LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂ ಸ್ಪರ್ಷ: ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!

ಕಲಬುರಗಿ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ತರಬೇತಿ ವಿಮಾನವೊಂದು ರೈತರ ಕೃಷಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿರುವ ಘಟನೆ ಕಲಬುರಗಿ ವಿಮಾನ ನಿಲ್ದಾಣದ ಸಮೀಪ ಮಂಗಳವಾರ ಸಂಭವಿಸಿದೆ.

ಪೈಲಟ್ ತೋರಿದ ಅದ್ಭುತ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಕಾಶದಲ್ಲೇ ತಾಂತ್ರಿಕ ದೋಷ: ತೊಗರಿ ಹೊಲದಲ್ಲಿ ಸುರಕ್ಷಿತ ಲ್ಯಾಂಡಿಂಗ್

ಕಲಬುರಗಿ ವಿಮಾನ ನಿಲ್ದಾಣದಿಂದ ನಿಯಮಿತ ಹಾರಾಟ ತರಬೇತಿಗಾಗಿ ಹೊರಟಿದ್ದ ಲಘು ತರಬೇತಿ ವಿಮಾನದಲ್ಲಿ ಆಕಾಶದಲ್ಲಿದ್ದಾಗಲೇ ಏಕಾಏಕಿ ಗಂಭೀರ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ರನ್‌ವೇ ತಲುಪುವುದು ಅಸಾಧ್ಯವೆಂದು ಮನಗಂಡ ಪೈಲಟ್ ಹಾಗೂ ತರಬೇತುದಾರ ಸಿಬ್ಬಂದಿ, ತಕ್ಷಣವೇ ಸಮಯಪ್ರಜ್ಞೆ ಮೆರೆದು ವಿಮಾನ ನಿಲ್ದಾಣದ ಸನಿಹದಲ್ಲೇ ಇದ್ದ ರೈತರ ಹಸಿರು ತೊಗರಿ ಹೊಲದತ್ತ ವಿಮಾನವನ್ನು ತಿರುಗಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಕೃಷಿ ಭೂಮಿಯಲ್ಲಿ ವಿಮಾನ ಇಳಿದಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಧಾವಿಸಿದ ತನಿಖಾ ತಂಡ ಮತ್ತು ಪೊಲೀಸರು

ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಆತಂಕದಿಂದ ಜಮೀನಿನತ್ತ ಧಾವಿಸಿದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಮಾನದಲ್ಲಿ ಎದುರಾದ ಎಂಜಿನ್ ವೈಫಲ್ಯ ಅಥವಾ ನಿಯಂತ್ರಣ ಕೊರತೆಯ ನಿಖರ ಕಾರಣ ತಿಳಿಯಲು ತಾಂತ್ರಿಕ ತನಿಖೆ ಆರಂಭಿಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಪಂಜಾಬ್ ಸಿಎಂ ‘ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂ ಸ್ಪರ್ಷ: ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆಗೆ ನೇರ ನೇಮಕಾತಿ: ಸಾಧಕ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿBIG BREAKING: ಕೊನೆಗೂ ರಾಜ್ಯದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್ | ZP, TP Electionಸಾಗರ, ಹೊಸನಗರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ: ಸಚಿವ ಮಧು ಬಂಗಾರಪ್ಪಗೆ ರಾಜ್ಯ ರೈತ ಸಂಘ ಮನವಿGOOD NEWS: ಮೈಸೂರು ದಸರಾ ಹಬ್ಬದ ಪ್ರಯುಕ್ತ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರಮಕ್ಕಳ ರಕ್ಷಣಾ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ: ಶಿವಮೊಗ್ಗಕ್ಕೆ ಆಯೋಗದ ಸದಸ್ಯರ ಭೇಟಿಬೆಂಗಳೂರು – ಬೆಳಗಾವಿ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲುಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್‌ಗೆ ಯತ್ನ?: ಪೊಲೀಸ್ ಕಮಿಷನರ್‌ಗೆ MLC ರಮೇಶ್ ಬಾಬು ದೂರುರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ