ಬೆಂಗಳೂರು: ಗಣೇಶ್ ನಚಿಕೇತು ಅವರನ್ನು ಸರ್ಕಾರದ 'ರಾಜ್ಯ ಮುಖ್ಯಸ್ಥರು - ಸಾರ್ವಜನಿಕ ಸಂಪರ್ಕ ಮತ್ತು ಸಂವಹನ' (State Head - PR & Communication) ಹುದ್ದೆಗೆ ನೇಮಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಕರ್ನಾಟಕ ಸರ್ಕಾರ ತಳ್ಳಿಹಾಕಿದ್ದು, ಈ ಸಂಬಂಧ ಸ್ಪಷ್ಟನೆ ನೀಡಿದೆ.
ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, "ಗಣೇಶ್ ನಚಿಕೇತು ಅವರನ್ನು ಅಂತಹ ಯಾವುದೇ ಹುದ್ದೆಗೆ ಸರ್ಕಾರ ನೇಮಿಸಿಲ್ಲ. ಅಷ್ಟೇ ಅಲ್ಲದೆ, ಸರ್ಕಾರದ ಯಾವುದೇ ಇಲಾಖೆಯಲ್ಲೂ ಕಾರ್ಯನಿರ್ವಹಿಸುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಿಲ್ಲ" ಎಂದು ಖಚಿತಪಡಿಸಿದ್ದಾರೆ.
ಕೆಲವು ಮಾಧ್ಯಮಗಳಲ್ಲಿ ಅವರ ನೇಮಕಾತಿ ಕುರಿತು ಸುಳ್ಳು ವರದಿಗಳು ಪ್ರಕಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಅಧಿಕೃತ ಸ್ಪಷ್ಟೀಕರಣ ನೀಡಲಾಗಿದೆ.
https://twitter.com/KarnatakaVarthe/status/2106365339453767833