ಬೆಂಗಳೂರು: ಪ್ರೀತಿ ಮುಂದುವರಿಸಲು ನಿರಾಕರಿಸಿದ್ದಕ್ಕೆ ಪ್ರಿಯತಮೆಗೆ ಚಾಕುವಿನಿಂದ ಇರಿದ ಪ್ರಿಯಕರ ನಂತರ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ವರ್ತೂರಿನ ರಾಮಗೊಂಡನಹಳ್ಳಿಯ ಮನೆಯಲ್ಲಿ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ನಂದಿನಿ ದಾಸ್(18) ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ನವಾಜ್ ಎಂಬಾತ ಕೃತ್ಯವೆಸಗಿದ್ದಾನೆ.
ನವಾಜ್ ಪ್ರೀತಿಸಲು ನಂದಿನಿ ಪೋಷಕರು ಒಪ್ಪಿರಲಿಲ್ಲ. ಬೇರೊಬ್ಬನ ಜೊತೆಗೆ ನಂದಿನಿ ಮದುವೆಗೆ ನಿರ್ಧರಿಸಿದ್ದರು. ಈ ವಿಚಾರ ತಿಳಿದು ಮನೆಗೆ ಬಂದಿದ್ದ ನವಾಜ್ ನಂದಿನಿ ದಾಸ್ ಗೆ ಚಾಕುವಿನಿಂದ ಇರಿದಿದ್ದಾನೆ. ಯಾರೂ ಇಲ್ಲದ ವೇಳೆ ಚಾಕು ಸಮೇತ ಬಂದಿದ್ದ ಆರೋಪಿ ನವಾಜ್ ನೀನು ಬೇರೆಯವರನ್ನು ಮದುವೆಯಾಗಬೇಡವೆಂದು ಗಲಾಟೆ ಮಾಡಿದ್ದಾನೆ. ನಿನ್ನನ್ನು ಪ್ರೀತಿಸಲು ನಮ್ಮ ಮನೆಯವರು ಒಪ್ಪುತ್ತಿಲ್ಲ. ಪೋಷಕರು ಹೇಳಿದಂತೆ ಕೇಳುತ್ತೇನೆ ಎಂದು ನಂದಿನಿ ತಿಳಿಸಿದ್ದಾಳೆ.
ನಂದಿನಿ ಹೇಳಿಕೆಯಿಂದ ಕೋಪಗೊಂಡು ನವಾಜ್ ಚಾಕುವಿನಿಂದ ಇರಿದಿದ್ದಾನೆ. ನಂದಿನಿ ದಾಸ್ ಕುತ್ತಿಗೆ, ಕೈಗಳು ತೊಡೆಗೆ ಚಾಕುವಿನಿಂದ ಇರಿದು ನಂತರ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂದಿನಿ ದಾಸ್ ಮತ್ತು ನವಾಜ್ ಅವರ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದಾರೆ. ನಂದಿನಿ ದಾಸ್ ಮತ್ತು ನವಾಜ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.