LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಬೆಂಗಳೂರಿನ ಯುವ ಶೂಟರ್ ತಿಲೋತ್ತಮಾ ಸೇನ್

ಬೆಂಗಳೂರು ಮೂಲದ ಯುವ ಶೂಟರ್ ತಿಲೋತ್ತಮಾ ಸೇನ್, ಭಾರತೀಯ ಶೂಟಿಂಗ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ. 2008ರ ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ಜನಿಸಿದ ತಿಲೋತ್ತಮಾ ಸದ್ಯ ಜಪಾನ್‌ಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ವಿಭಾಗದಲ್ಲಿ ತಿಲೋತ್ತಮಾ ಸೇನ್, ವಿದರ್ಶಾ ವಿನೋದ್ ಕೊಚಲುಮ್ಕಲ್ ಮತ್ತು ಆಶಿ ಚೌಕ್ಸೆ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಭಾರತ 1,763 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ಚೀನಾ 1,773 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದಿತು.

ಇನ್ನು ಮಗಳ ಈ ಮತ್ತೊಂದು ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಕೆಲ ವರ್ಷಗಳ ಬಳಿಕ ತಿಲೋತ್ತಮಾ ಸೇನ್ ಮತ್ತೆ ಪದಕ ಗೆದ್ದಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.

ಇನ್ನು 2022ರಲ್ಲಿ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ವಿಭಾಗದ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕವನ್ನೂ ಪಡೆದಿದ್ದರು. ಅದೇ ವರ್ಷ ದಕ್ಷಿಣ ಕೊರಿಯಾದ ಡೇಗುನಲ್ಲಿ ನಡೆದ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದರು.

2023ರಲ್ಲಿ ಹಿರಿಯರ ಅಂತಾರಾಷ್ಟ್ರೀಯ ಸ್ಪರ್ಧೆಗೆ ಪದಾರ್ಪಣೆ ಮಾಡಿದ ತಿಲೋತ್ತಮಾ, ಕೈರೋದಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಬಳಿಕ ದಕ್ಷಿಣ ಕೊರಿಯಾದ ಚಾಂಗ್‌ವನ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತಕ್ಕೆ ಕೋಟಾ ಸ್ಥಾನವನ್ನು ಖಚಿತಪಡಿಸಿದರು. ಈ ಮೂಲಕ ಒಲಿಂಪಿಕ್ಸ್ ಕೋಟಾ ಸ್ಥಾನ ಪಡೆದ ಅತ್ಯಂತ ಕಿರಿಯ ಭಾರತೀಯರಲ್ಲಿ ಒಬ್ಬರಾದರು.

ಆದರೆ 2024ರ ಒಲಿಂಪಿಕ್ಸ್‌ಗಾಗಿ ನಡೆದ ಅಂತಿಮ ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಐದನೇ ಸ್ಥಾನ ಪಡೆದ ಕಾರಣ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ತಿಲೋತ್ತಮಾ ಅವರ ಪ್ರತಿಭೆಯನ್ನು ಗುರುತಿಸಿ 2023ರಲ್ಲಿ ಕೇಂದ್ರ ಸರ್ಕಾರದ Target Olympic Podium Scheme (TOPS) ಅಭಿವೃದ್ಧಿ ಗುಂಪಿಗೂ ಸೇರಿಸಲಾಗಿತ್ತು. 2024ರಲ್ಲಿ ಅವರಿಗೆ Sportstar Aces Awards‌ನಲ್ಲಿ ‘Young Achiever of the Year (Female)’ ಪ್ರಶಸ್ತಿಯೂ ಲಭಿಸಿದೆ.

ಬೆಂಗಳೂರಿನಿಂದ ಆರಂಭವಾದ ತಿಲೋತ್ತಮಾ ಸೇನ್ ಅವರ ಶೂಟಿಂಗ್ ಪಯಣ ಇದೀಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಂದುವರಿದಿದ್ದು, ಭಾರತೀಯ ಶೂಟಿಂಗ್‌ನ ಭರವಸೆಯ ಯುವ ಪ್ರತಿಭೆಯಾಗಿ ಅವರು ಗುರುತಿಸಿಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇಕೆದಾಟು ಯೋಜನೆ ಸ್ಥಳಕ್ಕೆ ತಮಿಳುನಾಡು ನಿಯೋಗವೂ ಬಂದು ಪರಿಶೀಲನೆ ಮಾಡಲಿ: ಸಿಎಂ ಡಿ.ಕೆ. ಶಿವಕುಮಾರ್ಬರದ ಪರಿಸ್ಥಿತಿ ಪರಿಶೀಲಿಸಲು ಕರ್ನಾಟಕ, ಮಹಾರಾಷ್ಟ್ರಕ್ಕೆ ಕೇಂದ್ರ ತಂಡಗಳ ಭೇಟಿ18 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣಗಳ ಖಾತೆ ತೆರೆಯಲು ನಿರ್ಬಂಧ: ಹೊಸ ನಿಯಮDLಗೆ ಸೆ.30ರೊಳಗೆ ಮೊಬೈಲ್ ನಂಬರ್ ಅಪ್‌ಡೇಟ್ ಮಾಡದಿದ್ದರೆ ಲೈಸೆನ್ಸ್ ರದ್ದಾಗುತ್ತಾ? ವೈರಲ್ ಸುದ್ದಿಯ ಅಸಲಿಯತ್ತು ಇಲ್ಲಿದೆ!ನೇಪಾಳದಲ್ಲಿ ಭಾರಿ ಮಳೆಗೆ ಬೆಟ್ಟ ಕುಸಿದು 24 ಮಂದಿ ಸಾವು, 14 ಜನ ನಾಪತ್ತೆ ; ಭಯಾನಕ ವೀಡಿಯೋ ವೈರಲ್ |WATCH VIDEOUPI ಪೇಮೆಂಟ್‌ಗೆ ಮುನ್ನ ಎಚ್ಚರ! ಹಣ ಕಳುಹಿಸುವಾಗ ಈ ಮಾಹಿತಿ ನಮೂದಿಸುವುದು ಮುಖ್ಯಮತ್ತೆ ಜಾಗತಿಕ ಮಟ್ಟಕ್ಕೆ UPI: ಭಾರತದ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬೆಗೊ₹500ಕ್ಕೆ ಲಾಟರಿ ಟಿಕೆಟ್ ಖರೀದಿ.. ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ! ಗೆದ್ದ ಹಣ ಎಷ್ಟು ಗೊತ್ತಾ?ಚಲಿಸುತ್ತಿದ್ದ ಬಸ್‌ನಲ್ಲೇ ಗ್ಯಾಂಗ್‌ರೇಪ್; ನಿರ್ಭಯಾ ಪ್ರಕರಣ ಉಲ್ಲೇಖಿಸಿ ಸುಪ್ರೀಂಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆಸಚಿನ್‌ರ 100 ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೆಷ್ಟು ಶತಕ ಬೇಕು? ಲೆಕ್ಕಾಚಾರ ಹೀಗಿದೆ