LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ ನಿಮ್ಮ ಕೊಡುಗೆ: ದಿಗ್ಗಜ ಮೆಸ್ಸಿ ಅಂತಾರಾಷ್ಟ್ರೀಯ ಪಂದ್ಯಗಳ ವಿದಾಯಕ್ಕೆ ರೊನಾಲ್ಡೊ ಸಲ್ಯೂಟ್

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿರುವ ಅರ್ಜೆಂಟೀನಾದ ಮಹಾನ್ ಆಟಗಾರ ಲೈಯೊನೆಲ್ ಮೆಸ್ಸಿಗೆ ಅವರ ಸಾರ್ವಕಾಲಿಕ ಸ್ಪರ್ಧಿ ಹಾಗೂ ಪೋರ್ಚುಗಲ್ ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ ಭಾವನಾತ್ಮಕವಾಗಿ ಗೌರವ ಸಲ್ಲಿಸಿದ್ದಾರೆ. ದೇಶಕ್ಕಾಗಿ ನೀಡಿರುವ ಕೊಡುಗೆ ಮತ್ತು ಮೆಸ್ಸಿ ನಿರ್ಮಿಸಿರುವ ಇತಿಹಾಸ ಶಾಶ್ವತವಾಗಿ ಉಳಿಯಲಿದೆ ಎಂದು ರೊನಾಲ್ಡೊ ಹೊಗಳಿದ್ದಾರೆ.

ಬುಯನೋಸ್ ಐರಿಸ್‌ನಲ್ಲಿ ಬೆನಿನ್ ವಿರುದ್ಧ ನಡೆದ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೆಸ್ಸಿ ಒಂದು ಗೋಲು ಗಳಿಸಿ, ಎರಡು ಗೋಲುಗಳಿಗೆ ನೆರವಾಗುವ ಮೂಲಕ ಅರ್ಜೆಂಟೀನಾಗೆ 3-0 ಅಂತರದ ಭರ್ಜರಿ ಜಯ ತಂದುಕೊಟ್ಟಿದ್ದರು. ಈ ಸ್ಮರಣೀಯ ಪಂದ್ಯದ ನಂತರ ಮೆಸ್ಸಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದರು.

ಮೆಸ್ಸಿ ಅವರ ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಕ್ರಿಸ್ಟಿಯಾನೋ ರೊನಾಲ್ಡೊ, “ವರ್ಷಗಳ ಕಾಲ ದೇಶಕ್ಕಾಗಿ ಆಡಿದ ನಿಮ್ಮ ಶ್ರಮ ಮತ್ತು ನೀವು ಬರೆದ ಇತಿಹಾಸ ಎಂದೆಂದಿಗೂ ಅಮರ. ಅರ್ಜೆಂಟೀನಾ ಪರ ನೀವು ಸಾಧಿಸಿದ್ದಕ್ಕೆ ನನ್ನ ಹೃದಯಪೂರ್ವಕ ಗೌರವಗಳು” ಎಂದು ಬರೆದು ಮೆಸ್ಸಿಗೆ ಶುಭಾಶಯ ಕೋರಿದ್ದಾರೆ.

ತಮ್ಮ ವಿದಾಯದ ಪತ್ರದಲ್ಲಿ ಮೆಸ್ಸಿ, “ದೇಶದ ಜರ್ಸಿ ಧರಿಸಿ ಆಡುವುದನ್ನು ನಾನು ಈಗಾಗಲೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಾಲು ಸಾಲು ಸೋಲು ಗೆಲುವುಗಳ ನಡುವೆ ಸಾಗಿದ ಈ ಪಯಣ ಪ್ರತಿಯೊಂದು ಹೆಜ್ಜೆಯಲ್ಲೂ ಅರ್ಥಪೂರ್ಣವಾಗಿತ್ತು” ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ ಕುಟುಂಬ, ಸಹಪಾಠಿಗಳು, ಅಭಿಮಾನಿಗಳು, ತರಬೇತುದಾರರು ಹಾಗೂ ದಿವಂಗತ ದಿಗ್ಗಜ ಡಿಯೋಗೋ ಮರಡೋನಾ ಅವರಿಗೆ ಮೆಸ್ಸಿ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

ಅರ್ಜೆಂಟೀನಾ ಪರ 208 ಪಂದ್ಯಗಳನ್ನಾಡಿ 126 ಗೋಲು ಗಳಿಸಿರುವ ಮೆಸ್ಸಿ, ಎರಡು ಕೊಪಾ ಅಮೆರಿಕ ಹಾಗೂ ಒಂದು ಫಿಫಾ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. 2026ರ ವಿಶ್ವಕಪ್‌ನಲ್ಲಿ 8 ಗೋಲು ಹಾಗೂ 4 ಅಸಿಸ್ಟ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದ ಮೆಸ್ಸಿ, ಇದೀಗ ಇಂಟರ್ ಮಿಯಾಮಿ ಕ್ಲಬ್ ಪರ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
H-1B ವೀಸಾ ಮೇಲೆ ಅಮೆರಿಕ ಕಠಿಣ ಕ್ರಮ: ಗ್ರೀನ್ ಕಾರ್ಡ್ ನಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳ ಅಮಾನತುಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿಅ.8ರಿಂದ ಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿನಾಳೆ ತುಮರಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲನ್ಯಾಸರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಜಾಗರೂಕರಾಗಿರಲು ಭಾರತೀಯರಿಗೆ MEA ಮಹತ್ವದ ಸಲಹೆಚುನಾವಣಾ ಆಯೋಗ, ಇತರೆ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವ ಯತ್ನ ವಿರುದ್ಧ 42 ಮಾಜಿ ನ್ಯಾಯಾಧೀಶರಿಂದ ಬಹಿರಂಗ ಪತ್ರಶಾಸಕರ ಭವನಕ್ಕೆ ಉಪಸಭಾಪತಿ ಡಾ.ಉಮಾಶ್ರೀ ದಿಢೀರ್‌ ಭೇಟಿ, ಪರಿಶೀಲನೆಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: BMTC ಪ್ರತಿಷ್ಠಿತ 'ಚೇಂಜ್ ಮೇಕರ್ ಅವಾರ್ಡ್' ಗರಿರೇಣುಕಾಸ್ವಾಮಿ ಹತ್ಯೆ ಕೇಸ್: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್ಕೆನಡಾದ ಲೇಖಕಿ ಅನ್ನೆ ಕಾರ್ಸನ್ ಗೆ ಒಲಿದ ಸಾಹಿತ್ಯದ ನೊಬೆಲ್ ಪ್ರಶಸ್ತಿ