LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸುಸ್ಥಿರ ಸಾರಿಗೆ ಸೇವೆ: ಬಿಎಂಟಿಸಿಗೆ ಪ್ರತಿಷ್ಠಿತ ELCITA ‘ಗೇಮ್ ಚೇಂಜರ್’ ಪ್ರಶಸ್ತಿ ಗೌರವ!

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾದ ಎಲೆಕ್ಟ್ರಾನಿಕ್ಸ್ ಸಿಟಿ ವ್ಯಾಪ್ತಿಯಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆ, ಸಾರ್ವಜನಿಕರಿಗೆ ಸುಲಭ ಸಂಪರ್ಕ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ನೀಡಿರುವ ಗಣನೀಯ ಕೊಡುಗೆಯನ್ನು ಗುರುತಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಪ್ರತಿಷ್ಠಿತ ‘ELCITA ಗೇಮ್ ಚೇಂಜರ್ ಪ್ರಶಸ್ತಿ’ ಒಲಿದಿದೆ.

ಎಲೆಕ್ಟ್ರಾನಿಕ್ಸ್ ಸಿಟಿಯ ದಿ ಒಟೆರ್ರಾ ಹೋಟೆಲ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 15) ಆಯೋಜಿಸಲಾಗಿದ್ದ 'ELCITA ಸಸ್ಟೈನಬಿಲಿಟಿ ಅವಾರ್ಡ್ಸ್ 2025-26' ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಅಧ್ಯಕ್ಷರಾದ ಡಾ. ವಿ. ವೀರಪ್ಪನ್ ಅವರಿಂದ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಪಿ. ಹೊಸಪೂಜಾರಿ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸುಸ್ಥಿರ ಅಭಿವೃದ್ಧಿಗೆ ಬಿಎಂಟಿಸಿ ಜೀವನಾಡಿ

ಎಲೆಕ್ಟ್ರಾನಿಕ್ಸ್ ಸಿಟಿಯ ಬೆಳವಣಿಗೆ, ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕರ ಜೀವನಮಟ್ಟಕ್ಕೆ ಪರಿವರ್ತನಾತ್ಮಕ ಬದಲಾವಣೆ ತರುತ್ತಿರುವ ಸಂಸ್ಥೆಗಳನ್ನು ಗೌರವಿಸುವ ಉದ್ದೇಶದಿಂದ ಎಲ್ಸಿಟಾ ಈ ‘ಗೇಮ್ ಚೇಂಜರ್’ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾಜಧಾನಿಯ ವಿವಿಧ ಭಾಗಗಳಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಹಲವು ದಶಕಗಳಿಂದ ಲಕ್ಷಾಂತರ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಿಎಂಟಿಸಿ ಕೈಗೆಟುಕುವ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಾರಿಗೆ ಸೇವೆ ನೀಡುತ್ತಾ ಬಂದಿರುವುದನ್ನು ಪ್ರಶಸ್ತಿ ಸಂದರ್ಭದಲ್ಲಿ ಶ್ಲಾಘಿಸಲಾಯಿತು.

ಟ್ರಾಫಿಕ್ ನಿಯಂತ್ರಣ ಮತ್ತು ಪರಿಸರ ಸ್ನೇಹಿ ಹೆಜ್ಜೆ

ಪ್ರತಿದಿನ ಸಾವಿರಾರು ಜನರು ಸಂಚರಿಸುವ ಈ ಮಾರ್ಗದಲ್ಲಿ ಬಿಎಂಟಿಸಿಯ ವ್ಯಾಪಕ ಬಸ್ ಜಾಲವು ಖಾಸಗಿ ವಾಹನಗಳ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದರಿಂದಾಗಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುವುದರ ಜತೆಗೆ ಇಂಧನ ಉಳಿತಾಯ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗಿದೆ. ಕೈಗಾರಿಕಾ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಬಿಎಂಟಿಸಿ ನೀಡಿರುವ ಬೆಂಬಲಕ್ಕೆ ಈ ಮನ್ನಣೆ ದೊರೆತಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯ ಬದ್ಧತೆಗೆ ಸಂದ ಸಂದ ಗೌರವ ಇದಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಯಾನಕ ಕ್ಷಣ…! ಜಲಪಾತದ ನೀರಲ್ಲಿ ಮಗು ಎತ್ತಿಕೊಂಡು ನಿಂತಿದ್ದ ವ್ಯಕ್ತಿ ಮೇಲೆ ಹಠಾತ್ ಬಿದ್ದ ಹಾವು | WATCH VIDEOಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸುಸ್ಥಿರ ಸಾರಿಗೆ ಸೇವೆ: ಬಿಎಂಟಿಸಿಗೆ ಪ್ರತಿಷ್ಠಿತ ELCITA ‘ಗೇಮ್ ಚೇಂಜರ್’ ಪ್ರಶಸ್ತಿ ಗೌರವ!Rice Price Hike: ರಾಜ್ಯ ಜನತೆಗೆ ಮತ್ತೊಂದು ಶಾಕ್: ಮತ್ತೆ ಅಕ್ಕಿ ದರ ಭಾರಿ ಏರಿಕೆ!ವ್ಯಾಪಾರಿಗಳಿಗೆ ಪಾವತಿಸುವ 2,000 ರೂ.ಗಿಂತ ಹೆಚ್ಚಿನ UPI ಪಾವತಿಗೆ 0.4% ಶುಲ್ಕ; ಗ್ರಾಹಕರಿಗೆ ಉಚಿತ ಸೇವೆ ಮುಂದುವರಿಕೆಭಯಾನಕ ಕ್ಷಣ…! ಜಲಪಾತದ ನೀರಲ್ಲಿ ಮಗು ಎತ್ತಿಕೊಂಡು ನಿಂತಿದ್ದ ವ್ಯಕ್ತಿ ಮೇಲೆ ಹಠಾತ್ ಬಿದ್ದ ಹಾವು | WATCH VIDEOdeoBREAKING: ಪಿಜಿಸಿಇಟಿಗೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟBREAKING: ರಾಜ್ಯ ಸರ್ಕಾರದಿಂದ 'ಇಂಜಿನಿಯರ್‌'ಗಳಿಗೆ ಬಿಗ್ ಗಿಫ್ಟ್: ಇನ್ಮುಂದೆ ಹೆಸರಿನ ಮುಂದೆ 'Er' ಬಳಸಲು ಅನುಮತಿಸಿ ಆದೇಶ!ಅತ್ಯಾಚಾರ ಸಂತ್ರಸ್ತೆಗೆ ಗರ್ಭಧಾರಣೆ ಮುಂದುವರಿಸುವಂತೆ ಒತ್ತಾಯಿಸುವುದು ಆಕೆಯ ಘನತೆಯ ಹಕ್ಕಿಗೆ ಭಂಗ ತರುತ್ತದೆ: ದೆಹಲಿ ಹೈಕೋರ್ಟ್BIG NEWS: ನಾಳೆಯಿಂದ 5 ದಿನ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 'ಮದ್ಯ ಮಾರಾಟ' ನಿಷೇಧಶಾಸಕರನ್ನು ಹೆಗಲ ಮೇಲೆ ಹೊತ್ತು ಕುಣಿದ ಟ್ರಾಫಿಕ್ ಪೊಲೀಸರು; ವಿಡಿಯೋ ವೈರಲ್