ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದಲ್ಲಿ ಪುತ್ರನ ಸಾವಿನ ಸುದ್ದಿ ತಿಳಿದ ಬಳಿಕ ಕುಸಿದು ಬಿದ್ದ ತಾಯಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗಿರಿಜಾ(66) ಮೃತಪಟ್ಟ ತಾಯಿ. ಈಶ್ವರ ನಾಯ್ಕ ಟಪ್ಪಾಲುಕಟ್ಟೆ(35) ಮೃತಪಟ್ಟ ಮಗ. ಈಶ್ವರ ನಾಯ್ಕ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಜೂನ್ 6ರಂದು ಮೃತಪಟ್ಟಿದ್ದಾರೆ.
ಈಶ್ವರ ನಾಯ್ಕರ ಮೃತದೇಹವನ್ನು ಮನೆಗೆ ತಂದಾಗ ಪುತ್ರ ಮೃತಪಟ್ಟ ವಿಷಯ ತಿಳಿದ ತಾಯಿ ಗಿರಿಜಾ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂನ್ 8ರಂದು ಕೊನೆಯುಸಿರೆಳೆದಿದ್ದಾರೆ.