LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೋವಾದಲ್ಲಿ ಭೀಕರ ಪ್ಯಾರಾಸೇಲಿಂಗ್ ದುರಂತ: ಆಕಾಶದಲ್ಲೇ ಮಹಿಳೆಯ ಕುತ್ತಿಗೆಗೆ ಬಿಗಿದ ಹಗ್ಗ, ಎದೆನಡುಗಿಸುವ ವಿಡಿಯೋ ವೈರಲ್

ಗೋವಾ: ಪ್ರವಾಸೋದ್ಯಮದ ಸ್ವರ್ಗ ಹಾಗೂ ಪ್ರಮುಖ ಆಕರ್ಷಣೆಯಾಗಿರುವ ಗೋವಾದಲ್ಲಿ ಜಲ ಸಾಹಸ ಕ್ರೀಡೆ (Water Sports) ಪ್ರಿಯರೊಬ್ಬರಿಗೆ ಎದೆನಡುಗಿಸುವ ಘಟನೆಯೊಂದು ಎದುರಾಗಿದೆ. ಮೋಜು ಮತ್ತು ರೋಮಾಂಚನ ನೀಡಬೇಕಾಗಿದ್ದ ಪ್ಯಾರಾಸೇಲಿಂಗ್ ಆಟವು, ಕ್ಷಣಮಾತ್ರದಲ್ಲಿ ಮಹಿಳೆಯೊಬ್ಬರ ಜೀವಕ್ಕೇ ಕಂಟಕವಾಗಿ ಬಂದೊದಗಿದ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೃತ್ತಿಯಲ್ಲಿ ನ್ಯೂಟ್ರಿಷನಿಸ್ಟ್ (ಪೌಷ್ಟಿಕತಜ್ಞೆ) ಆಗಿರುವ ಸುಶ್ಮಿತಾ ಗೌರವ್ ಎಂಬುವವರೇ ಈ ಭೀಕರ ಅನುಭವಕ್ಕೆ ಒಳಗಾದ ಮಹಿಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡಿರುವ ಈ ರೀಲ್ ವಿಡಿಯೋ ಈಗಾಗಲೇ 23 ಲಕ್ಷಕ್ಕೂ ಹೆಚ್ಚು (2.3 Million) ವೀಕ್ಷಣೆಗಳನ್ನು ಪಡೆದಿದ್ದು, ಪ್ರವಾಸಿಗರಲ್ಲಿ ತಲ್ಲಣ ಸೃಷ್ಟಿಸಿದೆ.

https://www.instagram.com/reel/DX1pMOqyJaC/?utm_source=ig_web_copy_link

೧ ನಿಮಿಷದ ಥ್ರಿಲ್ ನನ್ನೆಲ್ಲವನ್ನೂ ಕಸಿದುಕೊಳ್ಳುತ್ತಿತ್ತು

ತಮಗಾದ ದಿಗಿಲು ಹುಟ್ಟಿಸುವ ಕಹಿ ಅನುಭವವನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುಶ್ಮಿತಾ, ಒಂದು ನಿಮಿಷದ ಥ್ರಿಲ್ ಬಹುತೇಕ ನನ್ನೆಲ್ಲವನ್ನೂ ಕಸಿದುಕೊಳ್ಳುತ್ತಿತ್ತು. ಗೋವಾದಲ್ಲಿ ಮೋಜಿನ ಪ್ಯಾರಾಸೇಲಿಂಗ್ ಆಗಿ ಆರಂಭವಾದ ಈ ಅನುಭವ, ಕೊನೆಗೆ ನಾನು ನಡುಸಮುದ್ರದಲ್ಲಿ ಜೀವಕ್ಕಾಗಿ ಹೋರಾಡುವಂತೆ ಮಾಡಿತು ಎಂದು ಬರೆದುಕೊಂಡಿದ್ದಾರೆ.

ಪ್ಯಾರಾಸೇಲಿಂಗ್ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ಅವರು ಸಮುದ್ರಕ್ಕೆ ಬಿದ್ದಿದ್ದಾರೆ. ನಾನು ನೀರಿಗೆ ಬಿದ್ದೆ. ಆ ವೇಳೆ ಹಗ್ಗ ನನ್ನ ಕುತ್ತಿಗೆಗೆ ಬಿಗಿದುಕೊಂಡಿತು. ಸಂಪೂರ್ಣ ಪ್ಯಾನಿಕ್ (ಆತಂಕ) ಸ್ಥಿತಿ, ನಿಶ್ಯಬ್ದ, ಭಯ ಕಾಡಿತ್ತು. ಪರಿಸ್ಥಿತಿ ನಮ್ಮ ಕೈ ಮೀರಿದೆ ಎಂದು ಅರಿವಾದಾಗ ಉಂಟಾಗುವ ಆ ಭಾವನೆಯನ್ನು ಯಾವುದೇ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲ. ಆದರೆ ನಾನು ಅದೃಷ್ಟವಂತೆ, ಯಾರೋ ಬಂದು ನನ್ನನ್ನು ಬದುಕಿಸಿದರು. ಎಲ್ಲರಿಗೂ ಬದುಕಲು ಇಂತಹ ಎರಡನೇ ಅವಕಾಶ ಸಿಗುವುದಿಲ್ಲ ಎಂದು ಅವರು ಆ ಕ್ಷಣವನ್ನು ನೆನೆದಿದ್ದಾರೆ.

ಪ್ರವಾಸಿಗರಿಗೆ ಸುಶ್ಮಿತಾ ನೀಡಿದ ಎಚ್ಚರಿಕೆ ಸಂದೇಶ:

ವಾಟರ್ ಸ್ಪೋರ್ಟ್ಸ್ ಮಾಡುವ ಮುನ್ನ ಎಚ್ಚರಿಕೆಯಿಂದ ಇರುವಂತೆ ವಿನಂತಿಸಿರುವ ಅವರು, ಯಾವುದೇ ಜಲ ಸಾಹಸ ಕ್ರೀಡೆಗಳನ್ನು ಪ್ರಯತ್ನಿಸುವ ಮುನ್ನ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನಿಸಿ, ಪರಿಶೀಲಿಸಿ ಮತ್ತು ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ. ಏಕೆಂದರೆ ಕೆಲವು ಅನುಭವಗಳು ಕೇವಲ ನೆನಪುಗಳಾಗಿ ಉಳಿಯುವುದಿಲ್ಲ… ಅವು ಆಘಾತವಾಗಿ (Trauma) ಕಾಡುತ್ತವೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶ:

ಈ ವಿಡಿಯೋದ ಬ್ಯಾಕ್‌ಗ್ರೌಂಡ್‌ನಲ್ಲಿ ಕೆಲವರು ನಗುತ್ತಿರುವ ಧ್ವನಿ ಕೇಳಿಸುತ್ತಿದ್ದು, ಇದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಮೆಂಟ್ ಬಾಕ್ಸ್‌ನಲ್ಲಿ ಸಾರ್ವಜನಿಕರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ:

ಮೊದಲ ಬಳಕೆದಾರ: ಆ ನಗು ನನಗೆ ಅಸಹ್ಯ ಹುಟ್ಟಿಸುತ್ತಿದೆ ಯಾರಿಗೂ ಇನ್ನೊಬ್ಬರ ಜೀವದ ಬಗ್ಗೆ ಗಂಭೀರತೆ ಇಲ್ಲ ಎಂಬುದನ್ನು ಇದು ನಿರೂಪಿಸುತ್ತದೆ. ಒಂದು ವೇಳೆ ನಿಮ್ಮ ಜೀವ ಅಪಾಯದಲ್ಲಿದ್ದಾಗ ನಗುತ್ತಿರುವ ಆ ವ್ಯಕ್ತಿಗಳು ನಿಮ್ಮ ಸ್ನೇಹಿತರಾಗಿದ್ದರೆ, ತಕ್ಷಣವೇ ಅವರ ಸ್ನೇಹವನ್ನು ಬಿಟ್ಟುಬಿಡಿ.

ಎರಡನೇ ಬಳಕೆದಾರ: “ಇಂತಹ ಸಾಹಸಗಳಿಗೆ ಭಾರತದಲ್ಲಿ ಅವಕಾಶ ನೀಡಬಾರದು. ಇಲ್ಲಿ ಸುರಕ್ಷತಾ ಗುಣಮಟ್ಟ ತೃತೀಯ ದರ್ಜೆಯದ್ದಾಗಿರುತ್ತದೆ. ಯಾರೂ ಇದರ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನರು ಇದನ್ನು ಕೇವಲ ಮೋಜು ಎಂದುಕೊಳ್ಳುತ್ತಾರೆ, ಆದರೆ ಇದು ಜೀವಕ್ಕೇ ಅಪಾಯ ತರಬಲ್ಲದು. ಪ್ಯಾರಾಸೇಲಿಂಗ್ ಇಂತಹ ವಾಟರ್ ಡಿಪ್ಸ್‌ಗಳಿಗಾಗಿ (ನೀರಿನಲ್ಲಿ ಮುಳುಗಿಸುವುದು) ಮಾಡಿದ್ದಲ್ಲ.”

ನೆಗೆಟಿವ್ ಕಮೆಂಟ್‌ಗಳಿಗೆ ಮತ್ತೊಂದು ಮೌಲ್ಯಯುತ ಸ್ಪಷ್ಟನೆ:

ಇದೇ ವೇಳೆ ವಿಡಿಯೋದಲ್ಲಿನ ನಗುವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ ಮತ್ತೊಬ್ಬ ಬಳಕೆದಾರರು, “ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿರುವವರಿಗೆ ಅಲ್ಲಿನ ಪದ್ಧತಿ ತಿಳಿದಿಲ್ಲ ಎನಿಸುತ್ತದೆ. ಸಾಮಾನ್ಯವಾಗಿ ಮೋಜಿನ ಭಾಗವಾಗಿ ಬೋಟ್ ವೇಗವನ್ನು ಕಡಿಮೆ ಮಾಡಿ ನಿಮ್ಮನ್ನು ನೀರಿನಲ್ಲಿ ಒಮ್ಮೆ ಮುಳುಗಿಸಿ (Dip), ನಂತರ ಮತ್ತೆ ಆಕಾಶಕ್ಕೆ ಎತ್ತುತ್ತಾರೆ. ಹಾಗಾಗಿ ವಿಡಿಯೋ ಮಾಡುತ್ತಿರುವ ವ್ಯಕ್ತಿ ಅದನ್ನು ಕೇವಲ ಮೋಜಿನ ಆಟ ಎಂದುಕೊಂಡು ನಗುತ್ತಿದ್ದಾನೆ” ಎಂದು ಬರೆದಿದ್ದಾರೆ.

ಅನೇಕರು ಸುಶ್ಮಿತಾ ಅವರ ಜಾಗೃತಿ ಮೂಡಿಸುವ ಪ್ರಯತ್ನವನ್ನು ಶ್ಲಾಘಿಸಿದ್ದು, ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಗೋವಾದಂತಹ ಪ್ರವಾಸಿ ತಾಣಗಳಲ್ಲಿ ಸ್ಥಳೀಯ ವಾಟರ್ ಸ್ಪೋರ್ಟ್ಸ್ ಆಯೋಜಕರು ಪ್ರವಾಸಿಗರ ಸುರಕ್ಷತೆಗೆ ಸೂಕ್ತ ಹಾಗೂ ಕಟ್ಟುನಿಟ್ಟಿನ ಆದ್ಯತೆ ನೀಡಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ರಾಜ್ಯಪಾಲ ಅರ್ಲೇಕರ್ ಭೇಟಿಯಾದ ಟಿವಿಕೆ ಮುಖ್ಯಸ್ಥ ವಿಜಯ್: ಸರ್ಕಾರ ರಚನೆಗೆ ಹಕ್ಕು ಮಂಡನೆಬಸ್ಸಿನೊಳಗೆ ನಿಲ್ಲಲು ಕಷ್ಟಪಡುತ್ತಿದ್ದ ಕಂಡಕ್ಟರ್‌ ನೋವಿಗೆ ಕರಗಿದ ಸಾರಿಗೆ ಸಂಸ್ಥೆ ; ಈಗ ಕಚೇರಿ ಕೆಲಸಕ್ಕೆ ನಿಯೋಜನೆ !ವಿಜಯ್ ಟಿವಿಕೆ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಕನ್ನಡಿಗ; ತುಮಕೂರಿನ ವ್ಯಕ್ತಿ ಈಗ ತಮಿಳುನಾಡಿನ ಶಾಸಕ!ಗಡಿಬಿಡಿಯಲ್ಲಿ 15 ರೂಪಾಯಿಗೆ ₹1515 ಪಾವತಿ ಮಾಡಿದ ಗ್ರಾಹಕ, ಪ್ರಾಮಾಣಿಕತೆ ಮೆರೆದ ಹಣ್ಣಿನ ವ್ಯಾಪಾರಿ!ಶೃಂಗೇರಿ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ; ಸಿಎಂ ಸಿದ್ದರಾಮಯ್ಯBIG NEWS: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು; ಜಾತ್ಯಾತೀತ ಶಕ್ತಿಗಳು ಒಂದಾಗಿ ಇರಬೇಕೆಂದು ಟಿವಿಕೆ ಜತೆ ಮೈತ್ರಿ: ಡಿಸಿಎಂ ಡಿ.ಕೆ.ಶಿವಕುಮಾರ್ಶಾಸಕರಿಗೆ ಟಿಕೆಟ್ ವಿತರಣೆಗೂ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆRain alert Karnataka : ರಾಜ್ಯದ ಹಲವೆಡೆ ನಾಳೆಯಿಂದ 3 ದಿನ ಭಾರೀ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆBIG NEWS: ವಿಜಯ್ ಭೇಟಿಯಾದ ಕಾಂಗ್ರೆಸ್ ಶಾಸಕರು; ನಾಳೆಯೇ ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕುವೆಂಪು ವಿವಿ ಘಟಿಕೋತ್ಸವ : ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು