LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ: ಕೇಸ್ ದಾಖಲಿಸಲು ಮುಂದಾದ ವೇಳೆ ತಾಯಿಯಿಂದಲೂ ವಿರೋಧ: ಒಂಟಿಯಾಗಿ ಕಾನೂನು ಹೋರಾಟ ಮಾಡಿ ಗೆದ್ದ ಅಪ್ರಾಪ್ತ ಸಂತ್ರಸ್ತೆ

ಬೆಂಗಳೂರು: ರಕ್ಷಕನಾಗ ಬೇಕಿದ್ದ ತಂದೆಯೇ 16 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಬಾಲಕಿ ತಂದೆ ವಿರುದ್ಧ ಕೇಸ್ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದಂತೆ ಹೆತ್ತ ತಾಯಿಯೂ ಮಗಳನ್ನು ಬೈದು, ಗದರಿಸಿದ್ದಾರೆ. ಆದರೂ ಧೈರ್ಯಗೆಡದ ಸಂತ್ರಸ್ತ ಬಾಲಕಿ ಕಾಮುಕ ತಂದೆಯ ವಿರುದ್ಧ ಕಾನೂನು ಸಮರ ಸಾರಿ ಒಂಟಿಯಾಗಿ ಹೋರಾಡಿ ನ್ಯಾಯ ದಕ್ಕಿಸಿಕೊಂಡ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಕುಡಿದ ನಶೆಯಲ್ಲಿ ಹೆತ್ತ ತಂದೆ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ತಂದೆಯ ವಿರುದ್ಧವೇ ಕಾನೂನು ಹೋರಾಟ ಮಾಡಿ ಆತನಿಗೆ ಶಿಕ್ಷೆ ಕೊಡಿಸುವಲ್ಲಿ ಅಪ್ರಾಪ್ತೆ ಸಫಲವಾಗಿದ್ದಾಳೆ. 16 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ದಿನಗೂಲಿ ಕಾರ್ಮಿಕನಿಗೆ ನಗರದ ವಿಶೇಷ ನ್ಯಾಯಾಲಯವು 20 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಆರೋಪಿ ಬಿಹಾರ ಮೂಲದ ದಿನಗೂಲಿ ಕಾರ್ಮಿಕ. ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಉತ್ತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ಸಂತ್ರಸ್ತೆ ಆತನ ಹಿರಿಯ ಮಗಳಾಗಿದ್ದು, 9ನೇ ತರಗತಿಯ ಬಳಿಕ ಶಾಲೆ ತೊರೆದಿದ್ದಳು. ತಂದೆ ಮದುವೆಗೆ ಒತ್ತಾಯಿಸುತ್ತಿದ್ದ ಕಾರಣ ಉತ್ತರ ಪ್ರದೇಶದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಕ್ಕೆ ತೆರಳಿದ್ದಳು. ಈ ನಡುವೆ 2023ರ ಜೂನ್ 12ರಂದು ಆರೋಪಿಯ ತಾಯಿ ಬಿಹಾರದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಅಂತ್ಯಕ್ರಿಯೆಗಾಗಿ ಊರಿಗೆ ತೆರಳಿದ್ದರು. ಈ ವೇಳೆ ಮಗಳನ್ನು ಇನ್ನು ಮುಂದೆ ಮದುವೆಗೆ ಒತ್ತಾಯಿಸುವುದಿಲ್ಲ ಎಂದು ಆರೋಪಿ ಭರವಸೆ ನೀಡಿದ್ದ. ಬಳಿಕ ಆತ ಬೆಂಗಳೂರಿಗೆ ಹಿಂದಿರುಗಿದ್ದರೆ, ಮಗಳು ಕೆಲ ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಳು.

2023ರ ಜೂನ್ 27ರ ರಾತ್ರಿ ಆರೋಪಿ, ಮದ್ಯದ ಅಮಲಿನಲ್ಲಿದ್ದ ಉತ್ತರ ಪ್ರದೇಶದಲ್ಲಿದ್ದಾಗ ಮಗಳಿಗೆ ಪ್ರೇಮ ಸಂಬಂಧವಿತ್ತು ಎಂಬ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ಪರೀಕ್ಷೆ ಮಾಡಬೇಕೆಂಬ ನೆಪದಲ್ಲಿ ಅತ್ಯಾಚಾರ ಎಸಗಿದ್ದ. ರಾತ್ರಿ ವೇಳೆ ಊಟ ತರಲು ಮನೆಬಿಟ್ಟು ಹೊರಗೆ ಹೋದ ಸಂದರ್ಭದಲ್ಲಿ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಸಮೀಪದ ಉದ್ಯಾನವನದಲ್ಲಿ ರಾತ್ರಿ ಕಳೆದಿದ್ದಳು.

ಮರುದಿನ ಬೆಳಗ್ಗೆ ಆಟೋ ರಿಕ್ಷಾ ಚಾಲಕನೊಬ್ಬನನ್ನು ಕಂಡು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಮನವಿ ಮಾಡಿದ್ದಳು. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದರು.

ಬಾಲಕಿಯನ್ನು ರಕ್ಷಣೆಗಾಗಿ ಸರ್ಕಾರಿ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪೊಲೀಸರು ತಾಯಿಯನ್ನು ಬೆಂಗಳೂರಿಗೆ ಕರೆಸಿದಾಗ, ಮಗಳಿಗೆ ಬೆಂಬಲ ನೀಡುವ ಬದಲು ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ಆಕೆಯನ್ನು ಗದರಿಸಿದ್ದಳು ಎಂದು ತಿಳಿದುಬಂದಿದೆ. ಸಂತ್ರಸ್ತೆ ಮೂರು ವರ್ಷಗಳ ಕಾಲ ಒಬ್ಬಂಟಿಯಾಗಿ ನಿಂತು ಕಾನೂನು ಹೋರಾಟ ನಡೆಸಿದ್ದಳು.

ತಾಯಿ ಕೂಡ ಮಗಲಿಗೆ ಬೆಣ್ಬಲ ನೀಡದೇ ಆರೋಪಿ ಪತಿ ಪರ ನಿಂತಿದ್ದರು. ಅಂತಿಮವಾಗಿ ಸಂತ್ರಸ್ತೆ ಮೂರು ವರ್ಷಗಳ ಕಾನೂನು ಸಮರದ ಬಳಿಕ ಆರೋಪಿ ತಂದೆಗೆ ಶಿಕ್ಷೆ ಕೊಡಿಸಿದ್ದಾಳೆ. ನ್ಯಾಯಾಲಯ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆಯೊಂದಿಗೆ 1.10 ಲಕ್ಷ ರೂ. ದಂಡವನ್ನು ವಿಧಿಸಿದೆ.

2023ರ ಜೂನ್‌ನಲ್ಲಿ ಬಂಧನಕ್ಕೊಳಗಾದ ಆರೋಪಿಯು ಅಂದಿನಿಂದಲೂ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ. ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ಟೈಲರಿಂಗ್ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತಾ? ನಿಜಕ್ಕೂ ಇದರಿಂದ ಎಷ್ಟು ಪ್ರಯೋಜನ?ಸೌದಿ ಅರೇಬಿಯಾ ಮದೀನಾದಲ್ಲಿ 110 ಮಿಲಿಯನ್ ಟನ್ ಅಪರೂಪದ ಖನಿಜಗಳು, ಯುರೇನಿಯಂ ನಿಕ್ಷೇಪ ಪತ್ತೆಕೇವಲ ₹600ಕ್ಕೆ ನೀರಿನಿಂದಲೇ ಉರಿಯುವ ಒಲೆ; 16 ವರ್ಷದ ವಿದ್ಯಾರ್ಥಿಯ ಅದ್ಭುತ ಆವಿಷ್ಕಾರ!ನಟ ಯಶ್ ಅಭಿನಯದ ‘ಟಾಕ್ಸಿಕ್’ OTT ಬಿಡುಗಡೆ ದಿನಾಂಕ ಫಿಕ್ಸ್? ಯಾವಾಗ, ಎಲ್ಲಿ ಸ್ಟ್ರೀಮಿಂಗ್?ದಿಶಾ ಸಾಲಿಯನ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; CBI FIRನಲ್ಲಿ ಉದ್ಧವ್, ಆದಿತ್ಯ ಠಾಕ್ರೆ ಸೇರಿ ಕೆಲವು ಬಾಲಿವುಡ್ ನಟರ ಹೆಸರು!ಇದು ಸಿದ್ಧಿ-ಬುದ್ಧಿ ಗಣೇಶನ ಕಥೆ; ತಪ್ಪದೇ ಓದಿ, ನಿಮ್ಮ ಕಷ್ಟ ನಿವಾರಣೆಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದಾರುಣ ಸಾವುBREAKING : ಮಂಗಳೂರಿನಲ್ಲಿ ಸೆ.18ರಂದು ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ : ಸಿಎಂ ಡಿ.ಕೆ. ಶಿವಕುಮಾರ್ ವಿಡಿಯೋ ಸಂದೇಶ | WATCH VIDEOBREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಹಾಲಿನ ಟ್ಯಾಂಕರ್ ಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು.!ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡಬೇಕಾ? ಟೆನ್ಷನ್ ಬೇಡ.. ಹೀಗೆ ಬುಕ್ ಮಾಡಿ!