LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸ್ಸಿನೊಳಗೆ ನಿಲ್ಲಲು ಕಷ್ಟಪಡುತ್ತಿದ್ದ ಕಂಡಕ್ಟರ್‌ ನೋವಿಗೆ ಕರಗಿದ ಸಾರಿಗೆ ಸಂಸ್ಥೆ ; ಈಗ ಕಚೇರಿ ಕೆಲಸಕ್ಕೆ ನಿಯೋಜನೆ !

ಹೈದರಾಬಾದ್ : ಅತಿಯಾದ ಎತ್ತರದಿಂದಾಗಿ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಕೆಲಸ ಮಾಡಲು ಕಷ್ಟಪಡುತ್ತಿದ್ದ ಕಂಡಕ್ಟರ್‌ ಒಬ್ಬರಿಗೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಮಾನವೀಯತೆಯ ಆಧಾರದ ಮೇಲೆ ನೆರವಿನ ಹಸ್ತ ಚಾಚಿದೆ.

ಏನಿದು ಘಟನೆ ?

ಅಮೀನ್ ಅನ್ಸಾರಿ ಎಂಬ ಕಂಡಕ್ಟರ್ ಸುಮಾರು 7 ಅಡಿ ಎತ್ತರವಿದ್ದಾರೆ. ಬಸ್‌ನ ಒಳಾಂಗಣ ವಿನ್ಯಾಸ ಮತ್ತು ಎತ್ತರ ಕಡಿಮೆ ಇರುವುದರಿಂದ, ಅವರು ಬಸ್‌ನಲ್ಲಿ ಓಡಾಡುವಾಗ ಪದೇ ಪದೇ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಿದ್ದರು ಮತ್ತು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರಯಾಣಿಕರ ದಟ್ಟಣೆ ಇರುವಾಗ ಬಸ್‌ನಲ್ಲಿ ನಿಂತು ಕೆಲಸ ಮಾಡುವುದು ಅವರಿಗೆ ಅಸಾಧ್ಯವಾಗಿತ್ತು.

ತನ್ನ ಕಷ್ಟವನ್ನು ಅನ್ಸಾರಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯದ ಗಂಭೀರತೆಯನ್ನು ಅರಿತ TSRTC ಆಡಳಿತ ಮಂಡಳಿ, ಅವರ ಆರೋಗ್ಯದ ಹಿತದೃಷ್ಟಿಯಿಂದ ಅನ್ಸಾರಿಯನ್ನು ಬಸ್ ಕಂಡಕ್ಟರ್ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಸದ್ಯ ಅವರನ್ನು ಬಸ್ ಡಿಪೋ ಕಚೇರಿಯ ಆಡಳಿತಾತ್ಮಕ ವಿಭಾಗಕ್ಕೆ (Administrative work) ವರ್ಗಾವಣೆ ಮಾಡಲಾಗಿದೆ.

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (TGSRTC), ಮೆಹದಿಪಟ್ನಂ ಡಿಪೋದ ನಿರ್ವಾಹಕ (Conductor) ಅಮೀನ್ ಅಹ್ಮದ್ ಅನ್ಸಾರಿ ಅವರ ‘ಔಟ್ ಆಫ್ ಡೆಸಿಗ್ನೇಷನ್’ (OD) ಕರ್ತವ್ಯದ ಅವಧಿಯನ್ನು ಒಂದು ವರ್ಷದ ನಂತರ ಮತ್ತೆ ವಿಸ್ತರಿಸಿದೆ.

ಅವರ ಅಸಾಧಾರಣ ಎತ್ತರ (198 ಸೆಂ.ಮೀ.) ಮತ್ತು ವೈದ್ಯಕೀಯ ಕಷ್ಟಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಅವರನ್ನು ಅಗತ್ಯಕ್ಕೆ ಅನುಗುಣವಾಗಿ ಬಸ್ ಪಾಸ್ ವಿಭಾಗಗಳಲ್ಲಿ ಅಥವಾ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (RGIA) ನಿಯೋಜಿಸಲಾಗುವುದು. ಈ ಕುರಿತು ಸಮರ್ಥ ಪ್ರಾಧಿಕಾರವು ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ತನ್ನ ಉದ್ಯೋಗಿಯ ಆರೋಗ್ಯ ಸಮಸ್ಯೆ ಮತ್ತು ದೈಹಿಕ ಮಿತಿಗಳನ್ನು ಗೌರವಿಸಿ, ಅವರಿಗೆ ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಮಾಡಿಕೊಟ್ಟ ಸಾರಿಗೆ ಸಂಸ್ಥೆಯ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. “ಈ ನಿರ್ಧಾರದಿಂದಾಗಿ ನನಗೆ ತುಂಬಾ ನೆಮ್ಮದಿ ಸಿಕ್ಕಿದೆ” ಎಂದು ಅನ್ಸಾರಿ ಸಂತಸ ವ್ಯಕ್ತಪಡಿಸಿದ್ದಾರೆ.ಈ ಪ್ರಕರಣವು ಕಷ್ಟದ ಪರಿಸ್ಥಿತಿಯಲ್ಲಿರುವ ಉದ್ಯೋಗಿಗಳಿಗೆ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ಸಂಸ್ಥೆಯೊಂದರ ಸಕಾರಾತ್ಮಕ ಧೋರಣೆಯನ್ನು ಎತ್ತಿ ತೋರಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ