LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಅವರು ಮಾತಡಲ್ಲ, ಆಟದಲ್ಲೇ ಉತ್ತರಿಸ್ತಾರೆ’: ಕ್ಯಾಪ್ಟನ್ ಶಾಯ್ ಹೋಪ್‌ ಬಗ್ಗೆ ಕೊಚ್ ಸಮಿ ಭಾವುಕ ನುಡಿ

ಭಾರತದ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ತಂಡಕ್ಕೆ ಚಾರಿತ್ರಿಕ ಗೆಲುವು ತಂದುಕೊಟ್ಟ ನಾಯಕ ಶಾಯ್ ಹೋಪ್ ಅವರ ಆಟವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಡ್ಯಾರೆನ್ ಸಮಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಂಡಕ್ಕಾಗಿ ಹೋಪ್ ನೀಡುತ್ತಿರುವ ಕೊಡುಗೆಗೆ ಸೂಕ್ತವಾದ ಮೆಚ್ಚುಗೆ ಹಾಗೂ ಶ್ರೇಯಸ್ಸು ಸಿಗುತ್ತಿಲ್ಲ ಎಂದು ಸಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದ ವೇಳೆ ಗಾಯಗೊಂಡ ಜ್ಯುವೆಲ್ ಆಂಡ್ರ್ಯೂಸ್ ಬ್ಯಾಟಿಂಗ್ ಮಾಡಲು ಸಾಧ್ಯವಾಗದ ಕಾರಣ, ಐವತ್ತು ಓವರ್‌ಗಳ ಕಾಲ ವಿಕೆಟ್ ಕೀಪಿಂಗ್ ಮಾಡಿದ್ದ ಶಾಯ್ ಹೋಪ್, ಸ್ವತಃ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದರು. ಕೊನೆಯವರೆಗೆ ಅಜೇಯವಾಗಿ ಉಳಿದು ಪಂದ್ಯವನ್ನು ಮುಗಿಸಿದ ಹೋಪ್, ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎರಡು ಬಾರಿಯ ಟಿ೨೦ ವಿಶ್ವಕಪ್ ವಿಜೇತ ನಾಯಕ ಡ್ಯಾರೆನ್ ಸಮಿ, “ಹೋಪ್ ವಿಂಡೀಸ್ ತಂಡದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸುತ್ತಿದ್ದಾರೆ. ಐವತ್ತು ಓವರ್ ಕೀಪಿಂಗ್ ಮಾಡಿ ತಕ್ಷಣ ಬ್ಯಾಟಿಂಗ್‌‌ಗೆ ಇಳಿದು ಇಂತಹ ದೊಡ್ಡ ಇನಿಂಗ್ಸ್ ಆಡುವುದು ಸಾಮಾನ್ಯ ವಿಷಯವಲ್ಲ. ಅವರು ಹೆಚ್ಚು ಮಾತನಾಡುವುದಿಲ್ಲ, ಆದರೆ ತಮ್ಮ ಅದ್ಭುತ ಪ್ರದರ್ಶನದ ಮೂಲಕವೇ ತಂಡಕ್ಕೆ ಮಾದರಿಯಾಗಿದ್ದಾರೆ” ಎಂದು ಬಣ್ಣಿಸಿದರು.

ವಿಶ್ವದ ಪ್ರಬಲ ಭಾರತ ತಂಡದ ವಿರುದ್ಧ ನಮ್ಮ ಆಟಗಾರರು ಸ್ಥಿರ ಪ್ರದರ್ಶನ ನೀಡುವ ಮೂಲಕ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ತಂಡದ ಬ್ಯಾಟರ್‌ಗಳು ನೀಡಿದ ಈ ಪ್ರದರ್ಶನ ಮತ್ತು ಜವಾಬ್ದಾರಿಯುತ ಆಟ ವಿಂಡೀಸ್ ಕ್ರಿಕೆಟ್‌ಗೆ ಹೊಸ ಭರವಸೆ ನೀಡಿದೆ ಎಂದು ಸಮಿ ಹರ್ಷ ವ್ಯಕ್ತಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸಾಗರದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಬೈಕ್ ಜಾಥಾ: ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆಗೃಹಲಕ್ಷ್ಮಿ ಹಣ ಬೇಕಾ? ಯಜಮಾನಿ ಹೆಸರಲ್ಲೇ ಇರಬೇಕು ಸಿಮ್ ಕಾರ್ಡ್: ರಾಜ್ಯ ಸರ್ಕಾರದ ಹೊಸ ರೂಲ್ಸ್ರೇಷನ್‌ ಕಾರ್ಡ್‌ದಾರರಿಗೆ ಗುಡ್ ನ್ಯೂಸ್: ಮನೆಯಲ್ಲೇ ಮೊಬೈಲ್ ಮೂಲಕ ‘e-KYC’ಗೆ ‘ಅನ್ನ ಸೇವೆ’ ಆ್ಯಪ್ ಬಿಡುಗಡೆ!BIG NEWS: SIR ವೇಳೆ ಭಾರೀ ಎಡವಟ್ಟು: ಬೆಂಗಳೂರಿನಲ್ಲಿ ಒಂದೇ ಕುಟುಂಬದ 8 ಜನರ ಹೆಸರು ಡಿಲೀಟ್ಅಂತರ್ಜಲ ಮರುಪೂರಣಕ್ಕೆ ಜಲಮೂಲಗಳ ಬಳಕೆ; ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿಕಾರ್ಗಲ್‌ನಲ್ಲಿ ವನ್ಯಜೀವಿ ಸಪ್ತಾಹದ ಬೈಕ್ ಜಾಥಾಕ್ಕೆ ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಚಾಲನೆ: ಪ್ರಾಣಿಗಳ ಸಂರಕ್ಷಣೆಗೆ ಕರೆಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಯಶಸ್ವಿ: ಶೇ.74ರಷ್ಟು ಅಭ್ಯರ್ಥಿಗಳು ಹಾಜರುಶಿರೋಮಣಿ ಅಕಾಲಿ ದಳದ ನಾಯಕನ ಗುಂಡಿಕ್ಕಿ ಹತ್ಯೆ: ಕಾರಿನ ಡ್ಯಾಶ್‌ಕ್ಯಾಮ್‌ ನಲ್ಲಿ ಸೆರೆಯಾಯ್ತು ದೃಶ್ಯ6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ‘ಲವ್ ಜಿಹಾದ್’, ಮತಾಂತರ ವಿರುದ್ಧ ಕಠಿಣ ಕಾನೂನು: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿಗಾಂಜಾ ಮತ್ತಿನಲ್ಲಿ ಯುವಕರ ದುಷ್ಕೃತ್ಯ: 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ