ಬೀದರ್: ನರೇಗಾ ಯೋಜನೆ(ವಿಬಿ ಜಿ ರಾಮ್ ಜಿ) ಅಡಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿದು ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಉಡಬನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕನ್ನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗಮ್ಮ(47) ಮೃತಪಟ್ಟವರು. ನರೇಗಾ ಯೋಜನೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾಗಮ್ಮ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ನಾಗಮ್ಮನವರಿಗೆ ಏನಾಗಿದೆ ಎಂದು ಪರಿಶೀಲಿಸಿದಾಗ ಅವರಿಗೆ ಹಾವು ಕಡಿದಿರುವುದು ಗೊತ್ತಾಗಿದೆ.
ಕೂಡಲೇ ನಾಗಮ್ಮ ಅವರನ್ನು ಮನ್ನಾಏಖೇಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.