LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಟ್ ಹಾಡಿನ ಸಾಲೇ ಈಗ ಸಿನಿಮಾದ ಶೀರ್ಷಿಕೆ: ವೈಭವದ ಮುಹೂರ್ತದೊಂದಿಗೆ ಶುರುವಾಯ್ತು ‘ಬ್ಯಾಂಗಲ್ ಬಂಗಾರಿ’!

ಯುವ ರಾಜಕುಮಾರ್ ಅಭಿನಯದ ‘ಎಕ್ಕಾ’ ಸಿನಿಮಾದಲ್ಲಿ ಭಾರೀ ಸದ್ದು ಮಾಡಿದ್ದ ‘ಬ್ಯಾಂಗಲ್ ಬಂಗಾರಿ’ ಸಾಂಗಿನ ಮೊದಲ ಸಾಲನ್ನೇ ಇದೀಗ ಹೊಸ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗಿದೆ. ಶಂಕರ್ ರಾಮರೆಡ್ಡಿ ನಿರ್ಮಾಣದಲ್ಲಿ ಹಾಗೂ ಮರಡಿಹಳ್ಳಿ ಚಂದ್ರ ನಾಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ನೂತನ ಚಿತ್ರದ ಮುಹೂರ್ತ ನಂದಿನಿ ಬಡಾವಣೆಯ ಪ್ರಸಿದ್ಧ ಬಲಮುರಿ ಶ್ರೀವಿನಾಯಕ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು.

ಅನಂತ ಚತುರ್ದಶಿಯ ಶುಭ ದಿನದಂದು ನಡೆದ ಈ ಸಮಾರಂಭದಲ್ಲಿ ‘ಮುಂಗಾರು ಮಳೆ’ ಖ್ಯಾತಿಯ ನಿರ್ಮಾಪಕ ಇ. ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡಿದರೆ, ಶಾಸಕ ಗೋಪಾಲಯ್ಯ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಯಶಸ್ಸು ಕೋರಿದರು.

ಚಿತ್ರದ ಕಥೆ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಚಂದ್ರ ನಾಗ್, “ಇದೊಂದು ಪ್ರೇಮಕಥೆಯ ಜೊತೆಗೆ ಕ್ರೈಮ್ ಎಲಿಮೆಂಟ್ ಹೊಂದಿರುವ ಚಿತ್ರ. ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ, ನಂತರ ಸಕಲೇಶಪುರದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು. ಚಿತ್ರದಲ್ಲಿ ಸುನೀಲ್ ಶಶಿಧರ್ ಹಾಗೂ ಪ್ರಕೃತಿ ರಾಜೇಂದ್ರ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

ಆಡಿಷನ್ ಮೂಲಕ ಆಯ್ಕೆಯಾಗಿರುವ ನಾಯಕ ಸುನೀಲ್ ಶಶಿಧರ್ ಈ ಸಿನಿಮಾದಲ್ಲಿ ಎಐ ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಾಯಕಿ ಪ್ರಕೃತಿ ರಾಜೇಂದ್ರ ಕಾವ್ಯ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ನೃತ್ಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ ಹಾಗೂ ಸಂಪತ್ ಮೈತ್ರೇಯ ಅವರಂತಹ ಅನುಭವಿ ತಾರಾಬಳಗವಿದೆ. ಟಾಪ್ ಸ್ಟಾರ್ ರೇಣು ಸಂಗೀತ ಸಂಯೋಜನೆ ಮಾಡುತ್ತಿದ್ದು, ಸತೀಶ್ ಕೆ ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ ನಿರ್ವಹಿಸುತ್ತಿದ್ದಾರೆ. ‘ಫುಲ್ ಮೀಲ್ಸ್’ ಚಿತ್ರದ ನಿರ್ದೇಶಕ ಎನ್. ವಿನಾಯಕ್ ಸಂಭಾಷಣೆ ಬರೆದಿದ್ದು, ವಿಜಯ್ ಪ್ರಕಾಶ್, ಕೈಲಾಶ್ ಖೇರ್, ಜಸ್ಕರಣ್ ಸಿಂಗ್ ಹಾಗೂ ಅನುರಾಧಾ ಭಟ್ ಅವರ ಕಂಠಸಿರಿಯಲ್ಲಿ ಹಾಡುಗಳು ಹೊರಬರಲಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಇಸಿ ಜ್ಞಾನೇಶ್ ಕುಮಾರ್ ಚುನಾವಣಾ ಫಲಿತಾಂಶವನ್ನು ಬಿಜೆಪಿ ಪರ ಮೊದಲೇ ನಿರ್ಧರಿಸುವ ಮ್ಯಾಚ್-ಫಿಕ್ಸಿಂಗ್ ಉಸ್ತುವಾರಿ: ರಾಹುಲ್ ಗಾಂಧಿ ವಾಗ್ದಾಳಿRain In Karnataka: ಸೆಪ್ಟೆಂಬರ್.29ರಿಂದ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!ಸಿಎಂ ಕಚೇರಿ ಮಧ್ಯಪ್ರವೇಶದಿಂದ ಗ್ರಾಮಗಳಿಗೆ ತ್ವರಿತ ಪರಿಹಾರ!ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಬೃಹತ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭBREAKING: ಮಂಗಳೂರಿನಲ್ಲಿ ಕನ್ವೆನ್ಷನ್ ಹಾಲ್ ಬಾಲ್ಕನಿ ಕುಸಿತ: ಐವರು ವಿದ್ಯಾರ್ಥಿಗಳಿಗೆ ಗಾಯ; ಓರ್ವನ ಸ್ಥಿತಿ ಗಂಭೀರ, ಮೆದುಳು ನಿಷ್ಕ್ರಿಯ!ಬಾಂಗ್ಲಾದೇಶದಲ್ಲಿ ತೇಲುತ್ತಿದ್ದ ನೀಲಿ ಬಣ್ಣದ ಡ್ರಮ್ ನಲ್ಲಿ ಹಿಂದೂ ಆಭರಣ ವ್ಯಾಪಾರಿಯ ಶವ ಪತ್ತೆ; ಕೊಲೆ ಶಂಕೆರಾಜ್ಯ ಸರ್ಕಾರದಿಂದ 'ಗುತ್ತಿಗೆದಾರರ ಬಿಲ್ ಪಾವತಿ'ಗೆ ಮಹತ್ವದ ಕ್ರಮಚಂದ್ರು ಅವರು ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ, ಅವರು ಶಾಶ್ವತ ಮುಖ್ಯಮಂತ್ರಿ: ಸಿದ್ದರಾಮಯ್ಯಕಲೆ, ಕಲಾವಿದರ ಉಳಿವಿಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ.ಶಿವಕುಮಾರ್‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಭಾಜನರಾದ ತುಮಕೂರಿನ ಶೈಕ್ಷಣಿಕ ಮಾರ್ಗದರ್ಶಕ ಪಾಂಡುರಂಗ ವಿ.ಎಲ್