LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

"ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ" : ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಎಡವಟ್ಟು!

ಹಾಸನ : ಹಾಸನದಲ್ಲಿ ನಡೆದ 'ಪ್ರಜಾಸೇವೆ ಆಂದೋಲನ' ಸಭೆಯಲ್ಲಿ "ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ" ಎಂದು ಹೇಳುವ ಮೂಲಕ ಸಚಿವ ಶಿವಲಿಂಗೇಗೌಡ ಅವರು ಹೊಸ ವಿವಾದ ಹುಟ್ಟುಹಾಕಿದ್ದಾರೆ. ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಭೆಯಲ್ಲಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೂ ಅಧಿಕಾರಿಗಳು ಲಂಚ ಕೇಳುತ್ತಾರೆ ಎಂದು ಸಚಿವರ ಮುಂದೆಯೇ ಕಿಡಿಕಾರಿದ್ದಾರೆ.

ಸಚಿವರ ಮಾತಿನಿಂದ ಉಂಟಾದ ಗೊಂದಲವನ್ನು ನಿವಾರಿಸಲು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, "ಬಲವಂತವಾಗಿ ಹಣ ವಸೂಲಿ ಮಾಡುವುದು ಸರಿಯಲ್ಲ, ಅಂತಹ ಕೆಲಸಗಳಿಗೆ ಅವಕಾಶ ನೀಡುವುದಿಲ್ಲ" ಎಂದು ಸಾರ್ವಜನಿಕರಿಗೆ ವಿವರಣೆ ನೀಡಿದರು. ಪರಿಸ್ಥಿತಿಯ ಅರಿವಾದ ತಕ್ಷಣವೇ ಎಚ್ಚೆತ್ತುಕೊಂಡ ಸಚಿವ ಶಿವಲಿಂಗೇಗೌಡ ಅವರು ವೇದಿಕೆಯಲ್ಲೇ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದು, "ನಾನು ದುಡ್ಡು ಕೊಡುವ ಬಗ್ಗೆ ಹೇಳಿಲ್ಲ, ಬದಲಾಗಿ ಅಧಿಕಾರಿಗಳಿಗೆ ಗೌರವ ಕೊಡುವ ಬಗ್ಗೆ ಮಾತ್ರ ಮಾತನಾಡಿದ್ದೇನೆ" ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ.!ಭಾರತದಲ್ಲಿನ ಕಾರುಗಳ ವಿವಿಧ ಬಣ್ಣದ ನಂಬರ್ ಪ್ಲೇಟ್‌ಗಳು ಏನು ಅರ್ಥವನ್ನು ಸೂಚಿಸುತ್ತದೆ?ಮೊಟ್ಟೆ ಸಸ್ಯಾಹಾರವೋ – ಮಾಂಸಾಹಾರವೋ ? ಇಲ್ಲಿದೆ ದಶಕಗಳ ಗೊಂದಲಕ್ಕೆ ವಿಜ್ಞಾನ ನೀಡುವ ಸ್ಪಷ್ಟ ಉತ್ತರ !ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಅಭಿಪ್ರಾಯವೇ ನಮ್ಮ ಅಭಿಪ್ರಾಯ : ಸಿಎಂ ಡಿ.ಕೆ. ಶಿವಕುಮಾರ್ತೀರ್ಥಹಳ್ಳಿಯ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಿಎಂ ಡಿಕೆ ಶಿವಕುಮಾರ್.!ಪಾಕಿಸ್ತಾನದಲ್ಲಿ ಇಂಧನ ದರ ಏರಿಕೆ ಖಂಡಿಸಿ ವಿಧಾನಸಭೆಗೆ ಕತ್ತೆಯಲ್ಲಿ ಆಗಮಿಸಿದ ಶಾಸಕರುಒಂದೇ ದಿನ ಕೋಟಿ ರೂ. ಮೌಲ್ಯದ 36 ಐಫೋನ್ ಖರೀದಿ ; ಯುವಕರಿಬ್ಬರ ಕಾರ್ಯಕ್ಕೆ ನೆಟ್ಟಿಗರ ಬೆರಗು !ರೆಜಿನಗರದಲ್ಲೂ ಮಮತಾ ಬಣಕ್ಕೆ ಹಿನ್ನಡೆ: ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ನಾಮಪತ್ರ ವಾಪಸ್; ನಂದಿಗ್ರಾಮ್ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ಆಘಾತಹವಾಮಾನ ವೈಪರೀತ್ಯ: ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಿನ ತಪ್ಪಾದ ಆರೋಪ ಖಂಡಿಸಿದ ಪ್ರಧಾನಿ ಮೋದಿನಕಲಿ ದಾಖಲೆ ಸೃಷ್ಟಿಸಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ: ಬಾಂಗ್ಲಾ ಪ್ರಜೆ ಅರೆಸ್ಟ್