LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದುವೆನೇ ಆಗಿಲ್ಲ, ಇವನು ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? : ಮೋದಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ!

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರ "ನಾನು ನಾನ್ ಬಯಾಲಜಿಕಲ್ ಆಗಿ ಹುಟ್ಟಿರೋದು" ಎಂಬ ಹೇಳಿಕೆಯನ್ನು ಲೇವಡಿ ಮಾಡಿದ ಅವರು, ಮೋದಿ ತಮ್ಮನ್ನು ತಾವು 'ಮಹಾ ಮಾನವ' ಎಂದು ಕರೆದುಕೊಂಡಿದ್ದಾರೆ ಎಂದು ಏಕವಚನದಲ್ಲೇ ಕಟುವಾಗಿ ವಿಮರ್ಶಿಸಿದರು. ಕಳೆದ 12 ವರ್ಷಗಳ ಆಡಳಿತದಲ್ಲಿ ಪ್ರಧಾನಿಯವರು ತಮ್ಮ 'ಮನ್ ​ಕಿ ಬಾತ್‌ನಲ್ಲಿ' ಕಾರ್ಯಕ್ರಮದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕನಿಷ್ಠ 12 ನಿಮಿಷವಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸ್ವತಃ ಮದುವೆಯೇ ಆಗದ ವ್ಯಕ್ತಿಗೆ ತ್ರಿಪಲ್ ತಲಾಕ್ ವಿಚಾರ ಏತಕ್ಕೆ ಬೇಕು ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿರುವ ಅತ್ಯಂತ ಹೆಚ್ಚಿನ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿದ್ದು ಕಾಂಗ್ರೆಸ್ ಸರ್ಕಾರಗಳು ಎಂದು ಸ್ಮರಿಸಿದ ಹರಿಪ್ರಸಾದ್, ನೆಹರೂ ಅವರಿಂದ ಹಿಡಿದು ಪಿ.ವಿ. ನರಸಿಂಹರಾವ್ ಅವರವರೆಗಿನ ಕಾಂಗ್ರೆಸ್ ಆಡಳಿತವು ದೇಶ ಕಟ್ಟುವ ಕೆಲಸ ಮಾಡಿದೆ ಎಂದರು. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ನರೇಂದ್ರ ಮೋದಿ ಅವರು ತಮ್ಮ ಆಡಳಿತಾವಧಿಯಲ್ಲಿ ಬರೋಬ್ಬರಿ 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ತಾವು ಗುಜರಾತ್‌ನಲ್ಲಿ 4.5 ವರ್ಷಗಳ ಕಾಲ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಗ ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮವನ್ನು ಸ್ಥಾಪಿಸದಿರುವುದನ್ನು ಅವರು ಈ ಸಂದರ್ಭದಲ್ಲಿ ಬೆಟ್ಟು ಮಾಡಿದರು.

ಪ್ರಸ್ತುತ ದೇಶದಲ್ಲಿ ಅದಾನಿ ಮತ್ತು ಅಂಬಾನಿಯಂತಹ ಕೆಲವೇ ಕೆಲವು ಬಂಡವಾಳಶಾಹಿಗಳಷ್ಟೇ ವಿಜೃಂಭಿಸುತ್ತಿದ್ದು, ಪ್ರತಿಯೊಂದನ್ನೂ ಅವರೇ ಖರೀದಿ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದರು. ದೇಶದಲ್ಲಿ ಬದಲಾವಣೆ ತರಲು ಪ್ರತಿಯೊಬ್ಬರಲ್ಲೂ ಹೋರಾಟದ ಮನೋಭಾವ ಅಗತ್ಯವಾಗಿದೆ. ಮೊದಲು ವ್ಯಕ್ತಿ ಸುಧಾರಣೆಯಾದರೆ ಸಮಾಜ ಸುಧಾರಿಸುತ್ತದೆ, ಸಮಾಜ ಸುಧಾರಿಸಿದರೆ ದೇಶ ಸುಧಾರಣೆ ಕಾಣುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಳೆದ 12 ವರ್ಷಗಳಿಂದ ದೇಶದಲ್ಲಿ ಕೇವಲ ಧರ್ಮಾಧಾರಿತ ರಾಜಕಾರಣ ನಡೆಯುತ್ತಿದೆ ಎಂದು ಕಿಡಿಕಾರಿದ ಅವರು, ಧರ್ಮ ಎಂಬುದು ವೈಯಕ್ತಿಕ ಆಚರಣೆಯಾಗಿದೆ ಎಂದರು. ನಾವು ದಿನ ಬೆಳಿಗ್ಗೆ ಎದ್ದು ದೇವರ ಪೂಜೆ ಮಾಡುತ್ತೇವೆ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತೇವೆ, ಭಾನುವಾರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುತ್ತೇವೆ ಹಾಗೂ ಜೈನ ಧರ್ಮದಲ್ಲಿದ್ದರೆ ಕೀರ್ತನೆಗಳನ್ನು ಹೇಳುತ್ತೇವೆ; ಇವೆಲ್ಲವೂ ಮನೆಯಲ್ಲಿ ಮಾಡುವ ಆಚರಣೆಗಳಾಗಿದ್ದು, ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕಾರಣಕ್ಕೆ ಧರ್ಮವನ್ನು ತಂದು ಯುವಕರನ್ನು ಹಾದಿ ತಪ್ಪಿಸಿ ಜೈಲಿಗೆ ಕಳುಹಿಸುವ ಕೆಲಸವನ್ನು ಪ್ರಸ್ತುತ ಸರ್ಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು. ಬಡವರ ಹಕ್ಕುಗಳಿಗಾಗಿ, ಕಾರ್ಮಿಕರ ಪರವಾಗಿ ಅಥವಾ ಮಹಿಳೆಯರ ಸುರಕ್ಷತೆಗಾಗಿ ಹೋರಾಟ ಮಾಡಿ ಜೈಲಿಗೆ ಹೋದರೆ ಅದಕ್ಕೊಂದು ಅರ್ಥವಿದೆ ಮತ್ತು ಸಂತೋಷದ ವಿಷಯ. ಆದರೆ, ಧರ್ಮದ ಹೆಸರಿನಲ್ಲಿ ಯುವಕರನ್ನು ಜೈಲಿಗೆ ಅಟ್ಟುವುದು ಖಂಡನೀಯ ಎಂದು ಹರಿಪ್ರಸಾದ್ ಖಾರವಾಗಿ ನುಡಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ.!ಭಾರತದಲ್ಲಿನ ಕಾರುಗಳ ವಿವಿಧ ಬಣ್ಣದ ನಂಬರ್ ಪ್ಲೇಟ್‌ಗಳು ಏನು ಅರ್ಥವನ್ನು ಸೂಚಿಸುತ್ತದೆ?ಮೊಟ್ಟೆ ಸಸ್ಯಾಹಾರವೋ – ಮಾಂಸಾಹಾರವೋ ? ಇಲ್ಲಿದೆ ದಶಕಗಳ ಗೊಂದಲಕ್ಕೆ ವಿಜ್ಞಾನ ನೀಡುವ ಸ್ಪಷ್ಟ ಉತ್ತರ !ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಅಭಿಪ್ರಾಯವೇ ನಮ್ಮ ಅಭಿಪ್ರಾಯ : ಸಿಎಂ ಡಿ.ಕೆ. ಶಿವಕುಮಾರ್ತೀರ್ಥಹಳ್ಳಿಯ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಿಎಂ ಡಿಕೆ ಶಿವಕುಮಾರ್.!ಪಾಕಿಸ್ತಾನದಲ್ಲಿ ಇಂಧನ ದರ ಏರಿಕೆ ಖಂಡಿಸಿ ವಿಧಾನಸಭೆಗೆ ಕತ್ತೆಯಲ್ಲಿ ಆಗಮಿಸಿದ ಶಾಸಕರುಒಂದೇ ದಿನ ಕೋಟಿ ರೂ. ಮೌಲ್ಯದ 36 ಐಫೋನ್ ಖರೀದಿ ; ಯುವಕರಿಬ್ಬರ ಕಾರ್ಯಕ್ಕೆ ನೆಟ್ಟಿಗರ ಬೆರಗು !ರೆಜಿನಗರದಲ್ಲೂ ಮಮತಾ ಬಣಕ್ಕೆ ಹಿನ್ನಡೆ: ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ನಾಮಪತ್ರ ವಾಪಸ್; ನಂದಿಗ್ರಾಮ್ ಬೆಳವಣಿಗೆ ಬೆನ್ನಲ್ಲೇ ಮತ್ತೊಂದು ಆಘಾತಹವಾಮಾನ ವೈಪರೀತ್ಯ: ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಿನ ತಪ್ಪಾದ ಆರೋಪ ಖಂಡಿಸಿದ ಪ್ರಧಾನಿ ಮೋದಿನಕಲಿ ದಾಖಲೆ ಸೃಷ್ಟಿಸಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ: ಬಾಂಗ್ಲಾ ಪ್ರಜೆ ಅರೆಸ್ಟ್