LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ಚಲೋ ಪ್ರೇರಣೆಯಿಂದಲೇ ಕಾಂಗ್ರೆಸ್ ಪಾದಯಾತ್ರೆ: ಬಿವೈ ವಿಜಯೇಂದ್ರ

ಚಿತ್ರದುರ್ಗ: ಬಿಜೆಪಿ ನಡೆಸಿದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಪ್ರೇರಣೆಯಿಂದಲೇ ಇಂದು ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿರುವ ‘ಹಿಂದೂ ಮಹಾಗಣಪತಿ’ಯ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

“ಕೆಪಿಸಿಸಿ ಅಧ್ಯಕ್ಷರು ನನ್ನದೇ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ ಕೀರ್ತಿ ಶಿಕಾರಿಪುರಕ್ಕೆ ಸಲ್ಲುತ್ತದೆ. ಕೆಪಿಸಿಸಿ ಅಧ್ಯಕ್ಷರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ,” ಎಂದು ವಿಜಯೇಂದ್ರ ಹೇಳಿದರು.

ಹರಿಪ್ರಸಾದ್‌ಗೆ ವಿಜಯೇಂದ್ರ ತಿರುಗೇಟು

ತಮ್ಮ ರಾಜಕೀಯ ಅನುಭವದ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ವಿಜಯೇಂದ್ರ, “ನಾನು ಎಲ್‌‌ಕೆಜಿ ವಿದ್ಯಾರ್ಥಿ ಇರಬಹುದು, ಮೊದಲ ಸಲ ಶಾಸಕನಾಗಿರಬಹುದು.  ಆದರೆ ಹರಿಪ್ರಸಾದ್ ಅವರು ಪಿಎಚ್‌ಡಿ ಮಾಡಿದ್ದರೂ ಇದುವರೆಗೂ ನೇರ ಚುನಾವಣೆಯಲ್ಲಿ ಗೆದ್ದಿಲ್ಲ,” ಎಂದು ತಿವಿದರು.

“ಬ್ಯಾನರ್ ಹರಿದು ಹಾಕುವ ಕೀಳು ರಾಜಕಾರಣದ ಅಗತ್ಯ ನಮಗಿಲ್ಲ.
 
ಕೆಲವರು ಬ್ಯಾನರ್ ಹರಿದು ಹಾಕಿಸಿಕೊಂಡೇ ಪ್ರಚಾರ ಪಡೆಯುತ್ತಿದ್ದಾರೆ. ಅಂತಹ 420 ರಾಜಕಾರಣ ನಮಗೆ ಬೇಕಾಗಿಲ್ಲ,” ಎಂದು ಅವರು ಕಟುವಾಗಿ ಟೀಕಿಸಿದರು.

ಆರ್‌ಟಿಜಿಎಸ್ ಮೂಲಕ ಹಣ ಪಡೆದಿರುವ ಕುರಿತ ಹರಿಪ್ರಸಾದ್ ಅವರ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, “ಹರಿಪ್ರಸಾದ್ ಅವರು ತಮ್ಮ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಈ ಎಲ್ಲ ಆರೋಪಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. ನಾನು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ,” ಎಂದು ಸ್ಪಷ್ಟಪಡಿಸಿದರು.

“ಹರಿಪ್ರಸಾದ್ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯಕ್ರಮಗಳಿಗೂ ಅವರನ್ನು ಕರೆಯುತ್ತಿಲ್ಲ. ಹೀಗಾಗಿ ಪಾದಯಾತ್ರೆ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ,” ಎಂದು ವಿಜಯೇಂದ್ರ ಆರೋಪಿಸಿದರು.

ಮಠಾಧೀಶರ ಕುರಿತ ಸರ್ಕಾರದ ಹೇಳಿಕೆಗೆ ಆಕ್ಷೇಪ

ಮಠಾಧೀಶರು ಸರ್ಕಾರದ ಯೋಜನೆಗಳ ರಾಯಭಾರಿಗಳಾಗಬೇಕು ಎಂಬ ಹೇಳಿಕೆಗೆ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಬರಗಾಲವಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ಇಂದು ಜನರು ಸರ್ಕಾರಕ್ಕೆ ಥೂ, ಛೀ ಎಂದು ಧಿಕ್ಕಾರ ಕೂಗುತ್ತಿದ್ದಾರೆ. ಮಠಾಧೀಶರು ನನ್ನ ಸೇವೆ ಮಾಡಬೇಕೆಂದು ಹೇಳುತ್ತಿದ್ದಾರೆ. ಆದರೆ ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ,” ಎಂದು ಹೇಳಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ಪಶುವೈದ್ಯಾಧಿಕಾರಿ ಹುದ್ದೆಗೆ ₹40 ಲಕ್ಷ ಡೀಲ್: ED ತನಿಖೆಯಲ್ಲಿ ಬಹಿರಂಗBREAKING: KPSC ನೇಮಕಾತಿ ಅಕ್ರಮ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್, ಬಸವರಾಜ್ ಕನ್ನಾಲೆ 14 ದಿನ ED ವಶಕ್ಕೆರಾಜ್ಯದ ಜನತೆಗೆ ಮತ್ತೊಂದು ಶಾಕ್: ಶೀಘ್ರವೇ KSRTC ಬಸ್ ಟಿಕೆಟ್ ದರ ಹೆಚ್ಚಳ ಫಿಕ್ಸ್!ಅಶ್ವಿನೀ ದೇವತೆಗಳ ಬಗ್ಗೆ ಮಹತ್ವದ ಮಾಹಿತಿ ಓದಿಪೂರ್ವಜರಲ್ಲಿ ಎಷ್ಟು ವಿಧಗಳಿವೆ? ಇಲ್ಲಿದೆ ಮಾಹಿತಿಸಚಿವರು ಅಂದ್ರೆ ಹೀಗೆ ಇರಬೇಕು! ಒಂದೇ ಒಂದು ಮನವಿಗೆ ಕುಡಿಯುವ ನೀರಿನ ಸಮಸ್ಯೆ ಕ್ಲಿಯರ್!ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿ, ಬರ ಪರಿಹಾರ ಕಾಮಗಾರಿ ತಡೆಯಬೇಡಿ: ಸಿಇಒಗೆ MLC ರಮೇಶ್ ಬಾಬು ಪತ್ರ‘ನಾವು ಎಲ್ಲವನ್ನೂ ಕಳೆದುಕೊಂಡಿದ್ದೆವು’: ಮುಂಬೈನಲ್ಲಿ ಮನೆ ಕೊಳ್ಳುವ ತಂದೆಯ ಕನಸು ನೆನೆದು ಕಣ್ಣೀರಿಟ್ಟ ರೂಪಾಲಿ ಗಂಗೂಲಿ!ಸತತ 3 ದಿನ ಇಳಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂಗೆ ₹1.49 ಲಕ್ಷBREAKING : ಚುನಾವಣಾ ಆಯೋಗದ ವಿರುದ್ಧ INDIA ಬಣದ ಸಮರ; ಅ.2ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಘೋಷಣೆ