ತುಮಕೂರು : ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾವೊಂದರಲ್ಲಿ ಅಮಾನವೀಯ ಘಟನೆ ನಡೆದಿದ್ದು, 24 ಅಪ್ರಾಪ್ತ ಮಕ್ಕಳನ್ನು ಬಲವಂತದ ದುಡಿಮೆ ಮತ್ತು ದೈಹಿಕ ಕಿರುಕುಳಕ್ಕೆ ಒಳಪಡಿಸಿದ ಆರೋಪ ಕೇಳಿಬಂದಿದೆ. ಮದರಸಾದ ಕಿರುಕುಳ ತಾಳಲಾರದೆ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಬಿಹಾರ ಮೂಲದ ಈ ಮಕ್ಕಳನ್ನು ಕೆ.ಎಸ್.ಆರ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (RPF) ರಕ್ಷಿಸಿದೆ.
ಮಕ್ಕಳ ಕೈಯಲ್ಲಿ ಕಾಂಪೌಂಡ್ ಗೋಡೆ ಕಟ್ಟಿಸುವ ಕೆಲಸ ಮಾಡಿಸುತ್ತಿದ್ದ ಮೌಲ್ವಿ ಮೌಲಾಲಿ ಎಂಬಾತನ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ (CWC) ರಕ್ಷಣೆಯಲ್ಲಿದ್ದಾರೆ. ಆರೋಪಿಯ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆ ಹಾಗೂ ಬಾಲಕಾರ್ಮಿಕ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ಆಮಲಾಪುರ ಗ್ರಾಮದ ಮದರಸಾದಲ್ಲಿ 24 ಮಕ್ಕಳಿಗೆ ದೈಹಿಕ ಕಿರುಕುಳ ನೀಡಿದ ಮತ್ತು ಬಲವಂತವಾಗಿ ದುಡಿಸಿಕೊಂಡ ಆರೋಪ ಕೇಳಿಬಂದಿದೆ.ಧರ್ಮಬೋಧಕ ಮೌಲಾಲಿ ಎಂಬಾತನ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದರಸಾದ ದೌರ್ಜನ್ಯ ತಾಳಲಾರದೆ ತಪ್ಪಿಸಿಕೊಂಡಿದ್ದ ಬಿಹಾರ ಮೂಲದ 24 ಮಕ್ಕಳನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (RPF) ರಕ್ಷಿಸಿದೆ.ಮದರಸಾದಲ್ಲಿ ಮಕ್ಕಳಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡಲಾಗುತ್ತಿತ್ತು ಮತ್ತು ಮದರಸಾದ ಆವರಣದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸುವಂತಹ ಕಠಿಣ ಕೆಲಸಗಳನ್ನು ಬಲವಂತವಾಗಿ ಮಾಡಿಸಲಾಗುತ್ತಿತ್ತು ಎಂದು ಮಕ್ಕಳು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ 8 ರಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ (CWC) ವಶಕ್ಕೆ ನೀಡಲಾಗಿದ್ದು, ಅವರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಆರೋಪಿ ಮೌಲಾಲಿ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆ (JJ Act), ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.