LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING: ನೂತನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ: ಇಂದಿನಿಂದ ತಮಿಳುನಾಡಿನಲ್ಲಿ ದಳಪತಿ ಯುಗಾರಂಭ| Vijay Oath

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸರ್ಕಾರ ರಚನೆಗೆ ರಾಜ್ಯಪಾಲರು ಕೊನೆಗೂ ಅನುಮತಿ ನೀಡಿದ್ದು, ದಳಪತಿ ವಿಜಯ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾಅರ ಸ್ವೀಕರಿಸಿದ್ದಾರೆ.

ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ನೂತನ ಮುಖ್ಯಮಂತ್ರಿ ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿದ್ದಾರೆ.

ಸದ್ಯ ವಿಜಯ್ ತಮ್ಮ ಸಂಪುಟದಲ್ಲಿ 9 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು, 9 ಶಾಸಕರು ಇದೇ ವೇಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸಮಾರಂಭದಲ್ಲಿ ಲೋಕಸಭಾ ವಿಪಕ್ಷನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯ್ ಅವರ ತಂದೆ-ತಾಯಿ ಕುಟುಂಬದವರು, ನಟಿ ತ್ರಿಷಾ ಕೃಷ್ಣನ್, ಅಪಾರ ಅಭಿಮಾನಿಗಳು, ಟಿವಿಕೆ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಟಿವಿಕೆ, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಸೇರಿದಂತೆ ವಿವಿಧ ಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬಲದ ಮೂಲಕ ವಿಜಯ್ ಸರ್ಕಾರ ರಚನೆ ಮಾಡಿದ್ದಾರೆ. 1967ರ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ಹೊರತಾಗಿ ಅಧಿಕಾರ ಹಿಡಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ. ಇಂದಿನಿಂದ ದ್ರಾವಿಡ ನಾಡಿನಲ್ಲಿ ವಿಜಯ್ ಯುಗಾರಂಭವಾದಂತಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೊಸ ಚರಿತ್ರೆ ಸೃಷ್ಟಿಸುವ ಮೂಲಕ ನಟ ವಿಜಯ್ ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದಿನಿಂದ ತಮಿಳುನಾಡಿನಲ್ಲಿ ಹೊಸ ಯುಗಾರಂಭವಾಗಲಿದೆ.

ದಳಪತಿ ವಿಜಯ್ ಚುನಾವಣೆಯಲ್ಲಿ ತಮಿಳುನಾಡಿನ ಜನತೆಗೆ ನೀಡಿದ್ದ ಭರವಸೆಗಳು: ಟಿವಿಕೆ ಪಕ್ಷದ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು:

  • ಮನೆಯ ಯಜಮಾನಿಗೆಗೆ ತಿಂಗಳಿಗೆ 2,500 ರೂ ಸಹಾಯಧನ
  • ಅನ್ನಪೂರ್ಣಿ ಸೂಪರ್ ಸಿಕ್ಸ್ ಸ್ಕೀಮ್ ಮೂಲಕ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 6 ಉಚಿತ ಎಲ್​ಪಿಜಿ ಸಿಲಿಂಡರ್
  • ವಾರ್ಷಿಕ 5 ಲಕ್ಷ ರೂಗಿಂತ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಣುಮಗಳ ಮದುವೆಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ
  • ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ.
  • ವೆಟ್ರಿ ಪ್ರಯಾಣಂ ಸ್ಕೀಮ್ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
  • ಕಾಮರಾಜರ್ ಕಲಿವಿ ಉರುದಿ ತಿಟ್ಟಂ ಸ್ಕೀಮ್ ಮೂಲಕ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಲು ಪೋಷಕರಿಗೆ ವರ್ಷಕ್ಕೆ 15,000 ರೂ ಸಹಾಯಧನ.
  • ಪ್ರತೀ ನವಜಾತ ಶಿಶುವಿಗೆ ಚಿನ್ನದ ಉಂಗುರ ಮತ್ತು ವೆಲ್ಕಮ್ ಕಿಟ್.
  • ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯ ವ್ಯವಸ್ಥೆ.
  • ಪ್ರತೀ ಮನೆಗೆ 200 ಯುನಿಟ್​ಗಳಷ್ಟು ಉಚಿತ ವಿದ್ಯುತ್
  • ಎಲ್ಲಾ ಮನೆಗಳಿಗೂ ಉಚಿತ ಕುಡಿಯುವ ನೀರಿನ ಸಂಪರ್ಕ.
  • ಕೃಷಿ ಮತ್ತು ರೈತರಿಗೆ ಬೆಂಬಲ
  • ಕೃಷಿ ಸಹಕಾರಿ ಬೆಳೆ ಸಾಲಗಳು ಶೇ. 50ರಷ್ಟು ಮನ್ನಾ
  • ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಕೃಷಿ ಬೆಂಬಲ.
  • ಯುವಜನರು, ವಿದ್ಯಾರ್ಥಿಗಳಿಗೆ ನೆರವು
  • ನಿರುದ್ಯೋಗಿಗಳಿಗೆ ಧನಸಹಾಯ ನೀಡಲಾಗುತ್ತದೆ. ಪದವೀಧರರಿಗೆ ತಿಂಗಳಿಗೆ 4,000 ರೂ, ಹಾಗು ಡಿಪ್ಲೊಮಾ ಆದವರಿಗೆ ತಿಂಗಳಿಗೆ 2,000-2,500 ರೂ ನೆರವು.
  • 5 ಲಕ್ಷ ಯುವಕರಿಗೆ ಸ್ಟೈಪೆಂಡ್ ಜೊತೆಗೆ ಇಂಟರ್ನ್​ಶಿಪ್.
  • 5 ಲಕ್ಷ ಹೊಸ ಸರ್ಕಾರಿ ನೌಕರಿಗಳು
  • 20 ಲಕ್ಷ ರೂವರೆಗೆ ಅಡಮಾನರಹಿತ ಶಿಕ್ಷಣ ಸಾಲ
  • ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾದ ಎಐ ಶಕ್ತ ಕೋಚಿಂಗ್ ಸೌಲಭ್ಯ
  • ನೂರು ಕಾಮರಾಜರ್ ಶಾಲೆಗಳು
  • ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ ಪಿಂಚಣಿ
  • ಪ್ರತೀ ಕುಟುಂಬಕ್ಕೆ 25 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ. ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯ.
  • ತಮಿಳುನಾಡನ್ನು ಮಾದಕವಸ್ತು ಮುಕ್ತ ಮಾಡಲು ವಿವಿಧ ಕ್ರಮಗಳು
  • ಮೀನುಗಾರಿಕೆ ಕಡಿಮೆ ಇರುವ ಸೀಸನ್​ನಲ್ಲಿ ಮೀನುಗಾರರಿಗೆ 27,000 ರೂ ಸಹಾಯಧನ
  • ಮೀನುಗಾರಿಕೆ ದೋಣಿಗೆ ಬಳಸುವ ಡೀಸಲ್​ಗೆ ಸಬ್ಸಿಡಿ, 25 ಲಕ್ಷ ರೂ ಅಪಘಾತ ವಿಮೆ
  • ಮೀನುಗಾರರಿಗೆ ಖಾಯಂ ವಸತಿ
Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ