ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮಗು ಪಕ್ಕದ ಮನೆಯ ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದೆ.
ಅಮೀನಾ 18 ತಿಂಗಳ ಮೃತ ಕಂದಮ್ಮ. ನೀರಿನ ಟ್ಯಾಂಕ್ ನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ಮೃತದೇಹವನ್ನು ನೀರಿನ ಟ್ಯಾಂಕ್ ನಿಂದ ಹೊರತೆಗೆದ ಪೋಷಕರು ಮಗುವಿನ ಮೃತದೇಹವನ್ನು ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದಾರೆ.
ಉಪ್ಪಿನಲ್ಲಿ ಮೃತದೇಹವಿಟ್ಟರೆ ಮಗು ಬದುಕಿ ಬರುತ್ತದೆ ಎಂದು ಯಾರೋ ಹೇಳಿದ್ದರಂತೆ. ಮಗು ಮತ್ತೆ ಬದುಕಿ ಬರಲಿ ಎಂದು ಪೋಷಕರು ಮಗುವಿನ ಮುಖವನ್ನು ಬಿಟ್ಟು ಉಳಿದ ಮೃತದೇಹವನ್ನು ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದಾರೆ. ಮಗುವಿನ ಕಿವಿ ಬಳಿ ಮೊಬೈಲ್ ನಲ್ಲಿ ಕುರಾನ್ ಹಾಡು ಪ್ಲೇ ಮಾಡಿ ಪಕ್ಕದಲ್ಲಿಯೇ ಕುಳಿತು ಪೋಷಕರು ಮಗು ಬದುಕಿ ಬರಲೆಂದು ಪ್ರಾರ್ಥಿಸಿದ್ದಾರೆ. ಕಂದಮ್ಮನನ್ನು ಕಳೆದುಕೊಂಡಿರುವ ಪೋಷಕರ ಸ್ಥಿತಿ ಕರುಳು ಹಿಂಡುವಂತಿದೆ.