LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯತೀಂದ್ರ ಡಿಸಿಎಂ, ನಿಮಗೆ ರಾಜ್ಯಸಭೆ ಸ್ಥಾನ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಮಯ್ಯಗೆ ಹೈಕಮಾಂಡ್ ಆಫರ್

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದರೂ, ಪ್ರಮುಖವಾಗಿ ಹೈಕಮಾಂಡ್ ನಾಯಕರ ನಡುವೆ ನಾಯಕತ್ವದ ಬದಲಾವಣೆ ವಿಚಾರವಾಗಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿದ್ಧರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ. ಬದಲಿಗೆ ಸಿದ್ಧರಾಮಯ್ಯನವರಿಗೆ ರಾಜ್ಯಸಭೆ ಸದಸ್ಯ ಸ್ಥಾನ ನೀಡಿ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ತಿಳಿಸಲಾಗಿದೆ. ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಡಿಸಿಎಂ ಸ್ಥಾನದ ಆಫರ್ ನೀಡಲಾಗಿದೆ. ಆದರೆ, ಇದನ್ನು ಒಪ್ಪದ ಸಿದ್ಧರಾಮಯ್ಯ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ನಾಯಕರ ಜತೆಗಿನ ಮಾತುಕತೆ ನಂತರ ಅಜ್ಞಾತ ಸ್ಥಳದಲ್ಲಿ ಆಪ್ತ ಸಚಿವರೊಂದಿಗೆ ಸಿಎಂ ಸಭೆ ನಡೆಸಿದ್ದಾರೆ. ಹೈಕಮಾಂಡ್ ಜೊತೆಗಿನ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ದೆಹಲಿಯ ಅಜ್ಞಾತ ಸ್ಥಳದಲ್ಲಿ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರ ಪ್ರಸ್ತಾಪಗಳ ಬಗ್ಗೆ ಆಪ್ತರಿಗೆ ಸಿಎಂ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಸಚಿವರಾದ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಹೆಚ್.ಸಿ. ಮಹದೇವಪ್ಪ, ಬೈರತಿ ಸುರೇಶ್ ಸೇರಿ ಹಲವರು ಭಾಗವಹಿಸಿದ್ದಾರೆ. ರಾಹುಲ್ ಗಾಂಧಿ ನೀಡಿದ ಆಫರ್ ಬಗ್ಗೆ ಆಪ್ತ ಸಚಿವರಿಗೆ ಸಿಎಂ ವಿಷಯ ತಿಳಿಸಿದ್ದಾರೆ,

ಸಿಎಂ ಜೊತೆ ಮಾತುಕತೆಯ ವೇಳೆ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅಧಿಕಾರ ಹಂಚಿಕೆ ಪ್ರಸ್ತಾಪ ಇಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಸ್ಥಾನ ನೀಡುವ ಬಗ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯನವರಿಗೆ ಡಿಸಿಎಂ ಪಟ್ಟ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಹೈಕಮಾಂಡ್ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ. ಹೈಕಮಾಂಡ್ ನ ಯಾವುದೇ ಆಫರ್ ಗಳನ್ನು ಸಿದ್ದರಾಮಯ್ಯ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಇನ್ನು ಸಿಎಂ ಬದಲಾವಣೆಯಾಗುವುದಿಲ್ಲ, ಅಂತಹದ್ದು ಏನೂ ಇಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕೆ.ಎನ್. ರಾಜಣ್ಣ, ನನಗಿರುವ ಮಾಹಿತಿ ಪ್ರಕಾರ ಸಿಎಂ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
IPL 2026: ಗುಜರಾತ್ ವಿರುದ್ಧ ಅಬ್ಬರಿಸಿ ಐಪಿಎಲ್ ಇತಿಹಾಸದಲ್ಲೇ ಯಾರೂ ಬಾರಿಸಿರದ ರನ್ ಬಾರಿಸಿ ಗುಜರಾತ್‌ನ ದಾಖಲೆಯನ್ನೇ ಮುರಿದ ಆರ್‌ಸಿಬಿಎಐ ತಂತ್ರಜ್ಞಾನದ ಹಬ್ ಆಗಿ ಕರ್ನಾಟಕ, ಎಐ ಸಕ್ರಿಯ ಆಡಳಿತ ರೂಪಿಸಲು ಸರ್ಕಾರದ ದೂರದೃಷ್ಟಿ: ಶಾಲಿನಿ ರಜನೀಶ್BIG BREAKING: ರಾಜ್ಯ ರಾಜಕೀಯದಲ್ಲಿ ಸ್ಪೋಟಕ ಬೆಳವಣಿಗೆ: ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ…? ಹೊಸ ಸಿಎಂ ಜತೆ ಯತೀಂದ್ರ ಸೇರಿ ನಾಲ್ವರಿಗೆ ಡಿಸಿಎಂ ಸ್ಥಾನIPL 2026 Qualifier 1: ನಾಯಕ ಪಟಿದಾರ್ ರೌದ್ರಾವತಾರ; ಗುಜರಾತ್‌ಗೆ ಕಠಿಣ ಗುರಿ ನೀಡಿದ ಆರ್‌ಸಿಬಿ!ಯತೀಂದ್ರ ಡಿಸಿಎಂ, ನಿಮಗೆ ರಾಜ್ಯಸಭೆ ಸ್ಥಾನ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಮಯ್ಯಗೆ ಹೈಕಮಾಂಡ್ ಆಫರ್ಎಸ್ಎಸ್ಎಲ್ಸಿ, ಐಟಿಐ, ಪಿಯುಸಿ, ಪದವೀಧರರಿಗೆ ಉದ್ಯೋಗಾವಕಾಶ: ಇಲ್ಲಿದೆ ಮಾಹಿತಿಅಪಘಾತದಲ್ಲಿ ಮೃತಪಟ್ಟ ಮಹಿಳೆ ಮೇಲಿನ ಚಿನ್ನಾಭರಣ ದೋಚಿದ್ದ ಕಳ್ಳ ಅರೆಸ್ಟ್ಹೆಣ್ಣುಮಕ್ಕಳೇ ಎಚ್ಚರ: ತೆಳ್ಳಗಿದ್ದವರಿಗೂ ಬಿಡದ ‘ಪಿಎಂಓಎಸ್’ ಕಾಯಿಲೆ, ಹೆಚ್ಚುತ್ತಿದೆ ಹಾರ್ಟ್ ಅಟ್ಯಾಕ್ ಭೀತಿ!BIG NEWS: ಪ್ರಧಾನಿಯಾಗಿ ಇಂದಿಗೆ 12 ವರ್ಷಗಳ ಪೂರೈಸಿದ ಮೋದಿIPL Qualifier 1: ಶೆಫರ್ಡ್‌ನನ್ನು ದಯವಿಟ್ಟು ತಂಡದಿಂದ ಹೊರಹಾಕಿ ಆತನನ್ನು ಕಣಕ್ಕಿಳಿಸಿ; ಫ್ಯಾನ್ಸ್ ಆಸೆಯಂತೆ ಅವನನ್ನು ಕರೆತಂದ ಆರ್‌ಸಿಬಿ!