ಶಿವಮೊಗ್ಗ : ಬಿಜೆಪಿಯ ಭದ್ರಕೋಟೆಯಾಗಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಲ್ಲಿ ಈಗ ಕಾಂಗ್ರೆಸ್ಸಿನ ಭಾರತದ 2.0 ಪಾದಯಾತ್ರೆ ಶುರುವಾಗಿದೆ ಸೇವಾದಳದ ಬಾವುಟ ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕೋಟೆ, ಹೊಸನಗರ, ನೆಲವೊಡ್ಲು ಮೂಲಕ ಸಾಗಲಿದ್ದು, ಪಾದಯಾತ್ರೆ ಬಳಿಕ ಎಪಿಎಂಸಿ ಆವರಣದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಭಾಗಿಯಾಗಿದ್ದು ಸಚಿವರಾದಂತಹ ಕೆಎಸ್ ಬಸ್ವಂತಪ್ಪ ಡಾ.ಯತಿಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದು ಇನ್ನೂ ಪಾದಯಾತ್ರೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗೈರಾಗಿದ್ದಾರೆ. ನೇರವಾಗಿ ವೇದಿಕೆ ಸಮಾವೇಶದಲ್ಲಿ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ
ಇನ್ನು ಇದೇ ಸಂದರ್ಭದಲ್ಲಿ ಬಿವೈ ವಿಜಯೇಂದ್ರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 17 ಕೋಟಿ ಲಂಚ ಆರ್ಟಿಜಿಎಸ್ ಮಾಡಿಸಿಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿಯೇ ಪ್ರಪಂಚಕ್ಕೆ ಇವರು ಮಾದರಿ ನಮ್ಮ ಬಾವುಟ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ ವಿಜಯೇಂದ್ರ ರಾಜಕಾರಣದಲ್ಲಿ ಇನ್ನೂ ಎಲ್‌ಕೆಜಿ ನಾನು ಇದರಲ್ಲಿ ಪಿಎಚ್ಡಿ ಮಾಡಿದ್ದೇನೆ ಎಂದು ಬಿಕೆ ಹರಿಪ್ರಸಾದ್ ಬಿ ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು..