LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ಉದ್ಯೋಗ ಖಾತ್ರಿಗೆ 'ನಕಲಿ GPS ಪೋಟೋ' ಅಪ್ ಲೋಡ್ ಮಾಡಿದ್ದವರಿಗೆ ಶಾಕ್: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ನಕಲಿ ಜಿಪಿಎಸ್ ಫೋಟೋ ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತನಿಖೆಗೆ ಆದೇಶ ನೀಡಿದ್ದಾರೆ.

ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು,   ಕೊಪ್ಪಳ ಜಿಲ್ಲೆಯಲ್ಲಿ ಮೇಟಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೆಲಸಗಾರರು ಹೋಗದಿದ್ದರೂ ವಿಡಿಯೋ ಚಿತ್ರೀಕರಣ ಮಾಡಿಸಿ ಆ ವಿಡಿಯೋ ಪ್ಲೇ ಆಗುತ್ತಿರುವಾಗ ಮತ್ತೊಂದು ಮೊಬೈಲ್ ನಲ್ಲಿ ಜಿಪಿಎಸ್ ಫೋಟೋ ತೆಗೆಸಿ ವಂಚಿಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದ್ದು, ಈ ಬಗ್ಗೆ ಜಂಟಿ ನಿರ್ದೇಶಕರ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 4 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಈ ರೀತಿ ನಕಲಿ ಜಿಪಿಎಸ್ ಫೋಟೋ ತೆಗೆದು ಪ್ರತಿನಿತ್ಯ 20-30 ಸಾವಿರ ರೂ.  ವಂಚನೆ ಮಾಡುತ್ತಿದ್ದಾರೆ, ಕೆಲಸ ಮಾಡದೆಯೇ ಹಾಜರಾತಿ ಹಾಕಿಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಈಶ್ವರ ಖಂಡ್ರೆ, ವರದಿಯಲ್ಲಿ ಅಂಶ ಸತ್ಯವಾಗಿದ್ದಲ್ಲಿ, ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಶಿಫಾರಸಿನೊಂದಿಗೆ ವಾಸ್ತವಾಂಶದ ವರದಿಯನ್ನು ಸಲ್ಲಿಸುವಂತೆ ಮತ್ತು ಈ ರೀತಿ ತಂತ್ರಜ್ಞಾನವನ್ನೇ ವಂಚಿಸಿ ಹಾಜರಾತಿ ಹಾಕದಂತೆ ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ಉಪಕ್ರಮ ಕೈಗೊಳ್ಳುವಂತೆಯೂ  ಸೂಚಿಸಿದ್ದಾರೆ. 

ಯಂತ್ರಗಳ ಮೂಲಕ ಕಾಮಗಾರಿ ನಡೆಸಿ, ಕೂಲಿ ಕಾರ್ಮಿಕರ ಅಕ್ರಮ ಹಾಜರಾತಿ ಹಾಕಿಸುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿಯಡಿ ಕೂಲಿಗೆ ಬರುವವರು ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಜಿಪಿಎಸ್ ಫೋಟೋ ತೆಗೆದು ಎನ್.ಎಂ.ಎಂ.ಎಸ್. ಅಪ್ ನಲ್ಲಿ ಅಪ್ ಲೋಡ್ ಮಾಡುವುದನ್ನು ಕಡ್ಡಾಯ ಮಾಡಿಲಾಗಿದೆ.  ಆದರೆ ಕೆಲವರು ಈ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು, ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ಪಶುವೈದ್ಯಾಧಿಕಾರಿ ಹುದ್ದೆಗೆ ₹40 ಲಕ್ಷ ಡೀಲ್: ED ತನಿಖೆಯಲ್ಲಿ ಬಹಿರಂಗBREAKING: KPSC ನೇಮಕಾತಿ ಅಕ್ರಮ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್, ಬಸವರಾಜ್ ಕನ್ನಾಲೆ 14 ದಿನ ED ವಶಕ್ಕೆರಾಜ್ಯದ ಜನತೆಗೆ ಮತ್ತೊಂದು ಶಾಕ್: ಶೀಘ್ರವೇ KSRTC ಬಸ್ ಟಿಕೆಟ್ ದರ ಹೆಚ್ಚಳ ಫಿಕ್ಸ್!ಅಶ್ವಿನೀ ದೇವತೆಗಳ ಬಗ್ಗೆ ಮಹತ್ವದ ಮಾಹಿತಿ ಓದಿಪೂರ್ವಜರಲ್ಲಿ ಎಷ್ಟು ವಿಧಗಳಿವೆ? ಇಲ್ಲಿದೆ ಮಾಹಿತಿಸಚಿವರು ಅಂದ್ರೆ ಹೀಗೆ ಇರಬೇಕು! ಒಂದೇ ಒಂದು ಮನವಿಗೆ ಕುಡಿಯುವ ನೀರಿನ ಸಮಸ್ಯೆ ಕ್ಲಿಯರ್!ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿ, ಬರ ಪರಿಹಾರ ಕಾಮಗಾರಿ ತಡೆಯಬೇಡಿ: ಸಿಇಒಗೆ MLC ರಮೇಶ್ ಬಾಬು ಪತ್ರ‘ನಾವು ಎಲ್ಲವನ್ನೂ ಕಳೆದುಕೊಂಡಿದ್ದೆವು’: ಮುಂಬೈನಲ್ಲಿ ಮನೆ ಕೊಳ್ಳುವ ತಂದೆಯ ಕನಸು ನೆನೆದು ಕಣ್ಣೀರಿಟ್ಟ ರೂಪಾಲಿ ಗಂಗೂಲಿ!ಸತತ 3 ದಿನ ಇಳಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂಗೆ ₹1.49 ಲಕ್ಷBREAKING : ಚುನಾವಣಾ ಆಯೋಗದ ವಿರುದ್ಧ INDIA ಬಣದ ಸಮರ; ಅ.2ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಘೋಷಣೆ