LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿ

ಸಾಗರ: ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ‘ಜೀವನ್ಮುಖಿ’ ಸಂಘಟನೆಯು ತನ್ನ ‘ಮುಂದಣ ಹೆಜ್ಜೆ - 12’ ಸರಣಿಯ ಅಂಗವಾಗಿ ಇಂದಿನಿಂದ ಆಯೋಜಿಸಿರುವ ಮೂರು ದಿನಗಳ ವಿಶೇಷ ಕಸೂತಿ ತರಬೇತಿ ಕಾರ್ಯಾಗಾರ ‘ದಾರ-ಚಿತ್ತಾರ’ಕ್ಕೆ ನಗರದಲ್ಲಿ ಚಾಲನೆ ದೊರೆತಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಸ್.ಪಿ.ಎಂ. ರಸ್ತೆಯಲ್ಲಿರುವ ‘ಚರಕ’ ಮಳಿಗೆಯಲ್ಲಿ ಅಕ್ಟೋಬರ್ 8ರ ಇಂದಿನಿಂದ ಅಕ್ಟೋಬರ್ 10 ರವರೆಗೆ ಈ ವಿಶಿಷ್ಟ ಕಲಾ ಕಾರ್ಯಾಗಾರ ನಡೆಯಲಿದೆ.

ಹಿರಿಯ ಕಸೂತಿ ಕಲಾವಿದೆ ದೇವೀರಮ್ಮ ವೀರಪ್ಪ ಅವರಿಂದ ಉದ್ಘಾಟನೆ

ಇಂದು ನಡೆದ ಸಮಾರಂಭದಲ್ಲಿ 1970ರ ದಶಕದಲ್ಲೇ ಕಸೂತಿ ಕಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಮೈದೊಳಲಿನ ಹಿರಿಯರಾದ ಡಿ. ಎಚ್. ದೇವೀರಮ್ಮ ವೀರಪ್ಪ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.

ಹೆಗ್ಗೋಡಿನ ಖ್ಯಾತ ‘ಚರಕ’ ಸಂಸ್ಥೆಯ ಕಸೂತಿ ವಿಭಾಗದ ಮುಖ್ಯಸ್ಥರಾದ ಸತ್ಯವತಿ ಎಸ್. ಎನ್. ಅವರು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನ ನೀಡಲಿದ್ದಾರೆ.

20 ಮಹಿಳೆಯರಿಗೆ ಪ್ರಾಯೋಗಿಕ ತರಬೇತಿ

ನಶಿಸಿಹೋಗುತ್ತಿರುವ ಪಾರಂಪರಿಕ ಕಸೂತಿ ಕಲೆಗೆ ಮರುಜೀವ ನೀಡುವುದು ಹಾಗೂ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗದ ಹಾದಿ ತೋರಿಸುವುದು ಈ ಶಿಬಿರದ ಮುಖ್ಯ ಆಶಯವಾಗಿದೆ.

ಈ ಮೂರು ದಿನಗಳ ಕಾರ್ಯಾಗಾರದಲ್ಲಿ ಸಾಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಆಯ್ಕೆಯಾದ 20 ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಸಾಂಪ್ರದಾಯಿಕ ಕಲೆಯ ಸೌಂದರ್ಯವನ್ನು ಕರಗತ ಮಾಡಿಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
H-1B ವೀಸಾ ಮೇಲೆ ಅಮೆರಿಕ ಕಠಿಣ ಕ್ರಮ: ಗ್ರೀನ್ ಕಾರ್ಡ್ ನಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳ ಅಮಾನತುಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿಅ.8ರಿಂದ ಸಾಗರದಲ್ಲಿ ‘ಜೀವನ್ಮುಖಿ’ ವತಿಯಿಂದ ‘ದಾರ-ಚಿತ್ತಾರ’ ಕಸೂತಿ ತರಬೇತಿ ಶಿಬಿರ: ಮಹಿಳೆಯರ ಸ್ವಾವಲಂಬನೆಗೆ ಮುನ್ನುಡಿನಾಳೆ ತುಮರಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಿಲನ್ಯಾಸರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಜಾಗರೂಕರಾಗಿರಲು ಭಾರತೀಯರಿಗೆ MEA ಮಹತ್ವದ ಸಲಹೆಚುನಾವಣಾ ಆಯೋಗ, ಇತರೆ ಸಾಂವಿಧಾನಿಕ ಸಂಸ್ಥೆಗಳ ದುರ್ಬಲಗೊಳಿಸುವ ಯತ್ನ ವಿರುದ್ಧ 42 ಮಾಜಿ ನ್ಯಾಯಾಧೀಶರಿಂದ ಬಹಿರಂಗ ಪತ್ರಶಾಸಕರ ಭವನಕ್ಕೆ ಉಪಸಭಾಪತಿ ಡಾ.ಉಮಾಶ್ರೀ ದಿಢೀರ್‌ ಭೇಟಿ, ಪರಿಶೀಲನೆಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: BMTC ಪ್ರತಿಷ್ಠಿತ 'ಚೇಂಜ್ ಮೇಕರ್ ಅವಾರ್ಡ್' ಗರಿರೇಣುಕಾಸ್ವಾಮಿ ಹತ್ಯೆ ಕೇಸ್: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್ಕೆನಡಾದ ಲೇಖಕಿ ಅನ್ನೆ ಕಾರ್ಸನ್ ಗೆ ಒಲಿದ ಸಾಹಿತ್ಯದ ನೊಬೆಲ್ ಪ್ರಶಸ್ತಿ