ಬೆಂಗಳೂರು: ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಸನ್ಮಾಅನ ಮಾಡಲು ಹೋಗಿದ್ದವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜೈಲು ಪಾಲಾಗಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ನಿನ್ನೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಯುವಕರ ಗುಂಪೊಂದು ವಿಲ್ಸನ್ ಗಾರ್ಡನ್ ನಾಗ ಜೈಲಿನಿಂದ ಬಿಡುಗಡೆಯಾಗುವ ವೇಳೆ ಸನ್ಮಾನ ಮಾಡಲು ಮುಂದಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸಿಸಿಬಿ, ಒಸಿಡಬ್ಲ್ಯೂ ವಿಂಗ್ ಸನ್ಮಾನ ಮಾಡಲು ಮುಂದಾಗಿದ್ದ ಯುವಕರ ಗುಂಪನ್ನು ವಶಕ್ಕೆ ಪಡೆದಿದೆ. ಸನ್ಮಾನದ ಸಿದ್ಧತೆ ನಡೆಸಿದ್ದ ಗ್ಯಾಂಗ್ ಮೇಲೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ಪಡೆದು, ವಿಲ್ಸನ್ ಗಾರ್ಡನ್ ನಾಗನ ಮೇಲೂ ಕೂಡ ಕಣ್ಣಿಟ್ಟಿದ್ದಾರೆ.