LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಪರೂಪದ ಘಟನೆ: ನ್ಯಾಯಾಧೀಶರ ಎದುರಲ್ಲೇ ವಿಚ್ಛೇದನದ ಅರ್ಜಿ ಹರಿದು ಹಾಕಿ ಪತಿಯನ್ನು ತಬ್ಬಿಕೊಂಡ ಪತ್ನಿ: ನಿಬ್ಬೆರಗಾದ ವಕೀಲರು

ನವದೆಹಲಿ: ಕೌಟುಂಬಿಕ ಬಿಕ್ಕಟ್ಟಿನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಕೊನೇ ಕ್ಷಣದಲ್ಲಿ ಕೋರ್ಟ್ ಆವರಣದಲ್ಲಿ ನ್ಯಾಯಾಧೀಶಮುಂದೆ ಅರ್ಜಿ ಹರಿದುಹಾಕಿ ಒಂದಾದ ಅಪರೂಪದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮಾವನ ಅನಾರೋಗ್ಯ ಸಂದರ್ಭದಲ್ಲಿ ಅಳಿಯ ತೋರಿದ ಪ್ರೀತಿ ಮತ್ತು ಕಾಳಜಿಯಿಂದಾಗಿ ಮನಸ್ಸು ಕರಗಿದ್ದು, ದಂಪತಿ ಮತ್ತೆ ಒಂದಾಗಿದ್ದಾರೆ. ನ್ಯಾಯಾಧೀಶರ ಎದುರೇ ಹೆಂಡತಿ ವಿಚ್ಛೇದನ ಪತ್ರಗಳನ್ನು ಹರಿದು ಗಂಡನನ್ನು ಅಪ್ಪಿಕೊಂಡಿದ್ದಾಳೆ. ಹಠ, ಅಹಂಗಿಂತ ಪ್ರೀತಿ ಸಂಬಂಧಗಳನ್ನು ಹೇಗೆ ಗಟ್ಟಿಯಾಗಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪರಸ್ಪರ ತಪ್ಪು ತಿಳಿವಳಿಕೆ, ಮನಸ್ಥಾಪಗಳಿಂದ ಮುರಿದು ಬೀಳುವ ಹಂತ ತಲುಪಿರುವ ಸಂಬಂಧಗಳನ್ನು ಕೇವಲ ಒಂದು ಸಣ್ಣ ಘಟನೆ ಹೇಗೆ ಒಂದು ಮಾಡುತ್ತದೆ ಎಂಬುದಕ್ಕೆ ದೆಹಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ಅಪರೂಪದ ಘಟನೆಯೇ ಸಾಕ್ಷಿಯಗೈದೆ.. ವಿಚ್ಛೇದನ ನೀಡಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ನ್ಯಾಯಾಧೀಶರ ಮುಂದೆಯೇ ಪರಸ್ಪರ ಒಂದಾಗಿದ್ದಾರೆ.

2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ತಿದ್ದ ದಂಪತಿ ನಡುವೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಜಗಳ ತಾರಕಕ್ಕೇರಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ತೀವ್ರ ಕಾನೂನು ಹೋರಾಟ ನಡೆಯುತ್ತಿತ್ತು. ಆದರೆ, ಮಗಳ ಸಂಸಾರ ಒಡೆದು ಹೋಗುತ್ತಿರುವುದನ್ನು ಕಂಡು ವಯಸ್ಸಾದ ತಂದೆ ತೀವ್ರವಾಗಿ ಮನನೊಂದು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮಗಳ ದುಃಖವನ್ನು ಕಂಡು ಆಘಾತಕ್ಕೊಳಗಾಗಿದ್ದ ಅವರು ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು.

ಮಾವನ ಅನಾರೋಗ್ಯ ಮತ್ತು ಇಡೀ ಕುಟುಂಬದ ಕಷ್ಟದ ಪರಿಸ್ಥಿತಿಯ ವಿಷಯ ತಿಳಿದ ತಕ್ಷಣ, ಅಳಿಯ ಕೋರ್ಟ್, ಕೇಸ್ ಮತ್ತು ಎಲ್ಲಾ ದ್ವೇಷಗಳನ್ನು ಸಂಪೂರ್ಣವಾಗಿ ಬದಿಗಿಟ್ಟು ಒಂದು ಕ್ಷಣವೂ ವ್ಯರ್ಥ ಮಾಡದೆ ಆಸ್ಪತ್ರೆಗೆ ಧಾವಿಸಿದ್ದಾರೆ. ಮಗನಂತೆ ಮಾವನ ಆರೈಕೆ ಮಾಡಿದ್ದಾರೆ. ಜವಾಬ್ದಾರಿಯುತ ಮಗನಂತೆ ಮಾವನನ್ನು ನೋಡಿಕೊಂಡಿದ್ದಾರೆ. ಚಿಕಿತ್ಸೆಗೆ ಅಗತ್ಯವಿದ್ದ ಭಾರಿ ಮೊತ್ತದ ಹಣವನ್ನು ತಾನೇ ಸ್ವತಃ ವ್ಯವಸ್ಥೆ ಮಾಡಿದ್ದಲ್ಲದೆ, ಹಗಲಿರುಳು ಆಸ್ಪತ್ರೆಯಲ್ಲೇ ಇದ್ದು ವೈದ್ಯರೊಂದಿಗೆ ಮಾತನಾಡಿ ಮಾವನಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು.

ವಿಚ್ಛೇದನ ಪಡೆಯಲು ಕೋರ್ಟಿನಲ್ಲಿ ಎದುರಾಳಿಯಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ತಮ್ಮ ಪಾಲಿನ ದೇವದೂತನಂತೆ ಮಗನಾಗಿ ನಿಂತದ್ದನ್ನು ಕಂಡು ಪತ್ನಿ ಮತ್ತು ಆಕೆಯ ಕುಟುಂಬದ ಮನಸ್ಸು ಕರಗಿದೆ.

ಆಸ್ಪತ್ರೆಯ ಐಸಿಯುನಲ್ಲಿ ಬರೆಯಲಾದ ಈ ಪ್ರೀತಿಯ ಅಧ್ಯಾಯ, ಮರುದಿನ ಕೋರ್ಟ್ ರೂಮಿನಲ್ಲಿ ಒಂದು ಅದ್ಭುತ ದೃಶ್ಯಕ್ಕೆ ಕಾರಣವಾಯಿತು. ಪ್ರಕರಣದ ಮುಂದಿನ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಫೈಲ್ ಬಂದಾಗ, ವಕೀಲರು ತಮ್ಮ ವಾದ ಮಂಡಿಸಲು ಸಿದ್ಧರಾಗುತ್ತಿದ್ದಂತೆಯೇ, ಮಹಿಳೆ ಇದ್ದಕ್ಕಿದ್ದಂತೆ ಮುಂದೆ ಬಂದು, ತನ್ನ ಕೈಯಲ್ಲಿದ್ದ ವಿಚ್ಛೇದನ ಅರ್ಜಿ ಪತ್ರಗಳನ್ನು ಎಲ್ಲರ ಮುಂದೆಯೇ ಹರಿದು ಹಾಕಿ, ಕೋರ್ಟ್ ಹಾಲ್ ನಲ್ಲಿದ್ದ ಪತಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾಳೆ. ಪತಿ ಕೂಡ ಪತ್ನುಯನ್ನು ಸಂತೈಸಿದ್ದಾನೆ. ಈ ಘಟನೆ ಕಂಡು ಇಡೀ ಕೋರ್ಟ್ ಬೆಕ್ಕಸ ಬೆರಗಾಗಿದೆ. ವಿಚ್ಛೇದನದ ಹಂತ ತಲುಪಿದ್ದ ಪತಿ ಪತ್ನಿ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆಯೇ ಒಂದಾಗಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ