LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ಹೆಚ್ಚಳ

ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ನೀಡುವ ನಗದು ಬಹುಮಾನವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾರತ ಸೇರಿದಂತೆ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿರುವ ಸುಮಾರು 1,800 ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತಂದಿರುವ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ 2026 ಅನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ನಮ್ಮ ಭಾರತೀಯ ಕ್ರೀಡಾಪಟುಗಳೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಈ ಸಾಧನೆಯ ಹಿಂದೆ ಶ್ರಮಿಸಿರುವ ಕೋಚ್‌ಗಳು, ತರಬೇತುದಾರರು ಹಾಗೂ ವ್ಯವಸ್ಥಾಪಕರ ಸಮರ್ಪಣೆ ಮತ್ತು ಪರಿಶ್ರಮವನ್ನೂ ಅಭಿನಂದಿಸುತ್ತೇನೆ. ದೇಶದ ಒಟ್ಟು ಪದಕ ಗಳಿಕೆಗೆ ಕರ್ನಾಟಕದ ಕ್ರೀಡಾಪಟುಗಳೂ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಕ್ರೀಡಾಪಟುಗಳ ಪರಿಶ್ರಮ ಮತ್ತು ಸಾಧನೆಯನ್ನು ಗುರುತಿಸಿ, ಪದಕ ವಿಜೇತರಿಗೆ ನೀಡುವ ನಗದು ಬಹುಮಾನವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗೌರವಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ಅನ್ನು 33 ಬಾರಿ ಗೆದ್ದಿರುವ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸಿರುವುದಕ್ಕೆ ಅಭಿನಂದಿಸುತ್ತೇನೆ. ಕರ್ನಾಟಕಕ್ಕೆ ಈ ಅವಕಾಶ ನೀಡಿದ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕ್ರೀಡೆ ಎಂದರೆ ಕೇವಲ ಪದಕ ಗೆಲ್ಲುವುದಷ್ಟೇ ಅಲ್ಲ. ಶಿಸ್ತು, ದೃಢಸಂಕಲ್ಪ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕಲಿಸುತ್ತದೆ. ಪ್ರತಿಯೊಂದು ಗೆಲುವು ಹೆಮ್ಮೆ ತರುತ್ತದೆ, ಪ್ರತಿಯೊಂದು ಸೋಲು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಪಾಠವನ್ನು ಕಲಿಸುತ್ತದೆ ಎಂದರು.

ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಕ್ರೀಡಾಕೂಟವು ಶ್ರೇಷ್ಠ ಕ್ರೀಡಾ ಸಾಧನೆ ಮತ್ತು ನಿಜವಾದ ಕ್ರೀಡಾಸ್ಫೂರ್ತಿಯ ಸಂಭ್ರಮವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರ್, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ, ಹಿರಿಯ ಕ್ರೀಡಾ ಅಧಿಕಾರಿಗಳು, ಅಂತಾರಾಷ್ಟ್ರೀಯ ಸ್ಪರ್ಧಾಳುಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಆಹಾರ ದಸರಾ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳು

ಶಿವಮೊಗ್ಗ: ಶಿವಮೊಗ್ಗ ದಸರಾ -2026ರ ಪ್ರಯುಕ್ತ ಆಹಾರ ದಸರಾ ಸಮಿತಿ ವತಿಯಿಂದ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅ.15 ರಂದು ಸಂಜೆ 6 ಗಂಟೆಗೆ, ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಆಹಾರ ಮೇಳ – ಮಲೆನಾಡ ಸಾಂಪ್ರದಾಯಿಕ ವಿಶಿಷ್ಟ ಅಡುಗೆಗಳ ಪ್ರದರ್ಶನ ಮತ್ತು ಮಾರಾಟ.

ಅ.16 ರಂದು ಬೆಳಗ್ಗೆ 10.00ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ ಸಹೋದರ-ಸಹೋದರಿಯರಿಮದ ಶೇಂಗಾ ಮತ್ತು ಕೊಬ್ಬರಿ ಉಪಯೋಗಿಸಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಅ.17 ರಂದು ಬೆಳಿಗ್ಗೆ 10.00ಕ್ಕೆ ಶಿವಪ್ಪ ನಾಯಕ ಸರ್ಕಲ್‌ನಲ್ಲಿ ಸಂಚಾರಿ ಪೊಲೀಸ್‌ರಿಗೆ ಹಾಗೂ ಸಾರ್ವಜನಿಕರಿಗೆ ಇಡ್ಲಿ ಮತ್ತು ಹಣ್ಣು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಆಸಕ್ತರು ಸ್ಪರ್ಧೆಗಳ ನೋಂದಣೆಗಾಗಿ ಮೊ.ಸಂ.: 9886033982/ 9902525752/ 8123214210 ಗಳನ್ನು ಸಂಪರ್ಕಿಸುವಂತೆ ಆಹಾರ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ನಿಮ್ಮ ಸರಿಯಾದ ಜಾಗ ಜೈಲು’..! ನಟ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂಕೋರ್ಟ್ ತೀವ್ರ ತರಾಟೆಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ: ಕೇಂದ್ರ ಸರ್ಕಾರದಿಂದ ಅಧಿಸೂಚನೆಬದಲಾಯಿಸಿದ ಫಾರ್ಮ್-6ಗೆ ನಾವು ಅನುಮೋದನೆ ನೀಡಿಲ್ಲ..! ಸುಪ್ರೀಂಕೋರ್ಟ್ ಖಡಕ್ ಸ್ಪಷ್ಟನೆಬಾಲಕಿಯ ಮೇಲೆ ತಂದೆಯಿಂದ ಅತ್ಯಾಚಾರ ಆರೋಪ; ತಾಯಿ ನಗ್ನ ಚಿತ್ರ ತೆಗೆದಿದ್ದಾಳೆ ಎಂದು ದೂರು.!BREAKING: ನಟ ಶಿವರಾಜ್ ಕುಮಾರ್ ಸನಿಹದಲ್ಲೇ ಪಟಾಕಿ ಸ್ಫೋಟ: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಹ್ಯಾಟ್ರಿಕ್ ಹೀರೋ ಪಾರುರೈತರಿಗೆ ಸಿಹಿಸುದ್ದಿ: ಮೋಜಿಣಿ ಜಮೀನು ಅಳತೆ ಪರಿಷ್ಕೃತ ಶುಲ್ಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಬ್ರೇಕ್ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ಟ್ರೇಲರ್ ರಿಲೀಸ್ |WATCH VIDEOಕಾಂಗೋ ನದಿಯಲ್ಲಿ ಎರಡು ದೋಣಿ ಡಿಕ್ಕಿ: ಕನಿಷ್ಠ 30 ಮಂದಿ ಸಾವು, ಹಲವರು ನಾಪತ್ತೆBREAKING : ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ ; 28,000 ಅಡಿ ಏಕಾಏಕಿ ಕುಸಿತ, ತುರ್ತು ಪರಿಸ್ಥಿತಿಬಾಲ್ಯದಲ್ಲಿ ಲೈಂಗಿಕ ಕಿರುಕುಳ.. 20ನೇ ವಯಸ್ಸಿನಲ್ಲಿ ತಾತನ ವಿರುದ್ಧ ಪ್ರತೀಕಾರ..! ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹತ್ಯೆ