LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಗ್‌ಔಟ್‌ನಲ್ಲಿದ್ದ ಕೊಹ್ಲಿ ಗಮನ ಸೆಳೆಯಲು ವಿಚಿತ್ರ ಸಾಹಸ: ವಿಂಡೀಸ್ ಪಂದ್ಯದಲ್ಲಿ ನಡೆದ ಸ್ವಾರಸ್ಯಕರ ಘಟನೆ!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ಮತ್ತೊಂದು ಕುತೂಹಲಕಾರಿ ಮತ್ತು ತಮಾಷೆಯ ಘಟನೆ ನಡೆದಿದೆ. ಡಗ್‌ಔಟ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಗಮನ ಸೆಳೆಯಲು ಅಭಿಮಾನಿಯೊಬ್ಬ ಮಾಡಿದ ಕೆಲಸ ಹಾಗೂ ಅದಕ್ಕೆ ಕೊಹ್ಲಿ ನೀಡಿದ ತಕ್ಷಣದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಕ್ರಿಕೆಟ್‌‌ಪ್ರಿಯರು ವಿರಾಟ್ ಕೊಹ್ಲಿ ಹೆಸರು ಹೇಳಿ ಜೋರಾಗಿ ಘೋಷಣೆ ಕೂಗುತ್ತಿದ್ದರು. ಈ ವೇಳೆ ಕೊಹ್ಲಿ ಅವರ ಗಮನ ಸೆಳೆಯಲು ಬಯಸಿದ ಅಭಿಮಾನಿಯೊಬ್ಬ, ತಕ್ಷಣವೇ ತನ್ನ ಕಾಲಿನಲ್ಲಿದ್ದ ಶೂ ಬಿಚ್ಚಿ ಮೇಲಕ್ಕೆತ್ತಿ ತೋರಿಸಿದ್ದಾನೆ. ಆ ಶೂ ಕೊಹ್ಲಿ ಅವರ ಸ್ವಂತ ಬ್ರ್ಯಾಂಡ್ ಆದ ‘ಒನ್-೮’ (one8) ಕಂಪನಿಯದ್ದಾಗಿತ್ತು.

ತನ್ನ ಬ್ರ್ಯಾಂಡ್‌ನ ಶೂವನ್ನು ಅಭಿಮಾನಿ ಹೆಮ್ಮೆಯಿಂದ ಪ್ರದರ್ಶಿಸುವುದನ್ನು ಕಂಡ ಕೊಹ್ಲಿ, ಆ ಕ್ಷಣದಲ್ಲೇ ಆತನತ್ತ ನೋಡಿ ವಿಶೇಷ ರಿಯಾಕ್ಷನ್ ನೀಡಿದ್ದಾರೆ. ಡಗ್‌ಔಟ್‌ನಲ್ಲಿ ನಡೆದ ಈ ಸ್ವಾರಸ್ಯಕರ ಘಟನೆಯ ವೀಡಿಯೊ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕೊಹ್ಲಿ ಅವರ ಜನಪ್ರಿಯತೆ ಹಾಗೂ ಅವರ ಸಾದಾಸೀದಾ ಶೈಲಿಯನ್ನು ಕೊಂಡಾಡುತ್ತಿದ್ದಾರೆ. ಮೈದಾನದ ಹೊರಗಿದ್ದರೂ ಕೊಹ್ಲಿ ಪ್ರೇಕ್ಷಕರ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸಾಗರದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಬೈಕ್ ಜಾಥಾ: ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆಗೃಹಲಕ್ಷ್ಮಿ ಹಣ ಬೇಕಾ? ಯಜಮಾನಿ ಹೆಸರಲ್ಲೇ ಇರಬೇಕು ಸಿಮ್ ಕಾರ್ಡ್: ರಾಜ್ಯ ಸರ್ಕಾರದ ಹೊಸ ರೂಲ್ಸ್ರೇಷನ್‌ ಕಾರ್ಡ್‌ದಾರರಿಗೆ ಗುಡ್ ನ್ಯೂಸ್: ಮನೆಯಲ್ಲೇ ಮೊಬೈಲ್ ಮೂಲಕ ‘e-KYC’ಗೆ ‘ಅನ್ನ ಸೇವೆ’ ಆ್ಯಪ್ ಬಿಡುಗಡೆ!BIG NEWS: SIR ವೇಳೆ ಭಾರೀ ಎಡವಟ್ಟು: ಬೆಂಗಳೂರಿನಲ್ಲಿ ಒಂದೇ ಕುಟುಂಬದ 8 ಜನರ ಹೆಸರು ಡಿಲೀಟ್ಅಂತರ್ಜಲ ಮರುಪೂರಣಕ್ಕೆ ಜಲಮೂಲಗಳ ಬಳಕೆ; ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿಕಾರ್ಗಲ್‌ನಲ್ಲಿ ವನ್ಯಜೀವಿ ಸಪ್ತಾಹದ ಬೈಕ್ ಜಾಥಾಕ್ಕೆ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಚಾಲನೆ: ಪ್ರಾಣಿಗಳ ಸಂರಕ್ಷಣೆಗೆ ಕರೆಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಯಶಸ್ವಿ: ಶೇ.74ರಷ್ಟು ಅಭ್ಯರ್ಥಿಗಳು ಹಾಜರುಶಿರೋಮಣಿ ಅಕಾಲಿ ದಳದ ನಾಯಕನ ಗುಂಡಿಕ್ಕಿ ಹತ್ಯೆ: ಕಾರಿನ ಡ್ಯಾಶ್‌ಕ್ಯಾಮ್‌ ನಲ್ಲಿ ಸೆರೆಯಾಯ್ತು ದೃಶ್ಯ6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ‘ಲವ್ ಜಿಹಾದ್’, ಮತಾಂತರ ವಿರುದ್ಧ ಕಠಿಣ ಕಾನೂನು: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿಗಾಂಜಾ ಮತ್ತಿನಲ್ಲಿ ಯುವಕರ ದುಷ್ಕೃತ್ಯ: 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ