LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING: ರಾಜ್ಯ ಸರ್ಕಾರದಿಂದ 'ಇಂಜಿನಿಯರ್‌'ಗಳಿಗೆ ಬಿಗ್ ಗಿಫ್ಟ್: ಇನ್ಮುಂದೆ ಹೆಸರಿನ ಮುಂದೆ 'Er' ಬಳಸಲು ಅನುಮತಿಸಿ ಆದೇಶ!

ಬೆಂಗಳೂರು: ರಾಜ್ಯದ ಅಭಿಯಂತರರಿಗೆ (ಇಂಜಿನಿಯರ್) ಕರ್ನಾಟಕ ಸರ್ಕಾರ ಐತಿಹಾಸಿಕ ಕೊಡುಗೆಯೊಂದನ್ನು ನೀಡಿದ್ದು, ಇಂಜಿನಿಯರ್‌ಗಳು ತಮ್ಮ ಹೆಸರಿನ ಮುಂದೆ ಅಧಿಕೃತವಾಗಿ ‘Er’ (Engineer - ಅಭಿಯಂತರರು) ಎಂಬ ಪೂರ್ವಪ್ರತ್ಯಯ ಅಥವಾ ಶೀರ್ಷಿಕೆಯನ್ನು (Title) ಬಳಸಲು ಅನುಮತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರತಿ ವರ್ಷ ಸೆಪ್ಟೆಂಬರ್ 15 ಅನ್ನು ಅಧಿಕೃತವಾಗಿ 'ಇಂಜಿನಿಯರ್ಸ್ ದಿನ' ಎಂದು ಆಚರಿಸುವುದಾಗಿಯೂ ಘೋಷಿಸಿದೆ.

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಸಿಆಸುಇ) ಮಂಗಳವಾರ (ಸೆ. 15) ಈ ಸಂಬಂಧ ಮಹತ್ವದ ಸರ್ಕಾರಿ ಆದೇಶವನ್ನು (ಸಂಖ್ಯೆ: ಸಿಆಸುಇ 144 ಎಸ್‌ಸಿಇ 2026) ಪ್ರಕಟಿಸಿದೆ.

ಸರ್ ಎಂ.ವಿ. ಕೊಡುಗೆಗೆ ಸಂದ ಗೌರವ

ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ, ಶ್ರೇಷ್ಠ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ದೇಶದ ನೀರಾವರಿ, ಶಿಕ್ಷಣ, ಕೈಗಾರಿಕೆ ಹಾಗೂ ಆರ್ಥಿಕ ಕ್ಷೇತ್ರಕ್ಕೆ ನೀಡಿರುವ ಅನುಪಮ ಕೊಡುಗೆಯನ್ನು ಸರ್ಕಾರ ಸ್ಮರಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ.ವಿ. ಅವರು ನಿರ್ಮಿಸಿದ ಕೆ.ಆರ್.ಎಸ್ ಅಣೆಕಟ್ಟು, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳು ನಾಡಿನ ಪ್ರಗತಿಗೆ ಭದ್ರ ಬುನಾದಿ ಹಾಕಿವೆ ಎಂದು ಆದೇಶದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಕೇವಲ ಅಕ್ಷರಗಳಲ್ಲ, ಸೇವೆಯ ಸಂಕೇತ

ಸಮಾಜದ ಪ್ರಗತಿ ಹಾಗೂ ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಂತ್ರಿಕ ಪರಿಹಾರಗಳ ಮೂಲಕ ಭವಿಷ್ಯವನ್ನು ರೂಪಿಸುವ ಇಂಜಿನಿಯರ್‌ಗಳು ತಮ್ಮ ಹೆಸರಿನ ಮುಂದೆ ‘Er’ ಎಂದು ಹೆಮ್ಮೆಯಿಂದ ಬಳಸಿಕೊಳ್ಳಬಹುದು. ಇದು ಕೇವಲ ಎರಡು ಅಕ್ಷರಗಳಾಗಿರದೆ, ಅವರ ಜೀವಿತಾವಧಿಯ ಸೇವೆ ಮತ್ತು ವೃತ್ತಿಪರತೆಗೆ ಸಂದ ಗೌರವವಾಗಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯಪಾಲರ ಆದೇಶದಂತೆ ಸಿಆಸುಇ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀಟ ಅವರು ಈ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಇಲಾಖೆಗಳು ಹಾಗೂ ಗೆಜೆಟ್ ಮುದ್ರಣಾಲಯಕ್ಕೆ ಸುತ್ತೋಲೆ ರವಾನಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ಇಂಜಿನಿಯರಿಂಗ್ ಸಮುದಾಯದಿಂದ ಭಾರಿ ಮೆಚ್ಚುಗೆ ಮತ್ತು ಹರ್ಷ ವ್ಯಕ್ತವಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

news_1789484706_1_912.webp

 

news_1789484705_0_172.webp

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವ್ಯಾಪಾರಿಗಳಿಗೆ ಪಾವತಿಸುವ 2,000 ರೂ.ಗಿಂತ ಹೆಚ್ಚಿನ UPI ಪಾವತಿಗೆ 0.4% ಶುಲ್ಕ; ಗ್ರಾಹಕರಿಗೆ ಉಚಿತ ಸೇವೆ ಮುಂದುವರಿಕೆಭಯಾನಕ ಕ್ಷಣ…! ಜಲಪಾತದ ನೀರಲ್ಲಿ ಮಗು ಎತ್ತಿಕೊಂಡು ನಿಂತಿದ್ದ ವ್ಯಕ್ತಿ ಮೇಲೆ ಹಠಾತ್ ಬಿದ್ದ ಹಾವು | WATCH VIDEOdeoBREAKING: ಪಿಜಿಸಿಇಟಿಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟBREAKING: ರಾಜ್ಯ ಸರ್ಕಾರದಿಂದ 'ಇಂಜಿನಿಯರ್‌'ಗಳಿಗೆ ಬಿಗ್ ಗಿಫ್ಟ್: ಇನ್ಮುಂದೆ ಹೆಸರಿನ ಮುಂದೆ 'Er' ಬಳಸಲು ಅನುಮತಿಸಿ ಆದೇಶ!ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸುವಂತೆ ಒತ್ತಾಯಿಸುವುದು ಆಕೆಯ ಘನತೆಯ ಹಕ್ಕಿಗೆ ಭಂಗ ತರುತ್ತದೆ: ದೆಹಲಿ ಹೈಕೋರ್ಟ್BIG NEWS: ನಾಳೆಯಿಂದ 5 ದಿನ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಮದ್ಯ ಮಾರಾಟ' ನಿಷೇಧಶಾಸಕರನ್ನು ಹೆಗಲ ಮೇಲೆ ಹೊತ್ತು ಕುಣಿದ ಟ್ರಾಫಿಕ್ ಪೊಲೀಸರು; ವಿಡಿಯೋ ವೈರಲ್2,000 ರೂ.ಗಿಂತ ಹೆಚ್ಚಿನ UPI ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆಯೇ? ಹೊಸ ನಿಯಮಗಳ ಬಗ್ಗೆ ಸರ್ಕಾರ ಸ್ಪಷ್ಟನೆಸೆ.17ರಿಂದ ಒಂದು ತಿಂಗಳ ಕಾಲ 'ಸೇವಾ ಸಂಕಲ್ಪ' ಅಭಿಯಾನ: ಕೇಂದ್ರ ಸಚಿವ ಜೆ.ಪಿ ನಡ್ಡಾಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದನ್ನು ತೊಲಗಿಸಲು ನಾವು ಮುಂದಾಗಬೇಕು: ಜೆ.ಪಿ ನಡ್ಡಾ ಕರೆ