LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲೆ, ಕಲಾವಿದರ ಉಳಿವಿಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : "ಕಲೆ ನಮ್ಮ ದೇಶದ ಆಸ್ತಿ, ಸಂಸ್ಕೃತಿಯ ಪ್ರತಿಬಿಂಬ. ಕಲೆ ಮತ್ತು ಕಲಾವಿದರ ಉಳಿವಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಡಾ.ಮುಖ್ಯಮಂತ್ರಿ ಚಂದ್ರು ಅವರ ‘ಮುಖ್ಯಮಂತ್ರಿ’ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ನಿಮ್ಮ ಕಲೆ ಹಾಗೂ ಸಂಸ್ಥೆಯನ್ನು ಉಳಿಸಿಕೊಳ್ಳಲು ಏನೇನು ಅಗತ್ಯವಿದೆಯೋ ಕೇಳಿ. ಸರ್ಕಾರದಿಂದ ಬೇಕಾದ ಅನುದಾನ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.

ತಂತ್ರಜ್ಞಾನ ಬದಲಾದರೂ ಕಲೆ ಉಳಿಯಬೇಕು

"ಹೊಸ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಬಂದಿದ್ದರೂ, ವೈಯಕ್ತಿಕ ಪ್ರತಿಭೆ ಹಾಗೂ ನೇರ ಪ್ರದರ್ಶನದ ಕಲೆಗೆ ಅದರದೇ ಆದ ಮಹತ್ವವಿದೆ" ಎಂದು ಹೇಳಿದರು.

“ಇಂದು ನಾವು 900ನೇ ನಾಟಕದ ಹಂತ ತಲುಪಿದ್ದೇವೆ. ಮುಂದೆ 1000ನೇ ನಾಟಕದ ಗುರಿಯನ್ನೂ ತಲುಪಬೇಕು. ಅದಕ್ಕೆ ಸರ್ಕಾರ ಅಗತ್ಯ ಶಕ್ತಿ ನೀಡಲಿದೆ” ಎಂದರು.

ನಾಟಕಕ್ಕೆ ಜೀವ ತುಂಬುವುದು ಕಲಾವಿದರ ವೈಯಕ್ತಿಕ ಪ್ರತಿಭೆ

"ಸಿನಿಮಾ ನಿರ್ಮಾಣದಲ್ಲಿ ನಿರ್ದೇಶಕರು ದೃಶ್ಯಗಳನ್ನು ಕಟ್ ಮಾಡಿ, ಎಡಿಟ್ ಮಾಡಿ, ವಿವಿಧ ಭಾಗಗಳನ್ನು ಸೇರಿಸಿ ಅಂತಿಮ ರೂಪ ನೀಡುತ್ತಾರೆ. ಆದರೆ ನಾಟಕದಲ್ಲಿ ಕಲಾವಿದರ ನೇರ ಹಾಗೂ ವೈಯಕ್ತಿಕ ಪ್ರತಿಭೆಯೇ ಪ್ರದರ್ಶನದ ಪ್ರಮುಖ ಶಕ್ತಿಯಾಗಿದೆ" ಎಂದು ಅಭಿಪ್ರಾಯಪಟ್ಟರು.

“ಪ್ರತಿಯೊಬ್ಬ ಕಲಾವಿದನ ವೈಯಕ್ತಿಕ ಪ್ರತಿಭೆಯಿಂದಲೇ ನಾಟಕದ ಪಾತ್ರಗಳು ಜೀವ ಪಡೆಯುತ್ತವೆ. ಆ ಪ್ರತಿಭೆಯಿಂದಲೇ ಪ್ರೇಕ್ಷಕರಿಗೆ ನಗು, ಸಂತೋಷ ಹಾಗೂ ಮನರಂಜನೆ ದೊರೆಯುತ್ತದೆ” ಎಂದು ಹೇಳಿದರು.

ಕೊಳಲಿನ ನಾದದಂತೆ ಕಲೆ ಎಲ್ಲೆಡೆ ತಲುಪಲಿ

"ಬಿದಿರು ಹಲವು ರೀತಿಯಲ್ಲಿ ಬಳಕೆಯಾಗುವುದಲ್ಲದೆ ಕೊಳಲಾಗಿ ರೂಪುಗೊಂಡು ಶ್ರೀಕೃಷ್ಣನ ನಾದಕ್ಕೆ ಕಾರಣವಾಗುತ್ತದೆ. ಅದೇ ರೀತಿ ವಿವಿಧ ಪ್ರತಿಭೆಗಳು ಒಂದೆಡೆ ಸೇರಿದಾಗ ಅದ್ಭುತ ಕಲಾ ಪ್ರದರ್ಶನ ಮೂಡುತ್ತದೆ. ಕುರಿ ಅಥವಾ ಮೇಕೆಯ ಚರ್ಮದಿಂದ ರೂಪುಗೊಳ್ಳುವ ವಾದ್ಯಗಳು ತಬಲವಾಗಿ, ಟಮಟೆಯಾಗಿ ನಾದ ನೀಡುವಂತೆ, ವಿಭಿನ್ನ ಕಲಾವಿದರ ಪ್ರತಿಭೆಗಳು ಒಟ್ಟಾಗಿ ಸೇರಿದಾಗ ಪ್ರೇಕ್ಷಕರಿಗೆ ಆನಂದ ನೀಡುವ ಕಲಾಕೃತಿ ಸೃಷ್ಟಿಯಾಗುತ್ತದೆ" ಎಂದು ವಿವರಿಸಿದರು.

ಕಲೆ ನಶಿಸದಂತೆ ಉಳಿಸುವುದು ನಮ್ಮ ಹೊಣೆ

"ಮುಖ್ಯಮಂತ್ರಿ ಚಂದ್ರು ಅವರ ಆಹ್ವಾನದ ಮೇರೆಗೆ 900ನೇ ನಾಟಕ ಪ್ರದರ್ಶನಕ್ಕೆ ಬಂದಿರುವುದಾಗಿ ಹೇಳಿದರು. ಈ ಕಲೆ ನಶಿಸಿಹೋಗಬಾರದು. ಮುಂದಿನ ಪೀಳಿಗೆಗೂ ಕಲೆ ಉಳಿಯಬೇಕು. ಸಮಾಜವನ್ನು ಸದಾ ನಗುನಗುತ್ತಾ ಇಡುವ ಪ್ರಯತ್ನವನ್ನು ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಅವರಿಗೂ ಇಡೀ ತಂಡಕ್ಕೂ ಅಭಿನಂದನೆಗಳು” ಎಂದರು.

1000ನೇ ನಾಟಕ ನೋಡುವ ಭಾಗ್ಯ ಸಿಗಲಿ

"ನಾನೂ ನಿಮ್ಮ ಒಬ್ಬ ಅಭಿಮಾನಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಾಟಕ ಕ್ಷೇತ್ರದ ಈ ಪಯಣ ಮುಂದುವರಿಯಲಿ ಎಂದು ಹಾರೈಸಿದ ಅವರು, ಅಧಿಕಾರದಲ್ಲಿ ಯಾರಿದ್ದರೂ ಕಲೆಯ ಬೆಳವಣಿಗೆಗೆ ಬೆಂಬಲ ಮುಂದುವರಿಯಬೇಕು. ನಾವು ಅಧಿಕಾರದಲ್ಲಿರುತ್ತೇವೋ, ಇಲ್ಲವೋ ಎಂಬುದು ಮುಖ್ಯವಲ್ಲ. 1000ನೇ ಹಾಗೂ 1001ನೇ ನಾಟಕವನ್ನೂ ನೋಡುವ ಭಾಗ್ಯ ನಮಗೆ ಸಿಗಲಿ. ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಶುಭ ಕೋರಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಇಸಿ ಜ್ಞಾನೇಶ್ ಕುಮಾರ್ ಚುನಾವಣಾ ಫಲಿತಾಂಶವನ್ನು ಬಿಜೆಪಿ ಪರ ಮೊದಲೇ ನಿರ್ಧರಿಸುವ ಮ್ಯಾಚ್-ಫಿಕ್ಸಿಂಗ್ ಉಸ್ತುವಾರಿ: ರಾಹುಲ್ ಗಾಂಧಿ ವಾಗ್ದಾಳಿRain In Karnataka: ಸೆಪ್ಟೆಂಬರ್.29ರಿಂದ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!ಸಿಎಂ ಕಚೇರಿ ಮಧ್ಯಪ್ರವೇಶದಿಂದ ಗ್ರಾಮಗಳಿಗೆ ತ್ವರಿತ ಪರಿಹಾರ!ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಬೃಹತ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭBREAKING: ಮಂಗಳೂರಿನಲ್ಲಿ ಕನ್ವೆನ್ಷನ್ ಹಾಲ್ ಬಾಲ್ಕನಿ ಕುಸಿತ: ಐವರು ವಿದ್ಯಾರ್ಥಿಗಳಿಗೆ ಗಾಯ; ಓರ್ವನ ಸ್ಥಿತಿ ಗಂಭೀರ, ಮೆದುಳು ನಿಷ್ಕ್ರಿಯ!ಬಾಂಗ್ಲಾದೇಶದಲ್ಲಿ ತೇಲುತ್ತಿದ್ದ ನೀಲಿ ಬಣ್ಣದ ಡ್ರಮ್ ನಲ್ಲಿ ಹಿಂದೂ ಆಭರಣ ವ್ಯಾಪಾರಿಯ ಶವ ಪತ್ತೆ; ಕೊಲೆ ಶಂಕೆರಾಜ್ಯ ಸರ್ಕಾರದಿಂದ 'ಗುತ್ತಿಗೆದಾರರ ಬಿಲ್ ಪಾವತಿ'ಗೆ ಮಹತ್ವದ ಕ್ರಮಚಂದ್ರು ಅವರು ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ, ಅವರು ಶಾಶ್ವತ ಮುಖ್ಯಮಂತ್ರಿ: ಸಿದ್ದರಾಮಯ್ಯಕಲೆ, ಕಲಾವಿದರ ಉಳಿವಿಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ.ಶಿವಕುಮಾರ್‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಭಾಜನರಾದ ತುಮಕೂರಿನ ಶೈಕ್ಷಣಿಕ ಮಾರ್ಗದರ್ಶಕ ಪಾಂಡುರಂಗ ವಿ.ಎಲ್