LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೃಹಲಕ್ಷ್ಮಿ ಹಣ ಬೇಕಾ? ಯಜಮಾನಿ ಹೆಸರಲ್ಲೇ ಇರಬೇಕು ಸಿಮ್ ಕಾರ್ಡ್: ರಾಜ್ಯ ಸರ್ಕಾರದ ಹೊಸ ರೂಲ್ಸ್

ಮದ್ದೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ನಕಲಿ ಮತ್ತು ಅನರ್ಹ ಫಲಾನುಭವಿಗಳನ್ನು ತಡೆಗಟ್ಟುವ ಉದ್ದೇಶದಿಂದ ಮನೆಯ ಯಜಮಾನಿ ಹೆಸರಿನಲ್ಲೇ ಸಿಮ್ ಕಾರ್ಡ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಯೋಜನೆಯ 33ನೇ ಕಂತಿನ ಒಟ್ಟು 2,480 ಕೋಟಿ ರೂಪಾಯಿ ಅನುದಾನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಚುನಾವಣಾ ಭರವಸೆ ಈಡೇರಿಕೆ: ಇದುವರೆಗೆ ₹64,000 ಪಾವತಿ

ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ವೇಳೆ ಜನರಿಗೆ ನೀಡಿದ್ದ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ಆರ್ಥಿಕ ನೆರವು ನೀಡುವ ಭರವಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 1 ಕೋಟಿ 25 ಲಕ್ಷ ಅರ್ಹ ಮಹಿಳೆಯರಿಗೆ ಇದುವರೆಗೆ 32 ಕಂತುಗಳಲ್ಲಿ ತಲಾ ₹64,000 ಹಣವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, 'ನೋ ಕಮಿಷನ್ ನೋ ಕರಪ್ಷನ್' ನೀತಿಯಡಿ ಡಿಬಿಟಿ (DBT) ಮೂಲಕ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೃತಪಟ್ಟವರ ಖಾತೆಗೆ ₹117 ಕೋಟಿ ಜಮೆ: ನಿಯಮ ಬಿಗಿ

ಪರಿಶೀಲನೆ ವೇಳೆ ಸುಮಾರು 1.99 ಲಕ್ಷ ಫಲಾನುಭವಿ ಮಹಿಳೆಯರು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಬರೋಬ್ಬರಿ ₹117 ಕೋಟಿ ಹಣ ವರ್ಗಾವಣೆಯಾಗಿರುವುದು ಗ್ಯಾರಂಟಿ ಅನುಷ್ಠಾನ ಸಮಿತಿಯ ಗಮನಕ್ಕೆ ಬಂದಿತ್ತು. ಅಲ್ಲದೆ, ಕೆಲವೆಡೆ ಯಜಮಾನಿಯ ಹೆಸರಿನ ಹಣ ಪತಿಯ ಖಾತೆಗೆ ಹೋಗುತ್ತಿರುವುದು ಹಾಗೂ ರಾಜ್ಯದ ಹೊರಗಿನವರೂ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟಿ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು.

ಅನರ್ಹರ ತಡೆಗೆ 'ಸ್ವಂತ ಸಿಮ್' ಕಡ್ಡಾಯ ನಿಯಮ

ಸರ್ಕಾರದ ಯೋಜನೆಗಳು ಕೇವಲ ಕರ್ನಾಟಕದ ನೈಜ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಹಾಗೂ ಅಕ್ರಮಗಳನ್ನು ತಡೆಯಬೇಕು ಎಂಬ ಕಾರಣದಿಂದ ಸಿಮ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಸರ್ಕಾರದ ನೂತನ ಮಾನದಂಡದಂತೆ, ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಪಡೆಯಲು ಮನೆಯ ಯಜಮಾನಿಯೇ ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಸುಧಾರಣಾ ಕ್ರಮಗಳಿಂದಾಗಿ ಪ್ರಸ್ತುತ 1 ಕೋಟಿ 24 ಲಕ್ಷ ನೈಜ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ಹಣ ತಲುಪುತ್ತಿದ್ದು, ಆಗಸ್ಟ್‌ವರೆಗಿನ ಕಂತುಗಳು ಪಾವತಿಯಾಗಿವೆ. ಇದೀಗ 33ನೇ ಕಂತಿನ ₹2,480 ಕೋಟಿ ಹಣವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ದಿನೇಶ್ ಗೂಳಿಗೌಡ ವಿವರಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸಾಗರದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಬೈಕ್ ಜಾಥಾ: ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆಗೃಹಲಕ್ಷ್ಮಿ ಹಣ ಬೇಕಾ? ಯಜಮಾನಿ ಹೆಸರಲ್ಲೇ ಇರಬೇಕು ಸಿಮ್ ಕಾರ್ಡ್: ರಾಜ್ಯ ಸರ್ಕಾರದ ಹೊಸ ರೂಲ್ಸ್ರೇಷನ್‌ ಕಾರ್ಡ್‌ದಾರರಿಗೆ ಗುಡ್ ನ್ಯೂಸ್: ಮನೆಯಲ್ಲೇ ಮೊಬೈಲ್ ಮೂಲಕ ‘e-KYC’ಗೆ ‘ಅನ್ನ ಸೇವೆ’ ಆ್ಯಪ್ ಬಿಡುಗಡೆ!BIG NEWS: SIR ವೇಳೆ ಭಾರೀ ಎಡವಟ್ಟು: ಬೆಂಗಳೂರಿನಲ್ಲಿ ಒಂದೇ ಕುಟುಂಬದ 8 ಜನರ ಹೆಸರು ಡಿಲೀಟ್ಅಂತರ್ಜಲ ಮರುಪೂರಣಕ್ಕೆ ಜಲಮೂಲಗಳ ಬಳಕೆ; ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿಕಾರ್ಗಲ್‌ನಲ್ಲಿ ವನ್ಯಜೀವಿ ಸಪ್ತಾಹದ ಬೈಕ್ ಜಾಥಾಕ್ಕೆ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಚಾಲನೆ: ಪ್ರಾಣಿಗಳ ಸಂರಕ್ಷಣೆಗೆ ಕರೆಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಯಶಸ್ವಿ: ಶೇ.74ರಷ್ಟು ಅಭ್ಯರ್ಥಿಗಳು ಹಾಜರುಶಿರೋಮಣಿ ಅಕಾಲಿ ದಳದ ನಾಯಕನ ಗುಂಡಿಕ್ಕಿ ಹತ್ಯೆ: ಕಾರಿನ ಡ್ಯಾಶ್‌ಕ್ಯಾಮ್‌ ನಲ್ಲಿ ಸೆರೆಯಾಯ್ತು ದೃಶ್ಯ6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ‘ಲವ್ ಜಿಹಾದ್’, ಮತಾಂತರ ವಿರುದ್ಧ ಕಠಿಣ ಕಾನೂನು: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿಗಾಂಜಾ ಮತ್ತಿನಲ್ಲಿ ಯುವಕರ ದುಷ್ಕೃತ್ಯ: 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ