LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಗೋಲ್ಡನ್ ರೈಡ್: ಒಲಿಂಪಿಕ್ಸ್, ಕಾಮನ್‌ವೆಲ್ತ್‌ಗೆ ಕಬಡ್ಡಿ ಸೇರ್ಪಡೆಗೆ ನಾಯಕಿ ಪುಷ್ಪಾ ರಾಣಾ ಆಗ್ರಹ!

ಏಷ್ಯನ್ ಗೇಮ್ಸ್ 2026ರಲ್ಲಿ ಜಪಾನ್‌ನ ಟೋಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 37-34 ಅಂತರದಿಂದ ಮಣಿಸಿದ ಭಾರತ ಮಹಿಳಾ ಕಬಡ್ಡಿ ತಂಡ, ದಾಖಲೆಯ 4ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ತಂಡದ ನಾಯಕಿ ಪುಷ್ಪಾ ರಾಣಾ ಕಬಡ್ಡಿ ಕ್ರೀಡೆಯನ್ನು ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗೆ ಸೇರ್ಪಡೆಗೊಳಿಸುವಂತೆ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.

ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಪಾ ರಾಣಾ, “ಇರಾನ್ ಮತ್ತು ಚೈನೀಸ್ ತೈಪೆ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕಬಡ್ಡಿ ಕ್ರೀಡೆ ವೇಗವಾಗಿ ಬೆಳೆಯುತ್ತಿದೆ. ಏಷ್ಯನ್ ಗೇಮ್ಸ್‌ಗೆ ಮಾತ್ರ ಸೀಮಿತವಾಗದೆ ಈ ಕ್ರೀಡೆ ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್ ಹಂತ ತಲುಪಬೇಕು. ಇದರಿಂದ ಜಾಗತಿಕ ಮಟ್ಟದಲ್ಲಿ ಹೊಸ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಅಲ್ಲದೆ, ಪುರುಷರ ಪ್ರೊ ಕಬಡ್ಡಿ ಲೀಗ್ (PKL) ಮಾದರಿಯಲ್ಲೇ ಮಹಿಳೆಯರಿಗೂ ಪೂರ್ಣಪ್ರಮಾಣದ ಪ್ರೊ ಕಬಡ್ಡಿ ಲೀಗ್ ಆರಂಭಿಸಬೇಕು ಎಂದು ಅವರು ಮನವಿ ಮಾಡಿದರು. “ನಮ್ಮ ದೇಶದ ಯುವತಿಯರಿಗೆ ಸೂಕ್ತ ವೇದಿಕೆ ಸಿಗಬೇಕಾದರೆ ಮಹಿಳಾ ಪ್ರೊ ಕಬಡ್ಡಿ ಅತ್ಯಗತ್ಯ. ಇದು ನಮ್ಮ ಪ್ರಮುಖ ಬೇಡಿಕೆಯಾಗಿದೆ” ಎಂದರು.

ತಂಡದ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಾಯಕಿ, “ನಮ್ಮ ಗಮನ ಆರಂಭದಿಂದಲೂ ಬಂಗಾರದ ಪದಕದ ಮೇಲೆಯೇ ಇತ್ತು. ಅಭಿಮಾನಿಗಳ ನಿರೀಕ್ಷೆ ಹಾಗೂ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಒತ್ತಡವಿತ್ತು. ಆದರೆ ನಮ್ಮ ಕಠಿಣ ಅಭ್ಯಾಸ, ತರಬೇತುದಾರರ ಬೆಂಬಲ ಹಾಗೂ ಒಗ್ಗಟ್ಟಿನ ಆಟದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಹೇಳುತ್ತಾ, ಈ ಬಂಗಾರದ ಪದಕವನ್ನು ಇಡೀ ದೇಶಕ್ಕೆ ಸಮರ್ಪಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಇಸಿ ಜ್ಞಾನೇಶ್ ಕುಮಾರ್ ಚುನಾವಣಾ ಫಲಿತಾಂಶವನ್ನು ಬಿಜೆಪಿ ಪರ ಮೊದಲೇ ನಿರ್ಧರಿಸುವ ಮ್ಯಾಚ್-ಫಿಕ್ಸಿಂಗ್ ಉಸ್ತುವಾರಿ: ರಾಹುಲ್ ಗಾಂಧಿ ವಾಗ್ದಾಳಿRain In Karnataka: ಸೆಪ್ಟೆಂಬರ್.29ರಿಂದ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!ಸಿಎಂ ಕಚೇರಿ ಮಧ್ಯಪ್ರವೇಶದಿಂದ ಗ್ರಾಮಗಳಿಗೆ ತ್ವರಿತ ಪರಿಹಾರ!ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಬೃಹತ್ ನೇಮಕಾತಿ: ಸೆ.28ರಿಂದ ದೈಹಿಕ ಪರೀಕ್ಷೆ ಆರಂಭBREAKING: ಮಂಗಳೂರಿನಲ್ಲಿ ಕನ್ವೆನ್ಷನ್ ಹಾಲ್ ಬಾಲ್ಕನಿ ಕುಸಿತ: ಐವರು ವಿದ್ಯಾರ್ಥಿಗಳಿಗೆ ಗಾಯ; ಓರ್ವನ ಸ್ಥಿತಿ ಗಂಭೀರ, ಮೆದುಳು ನಿಷ್ಕ್ರಿಯ!ಬಾಂಗ್ಲಾದೇಶದಲ್ಲಿ ತೇಲುತ್ತಿದ್ದ ನೀಲಿ ಬಣ್ಣದ ಡ್ರಮ್ ನಲ್ಲಿ ಹಿಂದೂ ಆಭರಣ ವ್ಯಾಪಾರಿಯ ಶವ ಪತ್ತೆ; ಕೊಲೆ ಶಂಕೆರಾಜ್ಯ ಸರ್ಕಾರದಿಂದ 'ಗುತ್ತಿಗೆದಾರರ ಬಿಲ್ ಪಾವತಿ'ಗೆ ಮಹತ್ವದ ಕ್ರಮಚಂದ್ರು ಅವರು ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ, ಅವರು ಶಾಶ್ವತ ಮುಖ್ಯಮಂತ್ರಿ: ಸಿದ್ದರಾಮಯ್ಯಕಲೆ, ಕಲಾವಿದರ ಉಳಿವಿಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ.ಶಿವಕುಮಾರ್‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಭಾಜನರಾದ ತುಮಕೂರಿನ ಶೈಕ್ಷಣಿಕ ಮಾರ್ಗದರ್ಶಕ ಪಾಂಡುರಂಗ ವಿ.ಎಲ್