LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೌರಿ-ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್ : ಹೂವು, ಹಣ್ಣು, ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ.!

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರ ಮನೆಮಾಡಿದ್ದು, ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಆದರೆ, ಮಳೆಯ ಕೊರತೆ ಹಾಗೂ ಬರದ ಹಿನ್ನೆಲೆಯಲ್ಲಿ ಇಳುವರಿ ಕುಸಿದಿರುವುದರಿಂದ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಹಾಗೂ ಬೇಳೆ-ಕಾಳುಗಳ ದರ ತೀವ್ರವಾಗಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ದಾಸರಹಳ್ಳಿ, ಪೀಣ್ಯ ಹಾಗೂ ಗಾಂಧಿ ಬಜಾರ್‌ಗಳಲ್ಲಿ ಹಬ್ಬದ ವ್ಯಾಪಾರಕ್ಕಾಗಿ ಜನಸಾಗರವೇ ಹರಿದುಬರುತ್ತಿದೆ. ಸಗಟು ದರದಲ್ಲೇ ಏರಿಕೆ ಕಂಡುಬಂದಿರುವ ಕಾರಣ ಚಿಲ್ಲರೆ ಮಾರುಕಟ್ಟೆಯಲ್ಲೂ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿದೆ.

ಹೂವುಗಳ ದರ ವಿವರ (ಪ್ರತಿ ಕೆ.ಜಿ.ಗೆ):

ಕೆ.ಆರ್. ಮಾರುಕಟ್ಟೆಯಲ್ಲಿ ಕನಕಾಂಬರ ಹೂವು ಅತ್ಯಂತ ದುಬಾರಿಯಾಗಿದ್ದು, ಕೆ.ಜಿ.ಗೆ ₹1,000 ದಿಂದ ₹1,300 ವರೆಗೆ ಮಾರಾಟವಾಗುತ್ತಿದೆ. ಮಲ್ಲಿಗೆ ₹500 ರಿಂದ ₹600, ಸೇವಂತಿಗೆ ಮತ್ತು ಗುಲಾಬಿ ತಲಾ ₹200 ರಿಂದ ₹250, ಸುಗಂಧರಾಜ ₹250 ರಿಂದ ₹300 ಹಾಗೂ ಚೆಂಡು ಹೂವು ₹80 ರಿಂದ ₹100 ರವರೆಗೆ ಮಾರಾಟವಾಗುತ್ತಿದೆ.

ಹಣ್ಣುಗಳ ದರ ವಿವರ (ಪ್ರತಿ ಕೆ.ಜಿ.ಗೆ):

ಹಣ್ಣುಗಳ ಮಾರುಕಟ್ಟೆಯಲ್ಲೂ ದರ ಏರಿಕೆ ಮುಂದುವರಿದಿದ್ದು, ಸೇಬು ಕೆ.ಜಿ.ಗೆ ₹200 ರಿಂದ ₹300, ದಾಳಿಂಬೆ ₹100 ರಿಂದ ₹250, ದ್ರಾಕ್ಷಿ ₹120 ರಿಂದ ₹150, ಮೂಸಂಬಿ ₹60 ರಿಂದ ₹80, ಏಲಕ್ಕಿ ಬಾಳೆಹಣ್ಣು ₹100 ರಿಂದ ₹120, ಸಪೋಟಾ ₹120 ರಿಂದ ₹140, ಕಿತ್ತಳೆ ₹80 ರಿಂದ ₹100 ಹಾಗೂ ಪಚ್ಚಬಾಳೆ ₹40 ರಿಂದ ₹50 ಕ್ಕೆ ಮಾರಾಟವಾಗುತ್ತಿದೆ.

ತರಕಾರಿ ಹಾಗೂ ಪೂಜಾ ಸಾಮಗ್ರಿಗಳು:

ತರಕಾರಿಗಳ ಪೈಕಿ ಈರುಳ್ಳಿ ಕೆ.ಜಿ.ಗೆ ₹60-₹70, ಬೀನ್ಸ್ ₹80-₹100, ಬೀಟ್‌ರೂಟ್ ₹50, ಬಿಳಿ ಬದನೆಕಾಯಿ ₹66, ಆಲೂಗಡ್ಡೆ ₹40-₹50, ಟೊಮ್ಯಾಟೊ ₹25-₹30 ಹಾಗೂ ಹೀರೆಕಾಯಿ ₹60 ರ ದರದಲ್ಲಿ ಮಾರಾಟವಾಗುತ್ತಿದೆ.

ಇದಲ್ಲದೆ, ಪೂಜೆಗೆ ಅಗತ್ಯವಾದ ಗರಿಕೆ ಒಂದು ಕಟ್ಟು ₹25, ಬಿಲ್ವಪತ್ರೆ ₹50, ಮಾವಿನ ಎಲೆ ₹30-₹40 ಹಾಗೂ ಬಾಳೆಕಂಬ ಜೋಡಿಗೆ ₹50 ರಿಂದ ₹200 ರವರೆಗೆ ಬೆಲೆ ನಿಗದಿಯಾಗಿದೆ. ಬಾಗಿನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬಾಗಿನದ ಮರದ ಜೋಡಿಗೆ ₹120 ರಿಂದ ₹150 ಹಾಗೂ ಸಿದ್ಧ ಬಾಗಿನದ ಕಿಟ್‌ಗಳು ₹400 ರಿಂದ ₹600 ರವರೆಗೆ ಮಾರಾಟವಾಗುತ್ತಿವೆ.

ಬೇಳೆ-ಕಾಳುಗಳ ಬೆಲೆಯಲ್ಲೂ ಏರಿಕೆ:

ಕಳೆದೊಂದು ವಾರದಿಂದ ಬೇಳೆ-ಕಾಳುಗಳ ದರವೂ ಪ್ರತಿ ಕೆ.ಜಿ.ಗೆ ₹8 ರಿಂದ ₹10 ರಷ್ಟು ಹೆಚ್ಚಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ ತೊಗರಿಬೇಳೆ ಕೆ.ಜಿ.ಗೆ ₹100 ರಿಂದ ₹115, ಶೀಲಿಂಗ ತೊಗರಿಬೇಳೆ ₹130 ರಿಂದ ₹140, ಕಡಲೆಕಾಳು ₹85 ರಿಂದ ₹95, ಹೆಸರುಬೇಳೆ ₹100 ರಿಂದ ₹105, ಹೆಸರುಕಾಳು ₹115 ರಿಂದ ₹125 ಹಾಗೂ ಹಲಸಂದೆ ಕಾಳು ₹75 ರಿಂದ ₹85 ಕ್ಕೆ ತಲುಪಿದೆ.

ಬೆಲೆ ಏರಿಕೆಯ ನಡುವೆಯೂ ನಾಗರಿಕರು ತಮ್ಮ ಶಕ್ತಿಗೆ ತಕ್ಕಂತೆ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಮುಂದುವರಿದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಬ್ಬ ವ್ಯಕ್ತಿಗೆ ಎಷ್ಟು ಬ್ಯಾಂಕ್ ಖಾತೆಗಳಿರಬೇಕು? ಹೆಚ್ಚು ಖಾತೆಗಳಿದ್ದರೆ ಲಾಭವೋ, ನಷ್ಟವೋ? ಇಲ್ಲಿದೆ ಮಾಹಿತಿBREAKING : ಗಣೇಶ ಚತುರ್ಥಿ ಹಿನ್ನೆಲೆ ಸೆ.14ರಂದು ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ.!ALERT : ಪೋಷಕರೇ ಎಚ್ಚರ : ಮಕ್ಕಳಿಗೆ ಬಾಟಲಿ ಹಾಲು ನೀಡುವಾಗ ಈ ತಪ್ಪು ಮಾಡಬೇಡಿ.!JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : 28,721 ಹುದ್ದೆಗಳ ನೇಮಕಾತಿಗೆ `GBA’ ಗ್ರೀನ್ ಸಿಗ್ನಲ್.!BREAKING : ಬೆಂಗಳೂರಿನ ಬನಶಂಕರಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ; ಸಾರ್ವಜನಿಕರಲ್ಲಿ ಆತಂಕ ಸೃಷ್ಟಿBREAKING : ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ತಾತ್ಕಾಲಿಕ ಫಲಿತಾಂಶ ಪ್ರಕಟಗೌರಿ-ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಬಿಗ್ ಶಾಕ್ : ಹೂವು, ಹಣ್ಣು, ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ.!ಮೊದಲ ಹೆಂಡತಿ ಇರುವಾಗಲೇ 2ನೇ ಪತ್ನಿಗೆ ಜೀವನಾಂಶದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪುBIG NEWS : ರಾಜ್ಯ`ಸರ್ಕಾರಿ ನೌಕರರೇ’ ಗಮನಿಸಿ : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿರಾಜ್ಯದ ಜನತೆಗೆ ಗುಡ್ ನ್ಯೂಸ್ : ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ