಈ ಬೈಕ್ ಖರೀದಿಸಲು ಆಸಕ್ತಿ ಇರುವವರು ತಕ್ಷಣವೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಬುಕಿಂಗ್ ಪ್ರಕ್ರಿಯೆಯು ಅಕ್ಟೋಬರ್ 16 ರಿಂದ ಆರಂಭವಾಗಿದ್ದು, ಅಕ್ಟೋಬರ್ 28ರವರೆಗೆ ಈ ಸೌಲಭ್ಯವಿರಲಿದೆ.

ಈ ವಿಶೇಷ ಎಡಿಷನ್ ಬೈಕ್‌ನ ಅತ್ಯಂತ ವಿಶಿಷ್ಟ ಹಾಗೂ ಆಕರ್ಷಕ ವೈಶಿಷ್ಟ್ಯವೆಂದರೆ ಇದರ ‘ಹೈಪರ್‌ಶಿಫ್ಟ್’ ಫಿನಿಶಿಂಗ್. ಈ ಬೈಕ್‌ನ ಮೇಲೆ ಸೂರ್ಯನ ಬೆಳಕು ಅಥವಾ ಇತರೆ ಯಾವುದೇ ಬೆಳಕು ಬಿದ್ದಾಗ ಇದು ತನ್ನ ಬಣ್ಣವನ್ನು ಕೆಂಪು (Red), ಹಸಿರು (Green) ಮತ್ತು ಚಿನ್ನದ (Gold) ಬಣ್ಣಗಳ ಶೇಡ್‌ಗಳಿಗೆ ಬದಲಾಯಿಸಿಕೊಳ್ಳುತ್ತದೆ. ನೋಡುಗರು ರಸ್ತೆಯಲ್ಲಿ ಕಣ್ಣು ಕೋರೈಸುವ ಈ ಕಲರ್ ಚೇಂಜಿಂಗ್ ಡಿಸೈನ್ ಹೊರತುಪಡಿಸಿದರೆ, ಉಳಿದಂತೆ ಬೈಕ್‌ನ ಇಂಜಿನ್ ಮತ್ತು ಮುಖ್ಯ ವಿನ್ಯಾಸ ಸಾಮಾನ್ಯ ಕ್ಲಾಸಿಕ್ 650 ಮಾಡೆಲ್‌ನಂತೆಯೇ ಇರಲಿದೆ.

ಇದರ ಟಿಯರ್‌ಡ್ರಾಪ್ ಶೈಲಿಯ ಫ್ಯುಯೆಲ್ ಟ್ಯಾಂಕ್ ಮೇಲೆ ವಿಶೇಷವಾದ ‘125 ವರ್ಷಗಳ ಹೆಮ್ಮೆಯ ಲಾಂಛನ’ (125-year crest) ನೀಡಲಾಗಿದ್ದು, ಸೈಡ್ ಪ್ಯಾನಲ್‌ಗಳಲ್ಲಿ ಅನಿವರ್ಸರಿ ಬ್ಯಾಡ್ಜಿಂಗ್ ಮತ್ತು ಕ್ಲಾಸಿಕ್ ಶೈಲಿಯ ಕೈಯಿಂದ ಪೇಂಟ್ ಮಾಡಲಾದ ಪೈನ್‌ಸ್ಟ್ರಿಪ್‌ಗಳನ್ನು ನೀಡಲಾಗಿದೆ. ಜೊತೆಗೆ ರೈಡರ್‌ಗಳಿಗೆ ಪ್ರೀಮಿಯಂ ಫೀಲ್ ನೀಡಲು ಬ್ರೌನ್ ಕಲರ್‌ನ ಸುಂದರವಾದ ಕ್ವಿಲ್ಟೆಡ್ ಲೆದರ್ ಸೀಟ್ (Quilted Leather Seat) ಅನ್ನು ಅಳವಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ನ ಈ 125ನೇ ವರ್ಷದ ಮೈಲಿಗಲ್ಲು ಬ್ರಾಂಡ್‌ನ ಸುದೀರ್ಘ ಇತಿಹಾಸ ಮತ್ತು ಬೈಕಿಂಗ್ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಬಣ್ಣ ಬದಲಾಯಿಸುವ ಈ ಹೈಪರ್‌ಶಿಫ್ಟ್ ತಂತ್ರಜ್ಞಾನವು ಮೋಟಾರ್‌ಸೈಕಲ್ ಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್‌ನಲ್ಲಿ 648cc ಏರ್-ಕೂಲ್ಡ್ ಪ್ಯಾರಲಲ್-ಟ್ವಿನ್ ಇಂಜಿನ್ ಅನ್ನು ಬಳಸಲಾಗಿದೆ. ಇದೇ ಇಂಜಿನ್ ಅನ್ನು ಇಂಟರ್‌ಸೆಪ್ಟರ್ 650 ಮತ್ತು ಸೂಪರ್ ಮೆಟಿಯೋರ್ 650 ಬೈಕ್‌ಗಳಲ್ಲೂ ನೀಡಲಾಗಿದೆ. ಈ ಪವರ್‌ಫುಲ್ ಇಂಜಿನ್ 47hp ನಷ್ಟು ಗರಿಷ್ಠ ಪವರ್ ಮತ್ತು 52.3Nm ನಷ್ಟು ಬಲವಾದ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಹೈವೇ ರೈಡಿಂಗ್ ಮತ್ತು ದೀರ್ಘ ಪ್ರಯಾಣಕ್ಕೆ ಅತ್ಯಂತ ಸುಗಮ ಹಾಗೂ ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ.

ಬೆಲೆ ಎಷ್ಟು?

ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್‌ನ ಎಕ್ಸ್-ಶೋರೂಮ್ ಬೆಲೆ 4,25,589 ರೂಪಾಯಿಗಳಾಗಿದೆ. ಇದು ಸಾಮಾನ್ಯ ಕ್ಲಾಸಿಕ್ 650 ಬೇಸ್ ಮಾಡೆಲ್‌ಗಿಂತ (ಬೆಲೆ 3.68 ಲಕ್ಷ ರೂ. ಎಕ್ಸ್-ಶೋರೂಮ್, ಚೆನ್ನೈ) ಸುಮಾರು 58,000 ರೂಪಾಯಿ ದುಬಾರಿಯಾಗಿದೆ. ಹಾಗೂ ಇದರ ಟಾಪ್-ಸ್ಪೆಕ್ ಮಾಡೆಲ್‌ಗಿಂತ (ಬೆಲೆ 3.82 ಲಕ್ಷ ರೂ. ಎಕ್ಸ್-ಶೋರೂಮ್, ಚೆನ್ನೈ) ಬರೋಬ್ಬರಿ 43,500 ರೂಪಾಯಿಗಳಷ್ಟು ಅಧಿಕ ಬೆಲೆಯನ್ನು ಹೊಂದಿದೆ. ಬೆಲೆ ಕೊಂಚ ಹೆಚ್ಚಾಗಿದ್ದರೂ ಸಹ, ಬೈಕ್‌ನ ವಿಶಿಷ್ಟ ಗುಣಗಳು ಹಾಗೂ ಕಲೆಕ್ಟಬಲ್ ಎಡಿಷನ್ ಆಗಿರುವುದರಿಂದ ಬೈಕ್ ಪ್ರೇಮಿಗಳಿಗೆ ಇದು ಸೂಕ್ತ ಮೌಲ್ಯವನ್ನು ನೀಡುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ ಚಿತ್ರದ ಟಿವಿ ಹಾಗೂ OTT ಪ್ರಸಾರ ಹಕ್ಕುಗಳ ಕುರಿತು ಚಿತ್ರ ತಂಡದಿಂದ ಅಧಿಕೃತ ಸ್ಪಷ್ಟನೆಮುಂದಿನ ವಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ: ಸಿಎಂ ಡಿ ಕೆ ಶಿವಕುಮಾರ್BREAKING: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ 'ಕಾವೇರಿ ಮಾತೆ' ದರ್ಶನ | Talakaveriಮಾಯಾ ಜಿಂಕೆಯಂತೆ ಬಣ್ಣ ಬದಲಿಸುತ್ತಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ ಫೀಲ್ಡ್: ಕ್ಲಾಸಿಕ್ 650 ಹೈಪರ್‌ಶಿಫ್ಟ್ ಎಡಿಷನ್ ಬಿಡುಗಡೆನೀವು ಅನಾರೋಗ್ಯದಿಂದ ಬಳಲುತ್ತೀದ್ದೀರಾ? ಈ ಮಂತ್ರ ಪಠಿಸಿ ನೋಡಿ, ಆರೋಗ್ಯ ವೃದ್ಧಿ ಗ್ಯಾರಂಟಿBREAKING: ವಿಧಾನ ಪರಿಷತ್ ಚುನಾವಣೆ ಹಿನ್ನಲೆ: ಅ.23ರಂದು ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರುಸಿದ್ದರಾಮಯ್ಯ ಅವರೇ ನಿಮ್ಮ ರಕ್ತ ಕುದಿಯುತ್ತಿಲ್ವಾ?: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ: ಸಚಿವ ಟಿ.ರಘುಮೂರ್ತಿರಾಜ್ಯ ಸರ್ಕಾರದಿಂದ 8 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transferಸಾಗರದಲ್ಲಿ ಶೇ.60 ಕನ್ನಡ ನಾಮಫಲಕ ಕಡ್ಡಾಯಕ್ಕೆ ಜಮೀಲ್ ಸಾಗರ್ ಆಗ್ರಹ: ಎಸಿಗೆ ಮನವಿ