LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡಿಗರಿಗೆ ಗುಡ್ ನ್ಯೂಸ್ ಬೆಂಗಳೂರಿನಿಂದ ಉದಯಪುರಕ್ಕೆ ಆಕಾಸಾ ಏರ್‌ನ ನೇರ ವಿಮಾನ ಸೇವೆ ಆರಂಭ: ಪ್ರಯಾಣ ಇನ್ನಷ್ಟು ಸುಲಭ

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಹಾಗೂ ಪ್ರವಾಸಿಗರಿಗೆ ಅಕಾಸಾ ಏರ್ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಡೆಸ್ಟಿನೇಶನ್ ವೆಡ್ಡಿಂಗ್ ಹಾಗೂ ಪ್ರವಾಸೋದ್ಯಮಕ್ಕೆ ಜಗತ್ಪ್ರಸಿದ್ಧವಾಗಿರುವ ರಾಜಸ್ಥಾನದ ಐತಿಹಾಸಿಕ ನಗರಿ ಉದಯಪುರಕ್ಕೆ ಬೆಂಗಳೂರು ಮತ್ತು ಮುಂಬೈನಿಂದ ಅಕ್ಟೋಬರ್ 15, 2026 ರಿಂದ ಪ್ರತಿದಿನ ನೇರ ವಿಮಾನ ಸೇವೆ ಆರಂಭಿಸುವುದಾಗಿ ಸಂಸ್ಥೆ ಪ್ರಕಟಿಸಿದೆ. ಈ ಹೊಸ ಮಾರ್ಗದ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದೆ.

ಬೆಂಗಳೂರು-ಉದಯಪುರ ವಿಮಾನದ ವೇಳಾಪಟ್ಟಿ

ಬೆಂಗಳೂರಿನಿಂದ ಉದಯಪುರ (QP 1527): ಪ್ರತಿದಿನ ಬೆಳಗ್ಗೆ 8:40ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ, ಬೆಳಗ್ಗೆ 10:55ಕ್ಕೆ ಉದಯಪುರ ತಲುಪಲಿದೆ.

ಉದಯಪುರಿಂದ ಬೆಂಗಳೂರು (QP 1528): ಬೆಳಗ್ಗೆ 11:35ಕ್ಕೆ ಉದಯಪುರದಿಂದ ಟೇಕ್-ಆಫ್ ಆಗುವ ವಿಮಾನ, ಮಧ್ಯಾಹ್ನ 1:55ಕ್ಕೆ ಮರಳಿ ಬೆಂಗಳೂರು ತಲುಪಲಿದೆ.

ಇದೇ ರೀತಿ ಮುಂಬೈ ಮತ್ತು ಉದಯಪುರ ನಡುವೆಯೂ ಪ್ರತಿದಿನ ಮಧ್ಯಾಹ್ನ ವಿಮಾನ ಸೇವೆ ಲಭ್ಯವಿರಲಿದೆ.

ಮುಂಬೈನಿಂದ ಉದಯಪುರ (QP 1155): ಪ್ರತಿದಿನ ಬೆಳಗ್ಗೆ 11:25ಕ್ಕೆ ಮುಂಬೈನಿಂದ ಹೊರಡುವ ವಿಮಾನ, ಅಪರಾಹ್ನ 13:00ಕ್ಕೆ ಉದಯಪುರ ತಲುಪಲಿದೆ.

ಉದಯಪುರದಿಂದ ಬೆಂಗಳೂರು (QP 1156): ಮಧ್ಯಾಹ್ನ13:40ಕ್ಕೆ ಉದಯಪುರದಿಂದ ಟೇಕ್-ಆಫ್ ಆಗುವ ವಿಮಾನ, ಅಪರಾಹ್ನ 15:10ಕೆ ಮರಳಿ ಮುಂಬೈ
ತಲುಪಲಿದೆ.ಕನ್ನಡಿಗರ ಪ್ರಯಾಣದ ಅನುಕೂಲಕ್ಕಾಗಿ ಪ್ರತಿದಿನ ಒಂದು ವಿಮಾನ ಕಾರ್ಯನಿರ್ವಹಿಸಲಿದೆ.

ಉದಯಪುರಕ್ಕೇ ಏಕೆ ಮೊದಲ ಆದ್ಯತೆ?

ಉದಯಪುರವು ಭಾರತದ ಪ್ರೀಮಿಯಂ ಪ್ರವಾಸೋದ್ಯಮ, ಅದ್ದೂರಿ ವಿವಾಹಗಳು (Destination Weddings) ಮತ್ತು ಸಾಂಸ್ಕೃತಿಕ ಪ್ರಯಾಣದ ಜಾಗತಿಕ ಕೇಂದ್ರವಾಗಿದೆ. ಮೆಟ್ರೋ ನಗರಗಳಿಂದ ಈ ಐತಿಹಾಸಿಕ ತಾಣಕ್ಕೆ ದಿನೇ ದಿನೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅಕಾಸಾ ಏರ್ ಈ ಆಯಕಟ್ಟಿನ ಮಾರ್ಗವನ್ನು ಪರಿಚಯಿಸಿದೆ.ಈ ಹೊಸ ಹೆಜ್ಜೆ ಕುರಿತು ಅಕಾಸಾ ಏರ್‌ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್ ಮಾತನಾಡಿದ್ದಾರೆ:

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಉದಯಪುರಕ್ಕೆ ನಮ್ಮ ವಿಮಾನ ಸೇವೆ ಆರಂಭಿಸಲು ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ಮತ್ತು ಮುಂಬೈನ ಗ್ರಾಹಕರು ಈಗ ದೇಶದ ಅತ್ಯಂತ ಸುಂದರ ತಾಣವೊಂದಕ್ಕೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ಪ್ರಯಾಣಿಸಬಹುದು. ಗ್ರಾಹಕ-ಸ್ನೇಹಿ ಜಾಲವನ್ನು ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.

ಪ್ರಯಾಣಿಕರಿಗೆ ಸಿಗಲಿರುವ ಹೈಟೆಕ್ ಸೌಲಭ್ಯಗಳು ಏನೆಲ್ಲಾ?

ಅಕಾಸಾ ಏರ್ ತನ್ನ ವಿನೂತನ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳ ಮೂಲಕವೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಹೊಸ ವಿಮಾನಗಳಲ್ಲಿ ಪ್ರಯಾಣಿಕರಿಗೆ ಈ ಕೆಳಗಿನ ಪ್ರಮುಖ ಸೌಲಭ್ಯಗಳು ಸಿಗಲಿವೆ:

ವಿಶಾಲವಾದ ಲೆಗ್‌ರೂಮ್: ಆರಾಮದಾಯಕ ಪ್ರಯಾಣಕ್ಕಾಗಿ ಸೀಟ್‌ಗಳ ನಡುವೆ ಹೆಚ್ಚಿನ ಜಾಗ (Legroom) ಕಲ್ಪಿಸಲಾಗಿದೆ.

ಇನ್-ಸೀಟ್ ಚಾರ್ಜಿಂಗ್: ಪ್ರಯಾಣದ ವೇಳೆ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಹೆಚ್ಚಿನ ಸೀಟ್‌ಗಳಲ್ಲಿ ಯುಎಸ್‌ಬಿ (USB) ಪೋರ್ಟ್‌ಗಳನ್ನು ಅಳವಡಿಸಲಾಗಿದೆ.

ಆಕಾಶದಲ್ಲೇ ರಾಯಲ್ ಊಟ: ಕೆಫೆ ಅಕಾಸಾ (Cafe Akasa) ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಆಹಾರ, ಹಬ್ಬದ ವಿಶೇಷ ಮೆನುಗಳು ಮತ್ತು ಟ್ರೆಂಡಿ ಕೊಂಬುಚಾದಂತಹ ವಿಶೇಷ ಪಾನೀಯಗಳ ಸೌಲಭ್ಯವಿದೆ.

ಕಸ್ಟಮೈಸ್ಡ್ ಸೇವೆಗಳು: ಪ್ರಯಾಣಿಕರ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಅಕಾಸಾ ಏರ್ ನೆಟ್‌ವರ್ಕ್:

ಸದ್ಯ ಅಕಾಸಾ ಏರ್ ಸಂಸ್ಥೆಯು ದೇಶೀಯವಾಗಿ ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ಪ್ರಮುಖ ನಗರಗಳಿಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೋಹಾ, ಅಬುಧಾಬಿ ಮುಂತಾದ 7 ಜಾಗತಿಕ ತಾಣಗಳಿಗೆ ಯಶಸ್ವಿಯಾಗಿ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ